ಹೈದರಾಬಾದ್(ತೆಲಂಗಾಣ): ರಾಜ್ಯದ ಇತಿಹಾಸದಲ್ಲಿ ಒಂದು ಎಕರೆ ಭೂಮಿ ಬರೋಬ್ಬರಿ 100 ಕೋಟಿ ರೂ. ದಾಖಲೆಯ ಬೆಲೆಗೆ ಮಾರಾಟವಾಗಿದೆ. ಇದು ಮಾರುಕಟ್ಟೆ ವಲಯದಲ್ಲಿ ಸಂಚಲನ ಮೂಡಿಸಿದೆ. ಹೈದರಾಬಾದ್ ಮಹಾನಗರ ಅಭಿವೃದ್ಧಿ ಪ್ರಾಧಿಕಾರ (ಹೆಚ್‌ಎಂಡಿಎ) ಅಡಿ ಕೊಕಾಪೇಟ್‌ನ ಸರ್ವೆ ನಂಬರ್ 239 ಮತ್ತು 240 ರಲ್ಲಿ ಅಭಿವೃದ್ಧಿಪಡಿಸಿದ ಒಂದು ಎಕರೆ ನಿಯೋ ಪೊಲೀಸ್ ಲೇಔಟ್ನ್ನು 100.75 ಕೋಟಿ ರೂ.ಗೆ ಮಾರಾಟ ಮಾಡಲಾಗಿದೆ.
3,319.6 ಕೋಟಿ ರೂ. ಆದಾಯ: ಬಡಾವಣೆಯಲ್ಲಿ ಮುಖ್ಯ ರಸ್ತೆಯ ಪಕ್ಕದ ಪ್ಲಾಟ್ ನಂ.10ರಲ್ಲಿ 3.6 ಎಕರೆ ಇದ್ದು, ಎಕರೆಗೆ 100.75 ಕೋಟಿ ರೂ.ನಂತೆ ಒಟ್ಟು 362.70 ಕೋಟಿ ರೂ.ಗೆ ಮಾರಾಟ ಮಾಡಲಾಗಿದೆ. ಗಮನಾರ್ಹವೆಂದರೆ ಇದು ಹಿಂದಿನ ಹರಾಜಿಗಿಂತ ಎಕರೆಗೆ 40 ಕೋಟಿ ರೂ. ಹೆಚ್ಚಾಗಿದೆ. ಬಡಾವಣೆಯಲ್ಲಿನ 45.33 ಎಕರೆಯನ್ನು ವಿವಿಧ ನಿವೇಶನಗಳಾಗಿ ವಿಂಗಡಿಸಿ ಹರಾಜಿನಲ್ಲಿ ಸರ್ಕಾರ 3,319.6 ಕೋಟಿ ರೂ. ಆದಾಯಗಳಿಸಿದೆ.
100 ಕೋಟಿ ರೂ. ದಾಖಲೆಯ ಬೆಲೆಗೆ ಮಾರಾಟ: ಗುರುವಾರ ಕೋಕಾಪೇಟ್ನೆ ನಿಯೋಪೊಲೀಸ್ 2ನೇ ಹಂತದಲ್ಲಿ 45.33 ಎಕರೆ ಏಳು ನಿವೇಶನಗಳಿಗೆ ಹೆಚ್‌ಎಂಡಿಎ ಇ - ಹರಾಜು ನಡೆಸಿತು. ಶಹಪೂರ್ಜಿ ಪಲ್ಲೋಂಜಿ, ಎಪಿಆರ್, ಮೈ ಹೋಮ್, ರಾಜಪುಷ್ಪ ಮತ್ತು ಇತರ ಪ್ರಸಿದ್ಧ ರಿಯಲ್ ಎಸ್ಟೇಟ್ ವ್ಯಾಪಾರ ಕಂಪನಿಗಳಲ್ಲದೇ, ಕೆಲವು ಸಣ್ಣ ಕಂಪನಿಗಳು ಇ - ಹರಾಜಿನಲ್ಲಿ ಭಾಗವಹಿಸಿದ್ದವು. ಬೆಳಗ್ಗೆ 6, 7, 8, 9 ಹಾಗೂ ಮಧ್ಯಾಹ್ನ 10, 11, 14ರ ನಿವೇಶನಗಳಿಗೆ ಹರಾಜು ಪ್ರಕ್ರಿಯೆ ನಡೆಯಿತು. ಬೆಳಗ್ಗೆ ಅತಿ ಹೆಚ್ಚು ಬೆಲೆ ಎಕರೆಗೆ ರೂ.75.50 ಕೋಟಿ ಮತ್ತು ಮಧ್ಯಾಹ್ನದ ಗರಿಷ್ಠ ಬೆಲೆ ರೂ. 100 ಕೋಟಿ ರೂ. ದಾಟಿದೆ.
