ETV Bharat / bharat

ಕ್ರೂರಾತಿಕ್ರೂರ.. ಮೊಬೈಲ್​ ಕಳ್ಳತನ ಮಾಡಲು ವ್ಯಕ್ತಿಯನ್ನು ರಸ್ತೆಯಲ್ಲಿ ಎಳೆದೊಯ್ದರು..! - ಕೋಯಿಕ್ಕೋಡ್ ಕ್ರೈಮ್ಸ್

ಮೊಬೈಲ್ ಕಳ್ಳತನ ಮಾಡಲು ಬೈಕ್​ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಓರ್ವ ವ್ಯಕ್ತಿಯನ್ನು ದಾರುಣವಾಗಿ ರಸ್ತೆಯಲ್ಲಿ ಎಳೆದೊಯ್ದ ಘಟನೆ ಕೇರಳದಲ್ಲಿ ನಡೆದಿದೆ.

Robbery gang dragged an inter-state worker in bike in Koduvalli
ಕ್ರೂರಾತಿಕ್ರೂರ.. ಮೊಬೈಲ್​ ಕಳ್ಳತನ ಮಾಡಲು ವ್ಯಕ್ತಿಯನ್ನು ರಸ್ತೆಯಲ್ಲಿ ಎಳೆದೊಯ್ದರು
author img

By

Published : Jul 3, 2021, 5:03 AM IST

ಕೊಯಿಕ್ಕೋಡ್, ಕೇರಳ: ಬೈಕ್​ನಲ್ಲಿ ಮೊಬೈಲ್ ಕಳ್ಳತನ ಮಾಡಲು ಬಂದ ಇಬ್ಬರು ದುಷ್ಕರ್ಮಿಗಳು ಓರ್ವ ವ್ಯಕ್ತಿಯನ್ನು ರಸ್ತೆಯಲ್ಲಿ ಭೀಕರವಾಗಿ ಎಳೆದೊಯ್ದ ಘಟನೆ ಕೇರಳದ ಕೋಯಿಕ್ಕೋಡ್ ಜಿಲ್ಲೆಯ ಕೋಡುವಲ್ಲಿ ಎಲ್ಲೆಟ್ ಬಳಿಯ ವಟ್ಟೋಲಿ ಎಂಬಲ್ಲಿ ನಡೆದಿದೆ.

ಬಿಹಾರ ಮೂಲದ ವಲಸಿಗ ಕಾರ್ಮಿಕ ಅಲಿ ಅಕ್ಬರ್ ರಸ್ತೆ ಪಕ್ಕದಲ್ಲಿ ನಿಂತಿದ್ದನು. ಈ ವೇಳೆ ಬೈಕ್​ನಲ್ಲಿ ದುಷ್ಕರ್ಮಿಗಳು ಮಾತನಾಡಲು ಮೊಬೈಲ್ ಬೇಕೆಂದು ಕೇಳಿದ್ದಾರೆ. ಅಲಿ ಅಕ್ಬರ್ ಅವರು ಕೇಳಿದ ತಕ್ಷಣ ಮೊಬೈಲ್ ಅನ್ನು ಅವರ ಕೈಗೆ ನೀಡಿದ್ದಾನೆ.

ಮೊಬೈಲ್ ಕಳ್ಳರು ವ್ಯಕ್ತಿಯನ್ನು ಎಳೆದೊಯ್ದ ದೃಶ್ಯ

ಈ ವೇಳೆ ನಂಬರ್ ಡಯಲ್ ಮಾಡಿದಂತೆ ಹಿಂಬದಿ ಬೈಕ್ ಸವಾರ ನಟಿಸಿದ್ದು, ಮೊಬೈಲ್ ವಾಪಸ್​ ನೀಡದೇ ಬೈಕ್​ ಅನ್ನು ವೇಗವಾಗಿ ಓಡಿಸಲು ಪ್ರಯತ್ನಿಸಿದ್ದಾರೆ. ಈ ವೇಳೆ ಎಚ್ಚೆತ್ತುಕೊಂಡ ಅಲಿ ಅಕ್ಬರ್ ಬೈಕ್ ಅನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾನೆ.

ಬೈಕ್ ರಸ್ತೆಯಲ್ಲಿ ಸುಮಾರು ದೂರ ಚಲಿಸಿದ್ದು, ಅಲಿ ಅಕ್ಬರ್ ಕೂಡಾ ಬೈಕ್​ನೊಂದಿಗೆ ರಸ್ತೆಯಲ್ಲಿ ಎಳೆಯಲ್ಪಟ್ಟಿದ್ದು, ತುಂಬಾ ಭೀಭತ್ಸವಾಗಿ ಗೋಚರಿಸುತ್ತದೆ. ಸ್ವಲ್ಪ ದೂರ ತೆರಳಿದ ನಂತರ ಬೈಕ್ ಹಿಂಬದಿ ಸವಾರ ಕೂಡಾ ನೆಲದ ಮೇಲೆ ಬಿದ್ದಿದ್ದು, ಅವನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಈ ವೇಳೆ ಗಂಭೀರವಾಗಿ ಗಾಯಗೊಂಡ ಅಲಿ ಅಕ್ಬರ್​ನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: ಕಾಶ್ಮೀರದಲ್ಲಿ ಕಂದಕಕ್ಕೆ ವಾಹನ ಉರುಳಿ ಐದು ಮಂದಿ ದುರ್ಮರಣ: ಪ್ರಧಾನಿ ಸಂತಾಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.