ETV Bharat / bharat

ಮಂಡೋಲಿ ಜೈಲಲ್ಲಿ ಗದ್ದಲ: ತಮಗೆ ತಾವೇ ಗಾಯಮಾಡಿಕೊಂಡ ಕೈದಿಗಳು - ಗ್ಯಾಂಗ್​ಸ್ಟರ್​ ಜಿತೇಂದ್ರ ಗೋಗಿ ಹತ್ಯೆ

ಮಂಡೋಲಿ ಜೈಲಿನಲ್ಲಿ ಕೈದಿಗಳು ತಮಗೆ ತಾವೇ ಹಲ್ಲೆ ಮಾಡಿಕೊಂಡಿದ್ದಾರೆ. ಘಟನೆಯಲ್ಲಿ 23 ಕೈದಿಗಳಿಗೆ ಗಾಯವಾಗಿದ್ದು, ಎಲ್ಲರಿಗೂ ಚಿಕಿತ್ಸೆ ನೀಡಲಾಗಿದೆ.

ruckus-in-mandoli-jail-23-inmates-injured
ಮಂಡೋಲಿ ಜೈಲಲ್ಲಿ ಗದ್ದಲ
author img

By

Published : Sep 28, 2021, 12:10 PM IST

ನವದೆಹಲಿ: ಇಲ್ಲಿನ ರೋಹಿಣಿ ಕೋರ್ಟ್ ಆವರಣದಲ್ಲಿ ಗ್ಯಾಂಗ್​ವಾರ್​ ನಡೆದ ಬಳಿಕ ಎಲ್ಲ ಜೈಲುಗಳಲ್ಲಿ ಕಟ್ಟೆಚ್ಚರ ವಹಿಸಲಾಗಿತ್ತು. ಆದರೆ, ಈ ನಡುವೆ ನಗರದ ಮಂಡೋಲಿ ಜೈಲಿನಲ್ಲಿ ಕೈದಿಗಳು ತಮ್ಮನ್ನು ತಾವೇ ಗಾಯಮಾಡಿಕೊಂಡಿರುವ ಘಟನೆ ನಡೆದಿದೆ.

50ಕ್ಕೂ ಹೆಚ್ಚು ಕೈದಿಗಳ ತಮ್ಮ ಮೇಲೆಯೇ ಹಲ್ಲೆ ಮಾಡಿಕೊಂಡಿದ್ದಾರೆ. ಇದರಲ್ಲಿ 23 ಕೈದಿಗಳು ಗಾಯಗೊಂಡಿದ್ದು, ಜೈಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಓರ್ವ ಕೈದಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಟಿಬಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಕೆಲ ದಿನದ ಹಿಂದೆ ಗ್ಯಾಂಗ್​ಸ್ಟರ್​ ಜಿತೇಂದ್ರ ಗೋಗಿ ಹತ್ಯೆಯಾದ ಬಳಿಕ ಜೈಲಿನಲ್ಲಿ ಹೈ ಅಲರ್ಟ್ ಘೋಷಿಸಲಾಗಿತ್ತು. ಕೈದಿಗಳ ನಡುವೆ ಮಾರಾಮಾರಿ ನಡೆಯಬಹುದು ಎಂದು ಈ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗಿತ್ತು. ಈ ಕಾರಣದಿಂದಲೇ ಕೈದಿಗಳನ್ನು ಅವರ ವಾರ್ಡ್​​ನಿಂದ ಹೊರ ಬಿಡದೆ ಕಟ್ಟೆಚ್ಚರ ವಹಿಸಿದ್ದರು.

ಆದರೆ ಡ್ಯಾನಿಶ್ ಹಾಗೂ ಅನೀಶ್ ಎಂಬ ಇಬ್ಬರು ಕೈದಿಗಳು ತಮ್ಮನ್ನು ವಾರ್ಡ್​​ನಿಂದ ಹೊರ ಬಿಡುವಂತೆ ಕೇಳಿಕೊಳ್ಳುತ್ತಿದ್ದರು. ಆದರೆ, ಭದ್ರತಾ ಕಾರಣಗಳಿಂದ ಅವರಿಬ್ಬರನ್ನು ಬಿಟ್ಟಿರಲಿಲ್ಲ.

ಇದೇ ಕಾರಣಕ್ಕೆ ಕೋಪಗೊಂಡಿದ್ದ ಇಬ್ಬರು ಜೈಲಿನೊಳಗೆ ತಮಗೇ ಗಾವೇ ಗಾಯಮಾಡಿಕೊಂಡಿದ್ದಾರೆ. ಬಳಿಕ ಇತರ ಕೈದಿಗಳಿಗೂ ಗಾಯಮಾಡಿಕೊಳ್ಳಲು ಸೂಚಿಸಿದ್ದಾರೆ. ಹೀಗಾಗಿ ಹರಿತವಾದ ವಸ್ತುಗಳು, ಕಂಬಿಗಳಿಂದ ಕೈದಿಗಳು ಗಾಯಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಸಿಂದಗಿ, ಹಾನಗಲ್ ಸೇರಿ ದೇಶದ 30 ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ ಘೋಷಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.