ಎಪಿಆರ್ ಗ್ರೂಪ್-ರಾಜಪುಷ್ಪ ಮತ್ತು ಹ್ಯಾಪಿ ಹೈಟ್ಸ್ ಪ್ಲಾಟ್ ಸಂಖ್ಯೆ 10ರ ಹರಾಜಿನಲ್ಲಿ ಭಾಗವಹಿಸಿದ್ದರು. ಕೊನೆಯಲ್ಲಿ, ಹ್ಯಾಪಿ ಹೈಟ್ಸ್ ನಿಯೋಪೊಲೀಸ್ ಮತ್ತು ರಾಜಪುಷ್ಪ ಪ್ರಾಪರ್ಟೀಸ್ ಪ್ರೈವೇಟ್ ಲಿಮಿಟೆಡ್‌ಗೆ ಅತ್ಯಧಿಕ ಬೆಲೆಗೆ ಮಾರಾಟ ಮಾಡಲಾಗಿದೆ. ಬೆಳಗಿನ ಅವಧಿಯಲ್ಲಿ ಎಕರೆಗೆ (8ನೇ ಪ್ಲಾಟ್) ಅತ್ಯಂತ ಕಡಿಮೆ ಬೆಲೆ ರೂ.68 ಕೋಟಿಗಳಾಗಿದ್ದರೆ, ಮಧ್ಯಾಹ್ನದ ಅವಧಿಯಲ್ಲಿ ಎಕರೆಗೆ (11ನೇ ಪ್ಲಾಟ್) ಅತ್ಯಂತ ಕಡಿಮೆ ಬೆಲೆ ರೂ.67.25 ಕೋಟಿಗಳಾಗಿತ್ತು. ಒಟ್ಟು 45.33 ಎಕರೆಗೆ ರೂ.3,319.60 ಕೋಟಿ ಆದಾಯ ಬಂದಿದೆ. ಎಕರೆಗೆ ಸರಾಸರಿ ರೂ.73.23 ಕೋಟಿ ಬೆಲೆ ದಾಖಲೆಯಾಗುವ ನಿರೀಕ್ಷೆ ಇದೆ.
ಮೂಲ ಸೌಕರ್ಯಕ್ಕಾಗಿಯೇ 450 ಕೋಟಿ ರೂ: ಕೋಕಾಪೇಟ್ನಲ್ಲಿ ನಿಯೋ ಪೊಲೀಸ್ ಹೆಸರಿನಲ್ಲಿ 531.45 ಎಕರೆ ಜಾಗದಲ್ಲಿ ಹೆಚ್‌ಎಂಡಿಎ ಬಡಾವಣೆ ನಿರ್ಮಿಸಿದೆ. ಇದರಲ್ಲಿ ರಸ್ತೆ, ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ, ಕೇಬಲ್‌ಗಳಿಗೆ ವಿಶೇಷ ಮಾರ್ಗ ಸೇರಿದಂತೆ ಎಲ್ಲ ಸೌಲಭ್ಯಗಳನ್ನು 450 ಕೋಟಿ ರೂ. ಒಟ್ಟು 329.22 ಎಕರೆ ಭೂಮಿಯನ್ನು ಈಗಾಗಲೇ ವಿವಿಧ ಸಂಸ್ಥೆಗಳಿಗೆ ನೀಡಲಾಗಿದೆ. ಉಳಿದ 202.23 ಎಕರೆ ಪೈಕಿ ಮೊದಲ ಹಂತದ ಹರಾಜಿನಲ್ಲಿ ಒಂದಷ್ಟು ಭೂಮಿ ದಾಖಲೆ ಬೆಲೆಗೆ ಮಾರಾಟವಾಗಿದೆ. ಅತಿ ಹೆಚ್ಚು ಅಂದರೆ ಎಕರೆ 60 ಕೋಟಿ ರೂ. ಮಾರಾಟವಾಗಿತ್ತು. ಇದರಿಂದ ಭಾರಿ ಆಗ 2 ಸಾವಿರ ಕೋಟಿ ರೂ. ಆದಾಯ ಗಳಿಸಿತ್ತು.
ಇದೇ ಉತ್ಸಾಹದಿಂದ ಹೆಚ್‌ಎಂಡಿಎ ಉಳಿದ 45.33 ಎಕರೆಗೂ ಇ–ಹರಾಜು ನಡೆಸಲು ನಿರ್ಧರಿಸಿತ್ತು. ಪ್ರತಿ ಎಕರೆಗೆ ರೂ.35 ಕೋಟಿಗಳನ್ನು ಕನಿಷ್ಠ ಅಸಮಾಧಾನ ಬೆಲೆ ಎಂದು ನಮೂದಿಸಲಾಗಿತ್ತು. ಒಟ್ಟು 45.33 ಎಕರೆಗೆ 1586.55 ಕೋಟಿ ರೂ. ಕನಿಷ್ಠ ಬಿಡ್ ಹೆಚ್ಚಳವನ್ನೂ ಎಕರೆಗೆ ದಾಖಲೆಯ 25 ಲಕ್ಷ ರೂ.ಗೆ ನಿಗದಿಪಡಿಸಲಾಗಿತ್ತು. ಇತ್ತೀಚಿನ ಹರಾಜಿಗೆ ಅಧಿಕಾರಿಗಳು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಪ್ರತಿಕ್ರಿಯೆ ಸಿಕ್ಕಿದೆ. ಸಂಪೂರ್ಣ ಲೇಔಟ್ ಅನ್ನು ಬಹುಪಯೋಗಿ ವಲಯದ ಅಡಿ ನಿಗದಿ ಪಡಿಸಲಾಗಿದೆ. ಭೂ ಬಳಕೆಗೆ ವಿಶೇಷ ಅಗತ್ಯವಿಲ್ಲ. ಕಚೇರಿಗಳು, ಸಂಸ್ಥೆಗಳು, ವಸತಿ ಗೃಹಗಳು, ಗೇಟೆಡ್ ಸಮುದಾಯಗಳು ಮತ್ತು ಅಪಾರ್ಟ್‌ಮೆಂಟ್‌ಗಳ ನಿರ್ಮಾಣಕ್ಕೆ ಸೈಟ್ ಸೂಕ್ತವಾಗಿರುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಶೇ.100ರಷ್ಟು ಸ್ಪಷ್ಟ ಹಕ್ಕು ಹೊಂದಿರುವ ಸರ್ಕಾರಿ ಜಾಗವಾಗಿರುವುದರಿಂದ ಉತ್ತಮ ಬೇಡಿಕೆ ಇದೆ.
ಹರಾಜು ಕುರಿತು ವ್ಯಾಪಕ ಪ್ರಚಾರ: ಜು.16, 2021 ರಂದು ನಿಯೋಪೊಲೀಸ್‌ನಲ್ಲಿ 49.949 ಎಕರೆ ಹರಾಜಿನಲ್ಲಿ ಸರ್ಕಾರವು 2,000.37 ಕೋಟಿ ರೂಪಾಯಿಗಳನ್ನು ಗಳಿಸಿತ್ತು. ನಿನ್ನೆ (ಗುರುವಾರ) ಎರಡನೇ ಸುತ್ತಿನ ಹರಾಜು ಪ್ರಕ್ರಿಯೆ ರೂಪಿಸಿತು. ಆಧುನಿಕ ಮೂಲಸೌಕರ್ಯ, 36 ಮತ್ತು 45 ಮೀಟರ್ ಅಗಲದ ರಸ್ತೆಗಳೊಂದಿಗೆ ಹೆಚ್‌ಎಂಡಿಎ ಈ ಬಡಾವಣೆಯನ್ನು ಅಭಿವೃದ್ಧಿಪಡಿಸಿದೆ. ಪ್ಲಾಟ್‌ಗಳು ಅನಿಯಮಿತ ಫ್ಲೋರ್ ಸ್ಪೇಸ್ ಇಂಡೆಕ್ಸ್‌ನೊಂದಿಗೆ ಎತ್ತರದ ಕಟ್ಟಡಗಳಿಗೆ ಮೀಸಲಾಗಿದೆ. ರಿಯಲ್ ಎಸ್ಟೇಟ್ ಡೆವಲಪರ್‌ಗಳ ಆಸಕ್ತಿಯನ್ನು ಸೆಳೆಯಲು ಹರಾಜು ಕುರಿತು ವ್ಯಾಪಕ ಪ್ರಚಾರ ಮಾಡಲಾಗಿತ್ತು ಎಂದು ಹೆಚ್‌ಎಂಡಿಎ ಹೇಳಿದೆ.
ನಿಯೋಪೊಲೀಸ್‌ನಲ್ಲಿನ ಹರಾಜಾದ ಲೇಔಟ್ ವಿವರ:
ವಿಸ್ತೀರ್ಣ: 45.33 ಎಕರೆ
ಅತಿ ಹೆಚ್ಚು ಬಿಡ್: ಎಕರೆಗೆ 100.75 ರೂ
ಕಡಿಮೆ ಬಿಡ್: ಎಕರೆಗೆ 67.25 ಕೋಟಿ ರೂ
ಒಟ್ಟು: 3.319.6 ಕೋಟಿ ರೂ.
ಪ್ರಗತಿಗೆ ಹಿಡಿದ ಕನ್ನಡಿ-ಸಿಎಂ ಕೆಸಿಆರ್: ಸರ್ಕಾರಿ ಹರಾಜಿನಲ್ಲಿ ಪ್ರತಿ ಎಕರೆಗೆ 100 ಕೋಟಿ ರೂ.ಗೂ ಅಧಿಕ ಮೊತ್ತದ ಹೈದರಾಬಾದ್ ಭೂಮಿಯ ಬೆಲೆ ತೆಲಂಗಾಣದ ಹತೋಟಿ ಮತ್ತು ಸಾಧಿಸುತ್ತಿರುವ ಪ್ರಗತಿಗೆ ಹಿಡಿದ ಕನ್ನಡಿಯಾಗಿದೆ ಎಂದು ಸಿಎಂ ಕೆಸಿಆರ್ ಬಣ್ಣಿಸಿದರು. ಆರ್ಥಿಕ ದೃಷ್ಟಿಯಿಂದ ಮಾತ್ರವಲ್ಲದೇ ಅಭಿವೃದ್ಧಿ ದೃಷ್ಟಿಯಿಂದಲೂ ವಿಶ್ವದರ್ಜೆಯ ದೈತ್ಯ ಕಂಪನಿಗಳು ಪೈಪೋಟಿಗಿಳಿದು ಭಾರಿ ಬೆಲೆ ನೀಡಿ ಭೂಮಿ ಖರೀದಿಸಬೇಕು ಎಂದು ಸಿಎಂ ಹೇಳಿದರು.
'ಹೆಚ್ಚುತ್ತಿರುವ ಭೂಮಿಯ ವ್ಯಾಮೋಹ ಹೈದರಾಬಾದ್ ನಗರ ಅಭಿವೃದ್ಧಿಯ ಪ್ರಸ್ತುತ ಪರಿಸ್ಥಿತಿಗೆ ಕನ್ನಡಿ ಹಿಡಿಯುತ್ತಿದೆ. ತೆಲಂಗಾಣ ಅಸ್ತಿತ್ವಕ್ಕೆ ಬಂದರೆ ಹೈದ್ರಾಬಾದ್ ನೆಲಕಚ್ಚುತ್ತದೆ. ಜಮೀನು ದರ ಕುಸಿದು ಹೋಗುತ್ತದೆ ಎಂಬ ಭಯ ಹುಟ್ಟಿಸಲು ಹಾಗೂ ನಗರದ ಸ್ವಾಭಿಮಾನಕ್ಕೆ ಧಕ್ಕೆ ತಂದವರಿಗೆ ಇದು ಕಪಾಳಮೋಕ್ಷ' ಎಂದು ಸಿಎಂ ಹೇಳಿದರು.
ಹಳ್ಳಿ-ಪಟ್ಟಣಗಳನ್ನು ನಿರಂತರ ಪ್ರಗತಿ ಪಥದಲ್ಲಿ ಸರ್ಕಾರ ಮುನ್ನಡೆಸುತ್ತಿದೆ ಎಂಬುದಕ್ಕೆ ಹಾಗೂ ಹೈದರಾಬಾದ್‌ನ್ನು ವಿಶ್ವಮಾನವ ನಗರವನ್ನಾಗಿಸಲು ರಾಜ್ಯ ಸರ್ಕಾರ ಮಾಡುತ್ತಿರುವ ಪ್ರಯತ್ನಕ್ಕೆ ಇದು ಸಾಕ್ಷಿ. ಈ ಸಂದರ್ಭದಲ್ಲಿ ನಗರದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಹೆಚ್‌ಎಂಡಿಎ ಅಧಿಕಾರಿಗಳು, ಸಚಿವ ಕೆಟಿಆರ್, ಹೆಚ್‌ಎಂಡಿಎ ಮಹಾನಗರ ಪಾಲಿಕೆ ಆಯುಕ್ತ, ಪೌರಾಡಳಿತ ವಿಶೇಷ ಮುಖ್ಯ ಕಾರ್ಯದರ್ಶಿ ಅರವಿಂದಕುಮಾರ್ ಅವರನ್ನು ಸಿಎಂ ಅಭಿನಂದಿಸಿದರು.
ಇದನ್ನೂ ಓದಿ: ನಗರದ ಪ್ರದೇಶಗಳಲ್ಲಿರುವ ಅನಧಿಕೃತ ನಿವೇಶನ ಮತ್ತು ಕಟ್ಟಡಗಳಿಗೆ ಬಿ ಖಾತಾ ನೀಡಲು ಸರ್ಕಾರ ನಿರ್ಧಾರ