ETV Bharat / bharat

ದರೋಡೆಗೆ ಬಂದು ಯಮನ ಪಾದ ಸೇರಿದ.. ಪಂಜಾಬ್​ ಬಂಕ್​ನಲ್ಲಿ ಲೂಟಿಕೋರನ ಹತ್ಯೆ - ಭದ್ರತಾ ಸಿಬ್ಬಂದಿ ಗುಂಡೇಟಿಗೆ ಕಳ್ಳ ಮಟಾಶ್​

ಪೆಟ್ರೋಲ್​ ಪಂಪ್​ ಲೂಟಿ ಮಾಡಲು ಬಂದ ದರೋಡೆಕೋರನ ಮೇಲೆ ಭದ್ರತಾ ಸಿಬ್ಬಂದಿ ಗುಂಡಿನ ದಾಳಿ ಮಾಡಿದ್ದು, ಆತ ಸ್ಥಳದಲ್ಲೇ ಮೃತಪಟ್ಟ ಘಟನೆ ಪಂಜಾಬ್​ನ ಅಮೃತಸರದಲ್ಲಿ ನಡೆದಿದೆ.

robber-shot-dead-by-security-guard-in-punjab
ಪಂಜಾಬ್​ ಬಂಕ್​ನಲ್ಲಿ ಲೂಟಿಕೋರನ ಹತ್ಯೆ
author img

By

Published : Oct 31, 2022, 1:00 PM IST

ಅಮೃತಸರ(ಪಂಜಾಬ್​​): ರಾಜಾರೋಷವಾಗಿ ಪೆಟ್ರೋಲ್​ ಪಂಪ್​ನಲ್ಲಿ ದರೋಡೆ ಮಾಡಲು ಬಂದ ಕಳ್ಳ ಅಲ್ಲಿನ ಭದ್ರತಾ ಸಿಬ್ಬಂದಿಯ ಗುಂಡೇಟಿಗೆ ಸ್ಥಳದಲ್ಲೇ ಮೃತಪಟ್ಟ ಘಟನೆ ಪಂಜಾಬ್​ನ ಅಮೃತಸರದಲ್ಲಿ ಭಾನುವಾರ ತಡರಾತ್ರಿ ನಡೆದಿದೆ. ಈ ದೃಶ್ಯ ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಘಟನೆ ಏನು?: ಅಮೃತಸರದಲ್ಲಿನ ಪೆಟ್ರೋಲ್​ ಪಂಪ್​ಗೆ ರಾತ್ರಿ ವೇಳೆ ಬೈಕ್​ ಮೇಲೆ ಬಂದ ಇಬ್ಬರು ದರೋಡೆಕೋರರಲ್ಲಿ ಒಬ್ಬ ಪಿಸ್ತೂಲ್​ ತೋರಿಸುತ್ತ ಬೆದರಿಸಿ ಸಿಬ್ಬಂದಿ ಬಳಿಯಿದ್ದ ಹಣವನ್ನು ದೋಚಿದ್ದಾನೆ. ಬಳಿಕ ಗ್ರಾಹಕನ ಬಳಿಯ ಹಣವನ್ನು ಕಸಿಯಲು ಮುಂದಾಗಿದ್ದಾನೆ.

ಈ ವೇಳೆ ಅಲ್ಲಿಯೇ ಇದ್ದ ಭದ್ರತಾ ಸಿಬ್ಬಂದಿ ಬಂದೂಕಿನಿಂದ ದರೋಡೆಕೋರನ ಮೇಲೆ ಗುಂಡು ಹಾರಿಸಿದ್ದಾರೆ. ಎದೆಗೆ ಗುಂಡು ತಗುಲಿದ್ದರಿಂದ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇನ್ನೊಬ್ಬ ದರೋಡೆಕೋರ ಬೈಕ್​ನಲ್ಲಿ ಪರಾರಿಯಾಗಿದ್ದಾನೆ.

ಮೊದಲು 80 ಸಾವಿರ ದೋಚಿದ್ದ ಖದೀಮ: ಇದಕ್ಕೂ ಮೊದಲು ಇದೇ ಪೆಟ್ರೋಲ್​ ಪಂಪ್​ನಲ್ಲಿ ದರೋಡೆಕೋರ ಬಂದೂಕು ತೋರಿಸಿ ಬೆದರಿಸಿ 80 ಸಾವಿರ ರೂಪಾಯಿ ದೋಚಿದ್ದ. ಇದರಿಂದ ಬಂಕ್​ ಆಡಳಿತ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿತ್ತು. ಭಾನುವಾರ ಮತ್ತೆ ಅದೇ ಬಂಕ್​ಗೆ ಬಂದು ದರೋಡೆ ಮಾಡುವಾಗ ಪ್ರಾಣ ಕಳೆದುಕೊಂಡಿದ್ದಾನೆ. ಈ ದೃಶ್ಯ ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಪಂಜಾಬ್​ ಬಂಕ್​ನಲ್ಲಿ ಲೂಟಿಕೋರನ ಹತ್ಯೆ

ಈ ಬಗ್ಗೆ ಮಾಹಿತಿ ನೀಡಿದ ಪೊಲೀಸರು, ದರೋಡೆಕೋರರು ಈ ಮೊದಲೂ ಬಂಕ್​ ಲೂಟಿ ಮಾಡಿದ್ದರು. ಎಚ್ಚೆತ್ತುಕೊಂಡ ಸಿಬ್ಬಂದಿ ಸೆಕ್ಯೂರಿಟಿ ನೇಮಿಸಿಕೊಂಡಿದ್ದರು. ನಿನ್ನೆ ರಾತ್ರಿ ಮತ್ತೆ ದರೋಡೆಗೆ ಬಂದಾಗ ಭದ್ರತಾ ಸಿಬ್ಬಂದಿಯ ಗುಂಡೇಟಿಗೆ ಕಳ್ಳ ಹತನಾಗಿದ್ದಾನೆ. ಈತನಿಂದ ಪಿಸ್ತೂಲ್ ಮತ್ತು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಓದಿ: ಕುಸಿದು ಬಿದ್ದ ಮೊರ್ಬಿ ಸೇತುವೆ.. ಸಿಸಿಟಿವಿಯಲ್ಲಿ ಸೇತುವೆ ಕುಸಿಯುತ್ತಿರುವ ದೃಶ್ಯ ಸೆರೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.