ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು ಗುರುವಾರ ಮುಖ್ಯ ಇಮಾಮ್ ಡಾ. ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ ಸೇರಿದಂತೆ ಹಲವು ಮುಸ್ಲಿಂ ಬುದ್ಧಿಜೀವಿಗಳನ್ನು ಭೇಟಿ ಮಾಡಿದರು. ಕಸ್ತೂರಬಾ ಗಾಂಧಿ ಮಾರ್ಗ ಮಸೀದಿಯಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಸಭೆ ನಡೆಯಿತು.
ಆರ್‌ಎಸ್‌ಎಸ್‌ಗೆ ನಿಕಟವಾಗಿರುವ ಮೂಲಗಳ ಪ್ರಕಾರ ಹಿಜಾಬ್ ವಿವಾದ, ಜ್ಞಾನವಾಪಿ ಮತ್ತು ಧರ್ಮಗಳ ನಡುವೆ ಶಾಂತಿ ಮತ್ತು ಸೌಹಾರ್ದತೆ ಕಾಪಾಡುವುದು ಮುಂತಾದ ವಿಷಯಗಳನ್ನು ಸಭೆಯಲ್ಲಿ ಚರ್ಚಿಸಲಾಗಿದೆ. ಭಾಗವತ್ ಅವರಲ್ಲದೇ ಹಿರಿಯ ಆರ್‌ಎಸ್‌ಎಸ್ ಸದಸ್ಯರಾದ ಡಾ. ಕೃಷ್ಣ ಗೋಪಾಲ್, ಇಂದ್ರೇಶ್ ಕುಮಾರ್, ರಾಮ್‌ಲಾಲ್ ಮತ್ತು ಕರಿಶ್ ಕುಮಾರ್ ಕೂಡ ಇಂದಿನ ಸಭೆಯಲ್ಲಿ ಭಾಗವಹಿಸಿದ್ದರು.
-
Delhi | RSS chief Mohan Bhagwat held a meeting with Dr Imam Umer Ahmed Ilyasi, Chief Imam of All India Imam Organization, at Kasturba Gandhi Marg mosque today pic.twitter.com/vxfo0IPsMa
— ANI (@ANI) September 22, 2022 " class="align-text-top noRightClick twitterSection" data="
">Delhi | RSS chief Mohan Bhagwat held a meeting with Dr Imam Umer Ahmed Ilyasi, Chief Imam of All India Imam Organization, at Kasturba Gandhi Marg mosque today pic.twitter.com/vxfo0IPsMa
— ANI (@ANI) September 22, 2022Delhi | RSS chief Mohan Bhagwat held a meeting with Dr Imam Umer Ahmed Ilyasi, Chief Imam of All India Imam Organization, at Kasturba Gandhi Marg mosque today pic.twitter.com/vxfo0IPsMa
— ANI (@ANI) September 22, 2022
ಈ ಸಭೆಯು ಸಂವಾದ ಪ್ರಕ್ರಿಯೆಯ ಒಂದು ಭಾಗವಾಗಿದೆ ಎಂದು ಆರ್‌ಎಸ್‌ಎಸ್‌ನ ಅಖಿಲ ಭಾರತೀಯ ಪ್ರಚಾರ್ ಪ್ರಮುಖ್ ಸುನೀಲ್ ಅಂಬೇಕರ್ ಹೇಳಿದ್ದಾರೆ. ಆರ್‌ಎಸ್‌ಎಸ್ ಸರಸಂಘಚಾಲಕರು ಸಮಾಜದ ಎಲ್ಲ ವರ್ಗದ ಜನರನ್ನು ಭೇಟಿಯಾಗುತ್ತಾರೆ. ಇದು ನಿರಂತರ ಸಾಮಾನ್ಯ "ಸಂವಾದ" ಪ್ರಕ್ರಿಯೆಯ ಭಾಗವಾಗಿದೆ ಎಂದು ಅಂಬೇಕರ್ ಹೇಳಿದರು.
ಮಂಗಳವಾರ ಮುಂಜಾನೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅನೇಕ ಮುಸ್ಲಿಂ ಬುದ್ಧಿಜೀವಿಗಳನ್ನು ಭೇಟಿ ಮಾಡಿದ್ದರು. ಇತ್ತೀಚಿನ ವಿವಾದಗಳು ಮತ್ತು ದೇಶದಲ್ಲಿ ಧಾರ್ಮಿಕ ಸಹಿಷ್ಣುತೆ ಬಲಪಡಿಸುವ ಮಾರ್ಗಗಳ ಕುರಿತು ಚರ್ಚಿಸಿದರು. ಆರೆಸ್ಸೆಸ್ ಮೂಲಗಳ ಪ್ರಕಾರ, ಸಂಘದ ವಿಚಾರಗಳನ್ನು ಪ್ರಚಾರ ಮಾಡಲು ಮತ್ತು ಧಾರ್ಮಿಕ ಒಳಗೊಳ್ಳುವಿಕೆಯ ವಿಷಯದ ಪ್ರಚಾರಕ್ಕಾಗಿ ಸಭೆ ನಡೆಸಲಾಗಿದೆ. ಜ್ಞಾನವಾಪಿ ವಿವಾದ, ಹಿಜಾಬ್ ವಿವಾದ, ಜನಸಂಖ್ಯೆ ನಿಯಂತ್ರಣದಂತಹ ಇತ್ತೀಚಿನ ವಿಷಯಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು.
ಮಂಗಳವಾರದ ಸಭೆಯಲ್ಲಿ ಮಾಜಿ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಎಸ್.ವೈ. ಖುರೇಷಿ, ದೆಹಲಿಯ ಮಾಜಿ ಲೆಫ್ಟಿನೆಂಟ್ ಗವರ್ನರ್ (ಎಲ್‌ಜಿ) ನಜೀಬ್ ಜಂಗ್, ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ (ಎಎಂಯು) ಮಾಜಿ ಚಾನ್ಸೆಲರ್ ಲೆಫ್ಟಿನೆಂಟ್ ಜನರಲ್ ಜಮೀರ್ ಉದ್ದೀನ್ ಶಾ, ಮಾಜಿ ಸಂಸದ ಶಾಹಿದ್ ಸಿದ್ದಿಕಿ ಮತ್ತು ಉದ್ಯಮಿ ಸಯೀದ್ ಮುಂತಾದ ಅನೇಕ ಬುದ್ಧಿಜೀವಿಗಳು ಭಾಗವಹಿಸಿದ್ದರು.
ಇದನ್ನು ಓದಿ:ರೋಹಿಂಗ್ಯಾಗಳಿಗೆ ಪಾಕ್ ಭಯೋತ್ಪಾದಕರ ಲಿಂಕ್: ಕೋರ್ಟ್ಗೆ ಅಫಿಡವಿಟ್ ಸಲ್ಲಿಸಿದ ಕೇಂದ್ರ