ಚೆನ್ನೈ: ಇಲ್ಲಿನ ನಗರ ಸ್ಥಳೀಯ ಸಂಸ್ಥೆ ಚುನಾವಣೆಗೂ ಮುನ್ನ ಡಿಎಂಕೆ ಪರ ಪ್ರಚಾರ ಮಾಡಿದ್ದ ರೊಮೇನಿಯಾದ ಉದ್ಯಮಿ ನೆಗೊಯಿಟಾ ಸ್ಟೀಫನ್ ಮಾರಿಯಸ್ ಅವರಿಗೆ ಎಚ್ಚರಿಕೆ ನೀಡಲಾಗಿದೆ. ವಿದೇಶಿಯರ ಪ್ರಾದೇಶಿಕ ನೋಂದಣಿ ಅಧಿಕಾರಿಗಳು ಅವರನ್ನು ಕರೆಸಿ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಕೊಯಮತ್ತೂರ್‌ಗೆ ಇವರು ಪ್ರವಾಸದ ಮೇಲೆ ಬಂದಿದ್ದರು.
ಕೊಯಮತ್ತೂರಿನಲ್ಲಿ ಡಿಎಂಕೆ ಧ್ವಜಗಳಿಂದ ಅಲಂಕರಿಸಲ್ಪಟ್ಟ ಮೋಟಾರ್‌ಬೈಕ್‌ನಲ್ಲಿ ಬುಧವಾರ ನಗರದಾದ್ಯಂತ ರಸ್ತೆಯಲ್ಲಿರುವ ಜನರಿಗೆ ಮತ್ತು ಬಸ್ ಪ್ರಯಾಣಿಕರಿಗೆ ಡಿಎಂಕೆ ಕರಪತ್ರಗಳನ್ನು ಇವರು ಹಂಚಿದ್ದರು ಎನ್ನಲಾಗ್ತಿದೆ. ಇದರ ನಡುವೆ ಡಿಎಂಕೆ ಸದಸ್ಯರೊಬ್ಬರು ಈ ಬಗ್ಗೆ ಮಾತನಾಡಿ, ನೆಗೋಯಿಟಾ ತನ್ನ ಸ್ವಂತ ಆಸಕ್ತಿಯಿಂದ ಪ್ರಚಾರ ಮಾಡಿದ್ದಾರೆ ಮತ್ತು ಡಿಎಂಕೆಯ ಯೋಜನೆಗಳಿಂದ ಪ್ರಭಾವಿತರಾಗಿದ್ದಾರೆ ಎಂದು ಹೊಗಳಿದ್ದರು.
ವಿದೇಶಿಯರ ವೀಸಾ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ನುಂಗಂಬಾಕ್ಕಂನಲ್ಲಿರುವ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಯಲ್ಲಿ ಅವರನ್ನು ವಿಚಾರಣೆ ನಡೆಸಿ ವಿವರಣೆ ಪಡೆದುಕೊಳ್ಳಲಾಗಿದೆ.
ಇದನ್ನೂ ಓದಿ: 12ನೇ ಅಂತಸ್ತಿನಲ್ಲಿ ವ್ಯಕ್ತಿಯಿಂದ ಅಪಾಯಕಾರಿ ವರ್ಕೌಟ್, ನೀವು ಪ್ರಯತ್ನಿಸಬೇಡಿ- ವೈರಲ್ ವಿಡಿಯೋ
ಸ್ಟೀಫನ್ ನೆಗೋಯಿಟಾ ಅವರಿಗೆ ಈ ದೇಶದಲ್ಲಿ ಯಾವುದೇ ರಾಜಕೀಯ ಮತ್ತು ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತಿಲ್ಲ ಎಂದು ನೋಟಿಸ್ ನೀಡಲಾಗಿದೆ.