ETV Bharat / bharat

ದೇಶದ ಅತ್ಯಂತ ಹಳೆಯ ಹುಲಿಗಳಲ್ಲಿ ಒಂದಾದ ರಾಯಲ್​ ಬೆಂಗಾಲ್​​​ 'ರಾಜಾ' ನಿಧನ

ಅತ್ಯಂತ ಹಳೆಯ ಹುಲಿಗಳಲ್ಲಿ ಒಂದಾದ ರಾಯಲ್ ಬೆಂಗಾಲ್​ ರಾಜಾ ಇಂದು ಬೆಳಗ್ಗೆ ನಿಧನವಾಗಿದೆ. ಅದರ ದಿಢೀರ್​ ಸಾವಿನಿಂದಾಗಿ ಅರಣ್ಯ ಸಿಬ್ಬಂದಿ ಕಣ್ಣೀರು ಹಾಕಿದ್ದಾರೆ.

Royal Bengal Tiger dies
Royal Bengal Tiger dies
author img

By

Published : Jul 11, 2022, 8:12 PM IST

ಜಲ್ಪೈಗುರಿ(ಪಶ್ಚಿಮ ಬಂಗಾಳ): ಭಾರತದ ಅತ್ಯಂತ ಹಳೆಯ ಹುಲಿಗಳಲ್ಲಿ ಒಂದಾದ ರಾಯಲ್ ಬೆಂಗಾಲ್​ 'ರಾಜಾ' ಇಂದು ನಿಧನವಾಗಿದೆ. ಅದಕ್ಕೆ 25 ವರ್ಷ 10 ತಿಂಗಳು ಆಗಿತ್ತು ಎಂದು ಅರಣ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 2018ರಲ್ಲಿ ಸುಂದರಬನ್​​ ಅರಣ್ಯ ಪ್ರದೇಶದಲ್ಲಿ ಮೊಸಳೆ ಕಚ್ಚಿ ಒಂದು ಕಾಲು ಸಂಪೂರ್ಣವಾಗಿ ಕಳೆದುಕೊಂಡಿದ್ದ ರಾಯಲ್​ಗೆ ಬೆಂಗಾಲ್​ ಟೈಗರ್ ರಾಜಾಗೆ ಕೃತಕ ಕಾಲು ಜೋಡಣೆ ಮಾಡಲಾಗಿತ್ತು. ಅಂದಿನಿಂದಲೂ ದಕ್ಷಿಣ ಖೈರ್‌ಬರಿಯಲ್ಲಿರುವ ರಾಯಲ್ ಬೆಂಗಾಲ್ ಹುಲಿ ಪುನರ್ವಸತಿ ಕೇಂದ್ರದಲ್ಲಿ ಉಳಿದುಕೊಂಡಿತ್ತು.

ದೇಶದ ಅತ್ಯಂತ ಹಳೆಯ ಹುಲಿಗಳಲ್ಲಿ ಒಂದಾದ ರಾಯಲ್​ ಬೆಂಗಾಲ್​​​ 'ರಾಜಾ' ನಿಧನ

ಇಂದು ಬೆಳಗ್ಗೆ ಜಲ್ದಪಾರಾ ಅರಣ್ಯ ಪ್ರದೇಶದಲ್ಲಿ ಈ ಹುಲಿ ಸಾವನ್ನಪ್ಪಿದ್ದಾಗಿ ಸಿಬ್ಬಂದಿ ತಿಳಿಸಿದ್ದಾರೆ. ಕಳೆದ ಆಗಸ್ಟ್ ತಿಂಗಳಲ್ಲಿ ಈ ಹುಲಿಯ 25ನೇ ವರ್ಷದ ಹುಟ್ಟುಹಬ್ಬ ಸಂಭ್ರಮಾಚರಣೆ ಮಾಡಲಾಗಿತ್ತು. ಹುಲಿಯಲ್ಲಿ ಯಾವುದೇ ರೀತಿಯ ಗಂಭೀರ ಅನಾರೋಗ್ಯ ಕಂಡು ಬಂದಿರಲಿಲ್ಲ. ಆದರೆ, ವೃದ್ಧಾಪ್ಯ ಸಂಬಂಧಿತ ಸಮಸ್ಯೆಯಿಂದ ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಪಶು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿರಿ: ಬೀಚ್​​ನಲ್ಲಿ ಪತ್ತೆಯಾಯ್ತು ಅಪರೂಪದ ಸಸ್ಯಹಾರಿ ಮೀನು.. ಬರೋಬ್ಬರಿ 3 ಟನ್​ ತೂಕ!

2008ರಲ್ಲಿ ಸುಂದರ್​ಬನ್ಸ್ ನದಿಯಲ್ಲಿ ಈಜುತ್ತಿದ್ದ ವೇಳೆ ಮೊಸಳೆ ದಾಳಿಗೆ ಒಳಗಾಗಿ ಸಂಪೂರ್ಣವಾಗಿ ಒಂದು ಕಾಲು ಕಳೆದುಕೊಂಡಿತ್ತು.ಈ ವೇಳೆ ಪಶು ವೈದ್ಯರು ಕೃತಕ ಕಾಲು ಜೋಡಣೆ ಮಾಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.