ETV Bharat / bharat

ಮೀನು ಮಾರಾಟಕ್ಕಾಗಿ ಪೈಪೋಟಿ: ಎರಡು ಗುಂಪುಗಳ ನಡುವೆ ಘರ್ಷಣೆ, ಪೆಟ್ರೋಲ್​ ಬಾಂಬ್​ ಎಸೆತ

ದಿಂಡಿಗಲ್​ ಜಿಲ್ಲೆಯ ನಿಲಕೊಟ್ಟೈ ಬಳಿ ಸೋಮವಾರ ತಡರಾತ್ರಿ ಈ ಘಟನೆ ನಡೆದಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ ಮಾಹಿತಿ ನೀಡಿದ್ದಾರೆ.

Rivalry over sale of fish leads to violence in TN village
ಮೀನು ಮಾರಾಟಕ್ಕಾಗಿ ಪೈಪೋಟಿ: ಎರಡು ಗುಂಪುಗಳ ನಡುವೆ ಘರ್ಷಣೆ, ಪೆಟ್ರೋಲ್​ ಬಾಂಬ್​ ಎಸೆತ
author img

By

Published : May 17, 2022, 9:59 PM IST

ದಿಂಡಿಗಲ್​(ತಮಿಳುನಾಡು): ಜಿಲ್ಲೆಯಲ್ಲಿ ಮೀನು ಮಾರಾಟಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳು ನಡುವೆ ಘರ್ಷಣೆ ಸಂಭವಿಸಿದೆ. ಸೋಮವಾರ ತಡರಾತ್ರಿ ದಿಂಡಿಗಲ್​​ನ ಹಳ್ಳಿಯೊಂದರಲ್ಲಿ ಐದು ಜನರ ಮೇಲೆ ಹರಿತವಾದ ಆಯುಧಗಳಿಂದ ಹಲ್ಲೆ ಮಾಡಲಾಗಿದೆ. ಅಷ್ಟೇ ಅಲ್ಲ ಮನೆಗಳ ಮೇಲೆ 'ಪೆಟ್ರೋಲ್ ಬಾಂಬ್' ಎಸೆಯಲಾಗಿದೆ.

ದಿಂಡಿಗಲ್​ ಜಿಲ್ಲೆಯ ನಿಲಕೊಟ್ಟೈ ಬಳಿ ಸೋಮವಾರ ತಡರಾತ್ರಿ ಈ ಘಟನೆ ನಡೆದಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ ಮಾಹಿತಿ ನೀಡಿದ್ದಾರೆ.

ಮೀನು ಮಾರಾಟ ವಿಚಾರವಾಗಿ ಎರಡು ಗುಂಪುಗಳ ನಡುವೆ ಸೋಮವಾರ ಬೆಳಗ್ಗೆ ಸಣ್ಣ ಘರ್ಷಣೆ ನಡೆದಿದೆ. ಅಷ್ಟಕ್ಕೇ ಮುಗಿಯದ ಈ ಘರ್ಷಣೆ, ಸೋಮವಾರ ತಡರಾತ್ರಿ ಭುಗಿಲೆದ್ದಿದೆ. ಒಂದು ಗುಂಪು ಹೆಚ್ಚಿನ ಜನರೊಂದಿಗೆ ಬಂದು ರಾತ್ರಿ ವೇಳೆ ಮತ್ತೊಂದು ಗುಂಪಿನ ಮೇಲೆ ದಾಳಿ ನಡೆಸಿದೆ. ರಾತ್ರಿ ಏಕಾಏಕಿ ನಡೆದ ಈ ದಾಳಿಯಲ್ಲಿ ಐದು ಮನೆಗಳಿಗೆ ಹಾನಿಯಾಗಿದೆ. ಎರಡು 'ಪೆಟ್ರೋಲ್ ಬಾಂಬ್'ಗಳನ್ನೂ ಎಸೆಯಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಈ ದಾಳಿ ವೇಳೆ ಹಲವರು ಗಾಯಗೊಂಡಿದ್ದಾರೆ. ಸಮೀಪದಲ್ಲಿ ನಿಲ್ಲಿಸಿದ್ದ ವಾಹನಗಳಿಗೂ ಹಾನಿಯಾಗಿದೆ. ಹಿಂಸಾಚಾರದಲ್ಲಿ ಭಾಗಿಯಾಗಿರುವವರನ್ನು ಬಂಧಿಸಲು ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನು ಓದಿ:ICUನಲ್ಲಿ ಚಿಕಿತ್ಸೆ ಪಡೀತಿದ್ದ ಪಾರ್ಶ್ವವಾಯು ಪೀಡಿತ ಮಹಿಳೆ ಕಣ್ಣಿನ ರೆಪ್ಪೆ ಕಚ್ಚಿ, ಕೂದಲು ತಿಂದ ಮೂಸಿಕ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.