ತಿರುಪತಿ, ಆಂಧ್ರ ಪ್ರದೇಶ : ಸಾಮಾನ್ಯವಾಗಿ ದೇವಾಲಯಗಳಿಗೆ ಭೇಟಿ ನೀಡುವಾಗ ಭಕ್ತರು ಹುಂಡಿಯೊಳಗೆ ಹಣವನ್ನು ಹಾಕುತ್ತಾರೆ. ಇನ್ನೂ ಕೆಲವು ಬಾರಿ ಕೆಲವು ಚಿನ್ನದ ವಸ್ತುಗಳನ್ನು ಹಾಕುವುದೂ ಉಂಟು. ಈ ಮೂಲಕ ಕೆಲವರು ಹರಕೆ ತೀರಿಸುತ್ತಾರೆ. ಈಗ ದಕ್ಷಿಣ ಭಾರತದ ಶ್ರೀಮಂತ ದೇವಾಲಯಗಳಲ್ಲಿ ಒಂದಾದ ತಿರುಪತಿಗೆ ಅತಿ ದೊಡ್ಡ ದಾನವೊಂದು ಬಂದಿದೆ.
ತಿರುಪತಿ ಶ್ರೀವೆಂಕಟೇಶ್ವರ ಸ್ವಾಮಿಗೆ ಚಿನ್ನದಿಂದ ತಯಾರಿಸಲಾದ ಸುಮಾರು ಮೂರು ಕೋಟಿ ರೂಪಾಯಿ ಮೌಲ್ಯದ ಕಠಿ ಹಸ್ತ, ವರದ ಹಸ್ತವನ್ನು ವ್ಯಕ್ತಿಯೊಬ್ಬರು ದಾನವಾಗಿ ನೀಡಿದ್ದಾರೆ. ಶುಕ್ರವಾರ ಬೆಳಗ್ಗೆ ವಿಐಪಿ ದರ್ಶನದ ವೇಳೆ ವ್ಯಕ್ತಿಯೊಬ್ಬರು ಈ ಹಸ್ತಗಳನ್ನು ಹಸ್ತಾಂತರ ಮಾಡಿದ್ದಾರೆ.
ತಿರುಮಲದ ರಂಗನೈಕುಲ ಮಂಡಪಂನಲ್ಲಿ ತಿರುಮಲ ತಿರುಮಲ ದೇವಸ್ಥಾನಂನ ಅಧಿಕಾರಿಗಳಿಗೆ ಹಸ್ತಗಳನ್ನು ನೀಡಲಾಗಿದ್ದು, ದಾನ ನೀಡಿದವರ ವಿವರವನ್ನು ರಹಸ್ಯವಾಗಿ ಇಡಲಾಗಿದೆ.
ಇದನ್ನೂ ಓದಿ: ಫುಟ್ಬಾಲ್ ದಂತಕಥೆ ಡಿಯಾಗೋ ಮರಡೋನಾ ವಾಚ್ ಅಸ್ಸೋಂನಲ್ಲಿ ಪತ್ತೆ!