ಪ್ರಯಾಗ್ರಾಜ್(ಉತ್ತರಪ್ರದೇಶ): ಸಂಗಮ್ ಕರಾವಳಿಯಲ್ಲಿ ನಡೆಯಲಿರುವ ಎರಡು ದಿನಗಳ 'ಗಂಗಾ ಸಮಗ್ರ' ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಪಾಲ್ಗೊಂಡಿದ್ದಾರೆ.
ಮಾಘ ಮೇಳದಲ್ಲಿ ವಿಹೆಚ್‌ಪಿ ಶಿಬಿರದಲ್ಲಿ ನಡೆಯುತ್ತಿರುವ ಗಂಗಾ ಸಮಗ್ರದ ಎರಡು ದಿನಗಳ ಸಭೆಯಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಭಾಗವಹಿಸಿದ್ದಾರೆ. ಶುಕ್ರವಾರ ಮಧ್ಯಾಹ್ನ ಪ್ರಯಾಗ್ರಾಜ್ ತಲುಪಿದ ಅವರು, ಸಂಜೆ ಗಂಗಾ ಪೂಜೆಯನ್ನು ನೆರವೇರಿಸಿದರು. ಮೊದಲ ದಿನದ ಉದ್ಘಾಟನಾ ಅಧಿವೇಶನವು ಮಾಲಾರ್ಪಣೆ ಮತ್ತು ಗಂಗಾನದಿಯಲ್ಲಿ ದೀಪ ಬೆಳಗಿಸುವ ಮೂಲಕ ಪ್ರಾರಂಭವಾಯಿತು. ಅವರೊಂದಿಗೆ ಶಂಕರಾಚಾರ್ಯ ಸ್ವಾಮಿ ವಾಸುದೇವನಂದ್ ಸರಸ್ವತಿ, ಅಖರಾ ಪರಿಷತ್ ರಾಷ್ಟ್ರೀಯ ಅಧ್ಯಕ್ಷ ನರೇಂದ್ರ ಗಿರಿ, ಕೇಂದ್ರ ಸಂಘಟನಾ ಸಚಿವ ಗಂಗಾ ಸಮಾಗ್ರಾ ಮಿಥಿಲೇಶ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಶಿಶ್ ಗೌತಮ್ ಇದ್ದರು.
ಗಂಗಾ, ಬದಲಾಗದೆ ಉಳಿದು ಜನರನ್ನು ಪವಿತ್ರಗೊಳಿಸುತ್ತದೆ. ಭಗೀರಥನಿಂದ ಗಂಗಾ ಈ ಭೂಮಿಗೆ ಹರಿಯಿತು ಎಂದ್ರು. ಗಂಗಾ ನಮ್ಮ ಜೀವನ, ಗಂಗೆ ನಿರಂತರವಾಗಿ ಹರಿಯುತ್ತಿದ್ರೆ ಮಾತ್ರ ನಮ್ಮ ಜೀವನವೂ ಚಲಿಸುತ್ತದೆ. ಸಂಕಟದಲ್ಲಿರುವ ಜಗತ್ತಿನ ಎಲ್ಲ ಜನರು ಪವಿತ್ರ ಗಂಗೆಯಲ್ಲಿ ಸ್ನಾನ ಮಾಡಿದರೆ ಸುಖಶಾಂತಿ ಸಾಧ್ಯ ಎಂದು ಹೇಳಿದರು.