ETV Bharat / bharat

ಎಲ್ಲ ಧರ್ಮಕ್ಕೆ ಅನ್ವಯಿಸುವ ಜನಸಂಖ್ಯಾ ನೀತಿ ಜಾರಿ ಮಾಡಿ: ಮೋಹನ್​ ಭಾಗವತ್​ - ಜನಸಂಖ್ಯೆಯ ಸಮಗ್ರ ನೀತಿ

ನಾಗಪುರದ ಆರ್​ಎಸ್​ಎಸ್​ ಕಚೇರಿಯಲ್ಲಿ ನಡೆದ ಆಯುಧ ಪೂಜೆಯಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಅತಿಥಿಯನ್ನು ಆಹ್ವಾನಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಮಗ್ರ ಜನಸಂಖ್ಯಾ ನೀತಿ ಜಾರಿಗೆ ಮೋಹನ್​ ಭಾಗವತ್​ ಅವರು ಸರ್ಕಾರಕ್ಕೆ ಸಲಹೆ ನೀಡಿದರು.

comprehensive-policy-on-population
ಮೋಹನ್​ ಭಾಗವತ್​
author img

By

Published : Oct 5, 2022, 1:05 PM IST

ನಾಗ್ಪುರ (ಮಹಾರಾಷ್ಟ್ರ): ಇಲ್ಲಿನ ಆರ್​ಎಸ್​ಎಸ್​ ಕಚೇರಿಯಲ್ಲಿ ನಡೆದ ಆಯುಧ ಪೂಜೆ ಕಾರ್ಯಕ್ರಮಕ್ಕೆ ಇದೇ ಮೊದಲ ಬಾರಿಗೆ ಮಹಿಳೆಗೆ ಆಹ್ವಾನ ನೀಡಲಾಗಿದೆ. ಸಂಪ್ರದಾಯದಲ್ಲಿ ಬದಲಾವಣೆ ಮಾಡಿಕೊಂಡ ಆರ್​ಎಸ್​ಎಸ್​ ಪರ್ವತಾರೋಹಿ ಸಂತೋಷ್​ ಯಾದವ್​ ಅವರನ್ನು ಅತಿಥಿಯಾಗಿ ಆಹ್ವಾನಿಸಿತ್ತು.

ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಆಯುಧ ಪೂಜೆಗೆ ಚಾಲನೆ ನೀಡಿದರು. ಸಂತೋಷ್ ಯಾದವ್ ಅವರು ಪರ್ವತಾರೋಹಿಯಾಗಿದ್ದು, ಎರಡು ಬಾರಿ ಮೌಂಟ್ ಎವರೆಸ್ಟ್ ಅನ್ನು ಏರಿದ ವಿಶ್ವದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಬಳಿಕ ಮೋಹನ್​ ಭಾಗವತ್ ಮಾತನಾಡಿ, ಜನಸಂಖ್ಯೆಯ ಸಮಗ್ರ ನೀತಿಗೆ ಕರೆ ನೀಡಿದ ಅವರು, ದೇಶದ ಎಲ್ಲ ಸಮುದಾಯದ ಜನರಿಗೂ ಈ ನೀತಿ ಅನ್ವಯಿಸಬೇಕು. ಜನಸಂಖ್ಯೆ ಹೆಚ್ಚಾದಷ್ಟೂ ಹೊರೆ ಹೆಚ್ಚಾಗುತ್ತದೆ. ಜನಸಂಖ್ಯೆಯನ್ನು ಸರಿಯಾಗಿ ಬಳಸಿಕೊಂಡು ಸಂಪನ್ಮೂಲ ರೂಪಿಸಬೇಕು. 50 ವರ್ಷಗಳ ನಂತರ ಎಷ್ಟು ಜನರಿಗೆ ಆಹಾರ ಮತ್ತು ಸೌಕರ್ಯ ಒದಗಿಸಬಹುದು ಎಂಬುದನ್ನು ನಾವು ಗುರಿ ಹಾಕಿಕೊಳ್ಳಬೇಕು ಎಂದು ಹೇಳಿದರು.

ಜನಸಂಖ್ಯಾ ನಿಯಂತ್ರಣ ಪ್ರಮುಖ ವಿಷಯವಾಗಿದೆ. ಆದ್ದರಿಂದ ಸಮಗ್ರ ಜನಸಂಖ್ಯಾ ನೀತಿಯನ್ನು ತರಬೇಕು. ಅದು ಎಲ್ಲರಿಗೂ ಸಮಾನವಾಗಿ ಅನ್ವಯಿಸಬೇಕು. ಆಗ ಮಾತ್ರ ಜನಸಂಖ್ಯೆ ನಿಯಂತ್ರಣದ ಕ್ರಮಗಳು ಫಲ ನೀಡಲು ಸಾಧ್ಯ ಎಂದರು.

ಎಲ್ಲೆಡೆ ಮಹಿಳೆಯರಿಗೆ ಸಮಾನ ಹಕ್ಕಿರಲಿ: ಮಹಿಳೆಯರಿಗೆ ಎಲ್ಲ ಸ್ಥಳಗಳಲ್ಲಿ ಸಮಾನ ಹಕ್ಕು ಸಿಗಬೇಕು. ನಿರ್ಧಾರಗಳನ್ನು ತಳೆಯುವ ಹಕ್ಕು ಅವರಿಗಿದೆ. ನಾಲ್ಕು ಗೋಡೆಗಳ ಮಧ್ಯೆ ಅವರನ್ನು ನಿರ್ಬಂಧಿಸುವುದು ಸರಿಯಲ್ಲ. ಮಾತೃಶಕ್ತಿ ಮಾಡಬಹುದಾದ ಎಲ್ಲಾ ಕೆಲಸಗಳನ್ನು ಪುರುಷ ಮಾಡಲು ಸಾಧ್ಯವಿಲ್ಲ ಎಂದರು ಪ್ರತಿಪಾದಿಸಿದರು.

ಓದಿ: ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿದ ಸಿಎಂ.. ಮೆರವಣಿಗೆಗೆ ಚಾಲನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.