ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450 ಇನ್ನೇನು ಕೆಲವೇ ದಿನಗಳಲ್ಲಿ ರಸ್ತೆಗಿಳಿಯಲಿದೆ. ಈ ಹಿನ್ನೆಲೆಯಲ್ಲಿ ಕಂಪೆನಿ ಟೀಸರ್ ವಿಡಿಯೋ ಬಿಡುಗಡೆಗೊಳಿಸಿದೆ. ಸಾಹಸ ಪ್ರವಾಸಿ ಬೈಕ್ ಈಗಾಗಲೇ ಎಲ್ಲಾ ಪರೀಕ್ಷಾ ಹಂತಗಳನ್ನು ಮುಗಿಸಿದೆ. ಟೀಸರ್‌ನಲ್ಲಿ ಹೊಸ ಆವೃತ್ತಿಯ ಬೈಕ್ ಆಫ್-ರೋಡ್ ಪರಿಸ್ಥಿತಿಗಳಲ್ಲಿ ತನ್ನ ಶಕ್ತಿ ಪ್ರದರ್ಶಿಸಿದೆ.
-
New Royal Enfield Himalayan 450 teased
— RushLane (@rushlane) August 22, 2022 " class="align-text-top noRightClick twitterSection" data="
Video @royalenfield pic.twitter.com/1mNE045xZl
">New Royal Enfield Himalayan 450 teased
— RushLane (@rushlane) August 22, 2022
Video @royalenfield pic.twitter.com/1mNE045xZlNew Royal Enfield Himalayan 450 teased
— RushLane (@rushlane) August 22, 2022
Video @royalenfield pic.twitter.com/1mNE045xZl
ಶಕ್ತಿ, ಸಾಮರ್ಥ್ಯ: 450 cc, ಲಿಕ್ವಿಡ್-ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ. ಎಂಜಿನ್ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್, 40 Bhp ಪವರ್ ಮತ್ತು 40 Nm ಪೀಕ್ ಟಾರ್ಕ್ ಸಾಮರ್ಥ್ಯವಿದೆ. ಸ್ಪೋಕ್ ವೀಲ್‌ಗಳೊಂದಿಗೆ 21-ಇಂಚಿನ ಮುಂಭಾಗ ಮತ್ತು 17-ಇಂಚಿನ ಹಿಂಭಾಗದ ಟೈರ್ ಇರಲಿದೆ. ಎರಡೂ ಬದಿಯಲ್ಲಿ ಡಿಸ್ಕ್ ಬ್ರೇಕ್ ಅಳವಡಿಸಲಾಗಿದೆ. ದೊಡ್ಡ ಇಂಧನ ಟ್ಯಾಂಕ್ ಮತ್ತು ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಈ ರಾಯಲ್ ಎನ್‌ಫೀಲ್ಡ್ ಕೊಡುಗೆಯಲ್ಲಿ ನಿರೀಕ್ಷಿಸಲಾದ ಇತರ ಕೆಲವು ನವೀಕರಣಗಳಾಗಿವೆ. ಬೆಲೆಯ ಬಗ್ಗೆ ಈವರೆಗೆ ನಿಖರ ಮಾಹಿತಿ ಲಭ್ಯವಿಲ್ಲ.
ಇದನ್ನೂ ಓದಿ: 4G ಗಿಂತ 10 ಪಟ್ಟು ವೇಗದ 5G ಸೇವೆ ಇನ್ನಷ್ಟು ಸನಿಹ: ಈ ನಗರಗಳ ಜನರಿಗೆ ಮೊದಲು ಸೌಲಭ್ಯ ಲಭ್ಯ