ಎರ್ನಾಕುಲಂ(ಕೇರಳ): ಲಕ್ಷದ್ವೀಪ ಕರಾವಳಿಯಲ್ಲಿ ಭಾರಿ ಪ್ರಮಾಣದ ಮಾದಕ ದ್ರವ್ಯ ಪತ್ತೆಯಾಗಿದೆ. ‘ಆಪರೇಷನ್ ಖೋಜ್ಬೀನ್’ ಎಂಬ ಹೆಸರಿನೊಂದಿಗೆ ಕಂದಾಯ ಗುಪ್ತಚರ ನಿರ್ದೇಶನಾಲಯ ಮತ್ತು ಕೋಸ್ಟ್ ಗಾರ್ಡ್ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ತಮಿಳುನಾಡಿನ ಮೀನುಗಾರಿಕಾ ದೋಣಿಗಳಿಂದ 1,526 ಕೋಟಿ ರೂಪಾಯಿ ಮೌಲ್ಯದ 218 ಕೆಜಿ ಹೆರಾಯಿನ್ ವಶಪಡಿಸಿಕೊಂಡಿದ್ದಾರೆ.
ಹೆರಾಯಿನ್ ಪತ್ತೆಯಾದ ಪ್ರಿನ್ಸ್ ಮತ್ತು ಲಿಟಲ್ ಜೀಸಸ್ ದೋಣಿಗಳನ್ನು ಮೇ 18ರಂದು ವಶಪಡಿಸಿಕೊಳ್ಳಲಾಗಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಎರಡು ಮೀನುಗಾರಿಕಾ ದೋಣಿಗಳಲ್ಲಿ ತಲಾ ಒಂದು ಕೆಜಿ ಹೆರಾಯಿನ್ ಅನ್ನು 218 ಪ್ಯಾಕೆಟ್‌ಗಳಲ್ಲಿ ಸಂಗ್ರಹಿಸಡಲಾಗಿತ್ತು. ಈ ಬಗ್ಗೆ ತಿಳಿದು ತನಿಖೆ ಆರಂಭಿಸಲಾಗಿತ್ತು. ಬೋಟ್‌ಗಳಲ್ಲಿ ಕುಳಚಲ ಪ್ರದೇಶದ ಮೀನುಗಾರರು ಇದ್ದರು. ಅವರನ್ನು ವಶಕ್ಕೆ ಪಡೆದು ಕೊಚ್ಚಿಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ.
ಬಂಧಿತ ಮೀನುಗಾರರಲ್ಲಿ ನಾಲ್ವರು ಮಲಯಾಳಿಗಳು ಎಂದು ತಿಳಿದು ಬಂದಿದೆ. ಹೆಚ್ಚಿನ ತಪಾಸಣೆಗಾಗಿ ದೋಣಿಗಳನ್ನು ಕೊಚ್ಚಿಯಲ್ಲಿರುವ ಕೋಸ್ಟ್ ಗಾರ್ಡ್ ಪ್ರಧಾನ ಕಚೇರಿಗೆ ಕರೆದೊಯ್ಯಲಾಗಿದೆ.
ಇದನ್ನೂ ಓದಿ: ಪ್ರೇಮ ವಿವಾಹ, ಸುಖ ಸಂಸಾರ, ಮುದ್ದಾದ ಮಗು ಜನನ.. ಸಹಿಸದ ಗೃಹಿಣಿ ಅಣ್ಣನಿಂದ ಬಾಮೈದನ ಕೊಲೆ!