ನವದೆಹಲಿ: ರಷ್ಯಾಧ್ಯಕ್ಷ ವ್ಲಾಡಿಮಿರ್ ಪುಟಿನ್ ಡಿಸೆಂಬರ್ ಮೊದಲ ವಾರದಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಭಾರತೀಯ ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದ್ದು, ಡಿಸೆಂಬರ್ 6ರಂದು ಅವರು ಆಗಮಿಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿರುವ ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್ ಬಾಗ್ಚಿ, ಉಭಯ ದೇಶಗಳ ನಡುವಿನ 21ನೇ ವಾರ್ಷಿಕ ಶೃಂಗಸಭೆಯಲ್ಲಿ ಭಾಗಿಯಾಗಲು ಅವರು ಭಾರತಕ್ಕೆ ಬರುತ್ತಿದ್ದು, ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಉಭಯ ನಾಯಕರ ಭೇಟಿ ವೇಳೆ ಹಲವು ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆಯಿದೆ. S400 ಏರ್ ಡಿಫೆನ್ಸ್ ಸಿಸ್ಟಮ್‌ನ ಮೊದಲ ಬ್ಯಾಚ್ ಈ ವರ್ಷದ ಅಂತ್ಯದ ವೇಳೆಗೆ ಭಾರತ ತಲುಪಲಿದ್ದು ಈ ಕುರಿತು ಶೃಂಗಸಭೆಯಲ್ಲಿ ಮಾತುಕತೆ ನಡೆಯಲಿದೆ.
-
Russian President Vladimir Putin will visit India on Dec 6, 2021. During the negotiations with PM Narendra Modi, it is planned to discuss further development of relations of the special and privileged strategic partnership between the two countries: Russian Embassy pic.twitter.com/0hO2FcY12L
— ANI (@ANI) November 26, 2021 " class="align-text-top noRightClick twitterSection" data="
">Russian President Vladimir Putin will visit India on Dec 6, 2021. During the negotiations with PM Narendra Modi, it is planned to discuss further development of relations of the special and privileged strategic partnership between the two countries: Russian Embassy pic.twitter.com/0hO2FcY12L
— ANI (@ANI) November 26, 2021Russian President Vladimir Putin will visit India on Dec 6, 2021. During the negotiations with PM Narendra Modi, it is planned to discuss further development of relations of the special and privileged strategic partnership between the two countries: Russian Embassy pic.twitter.com/0hO2FcY12L
— ANI (@ANI) November 26, 2021
ಮಹತ್ವದ ಮಾತುಕತೆ ವೇಳೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿದೇಶಾಂಗ ಸಚಿವ ಜೈಶಂಕರ್ ಉಪಸ್ಥಿತರಿರಲಿದ್ದು, ರಷ್ಯಾದ ವಿದೇಶಾಂಗ ಹಾಗೂ ರಕ್ಷಣಾ ಸಚಿವರು ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಈ ಹಿಂದೆ 2018ರಲ್ಲಿ ವಾರ್ಷಿಕ ಶೃಂಗಸಭೆಗಾಗಿ ಪುಟಿನ್ ಭಾರತಕ್ಕೆ ಭೇಟಿ ನೀಡಿದ್ದರು. ಈ ವೇಳೆ ಭಾರತ-ರಷ್ಯಾ ನಡುವೆ S400 ಸಿಸ್ಟಮ್‌ಗೆ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು.