ನಂದುರ್ಬಾರ್ : 'ಪೆಟ್ರೋಲ್ ಬೆಲೆ ಮಹಾರಾಷ್ಟ್ರಕ್ಕಿಂತ ಹತ್ತು ರೂಪಾಯಿ ಅಗ್ಗವಾಗಿದೆ. ದಯವಿಟ್ಟು ನಿಮ್ಮ ವಾಹನ ಟ್ಯಾಂಕ್‌ನ ಇಲ್ಲಿ ತುಂಬಿಸಿ!’ ಎಂದು ಮಾಲೀಕನೊಬ್ಬ ಬಂಕ್ ಮುಂದೆ ಜಾಹೀರಾತು ಹಾಕುತ್ತಿದ್ದಂತೆ ಗಡಿ ಪ್ರದೇಶದ ಜನ ತಮ್ಮ ಬೈಕ್ಗಳಲ್ಲಿ ಪೆಟ್ರೋಲ್ ತುಂಬಿಸಿಕೊಳ್ಳಲು ಮುಗಿ ಬಿದ್ದರು. ಈ ಘಟನೆ ಜಿಲ್ಲೆಯ ಉಚ್ಛಲನಲ್ಲಿ ಕಂಡು ಬಂತು.

ಗುಜರಾತ್‌ನಲ್ಲಿ ಪ್ರತಿ ಲೀಟರ್‌ಗೆ 91.41 ರೂ. ಪೆಟ್ರೋಲ್ ಬೆಲೆ ಇದೆ. ಅಲ್ಲಿಂದ ಗಡಿ ಪ್ರದೇಶವಾದ ಮಹಾರಾಷ್ಟ್ರದಲ್ಲಿ ಪೆಟ್ರೋಲ್ ಬೆಲೆ 100ರ ಗಡಿ ದಾಟಿದೆ.
ಇಂತಹ ಪರಿಸ್ಥಿತಿಯಲ್ಲಿ ಮಹಾರಾಷ್ಟ್ರದ ಗಡಿ ಪ್ರದೇಶಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬಳಕೆ ಶೇ.20ರಷ್ಟು ಕಡಿಮೆಯಾಗಿದೆ. ಮಹಾರಾಷ್ಟ್ರ ಮತ್ತು ಗುಜರಾತ್ ಗಡಿ ಭಾಗದಲ್ಲಿ ಪೆಟ್ರೋಲ್ ಬೆಲೆ ₹10 ಕಡಿಮೆ ಸಿಗುವುದರಿಂದ ಜನ ತಮ್ಮ ಬೈಕ್ಗಳನ್ನ ಫುಲ್ ಟ್ಯಾಂಕ್ ಮಾಡಿಸುತ್ತಿದ್ದಾರೆ.
ಪೆಟ್ರೋಲ್ ಏಕೆ ಕಡಿಮೆ.. ಮಹಾರಾಷ್ಟ್ರದಲ್ಲಿ ಪೆಟ್ರೋಲ್‌ಗೆ ಶೇ.27ರಷ್ಟು ವ್ಯಾಟ್ ವಿಧಿಸಲಾಗಿದೆ. ಗುಜರಾತ್‌ನಲ್ಲಿ ಶೇ.17ರಷ್ಟು ವ್ಯಾಟ್ ಇದೆ. ಹೀಗಾಗಿ, ಗುಜರಾತ್‌ನಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ಗೆ ಸುಮಾರು 9.50 ರೂಪಾಯಿ ಕಡಿಮೆ ಆಗುತ್ತೆ. ಹೀಗಾಗಿ, ಗುಜರಾತ್‌ನಲ್ಲಿ ಪೆಟ್ರೋಲ್ ಬೆಲೆ ಮಹಾರಾಷ್ಟ್ರಕ್ಕಿಂತ 10 ರೂ. ಕಡಿಮೆಯಾಗಿದೆ.