ಹೈದರಾಬಾದ್: ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೀಡಾಗಿ ಇಂದಿಗೆ ಒಂದು ವರ್ಷ. ಅವರ ಮೊದಲ ವರ್ಷದ ಪುಣ್ಯಸ್ಮರಣೆಯಂದು ನಟಿ ರಿಯಾ ಚಕ್ರವರ್ತಿ ಭಾವನಾತ್ಮಕ ಲೇಖನವೊಂದನ್ನು ಬರೆದಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಈ ಬಗ್ಗೆ ತಮ್ಮ ನೋವು ವ್ಯಕ್ತಪಡಿಸಿರುವ ಅವರು, ಸುಶಾಂತ್ ಅವರ ಸಂತೋಷದ ದಿನಗಳನ್ನು ಒಳಗೊಂಡ ಚಿತ್ರವನ್ನು ಹಂಚಿಕೊಂಡಿದ್ದಾರೆ. ನೀವು ಇಲ್ಲಿಲ್ಲ ಎಂದು ನಾನು ನಂಬುವ ಒಂದು ಕ್ಷಣವೂ ಇಲ್ಲ. ನೀವೇ ನನಗೆ ಎಲ್ಲ ಎಂದು ನನಗೆ ತಿಳಿದಿದೆ. ನನ್ನ ರಕ್ಷಕ ದೇವತೆ ನೀವಾಗಿದ್ದೀರಿ. ಚಂದ್ರನಲ್ಲಿರುವ ನೀವು ದೂರದರ್ಶಕದಿಂದ ನನ್ನನ್ನು ನೋಡುತ್ತಿದ್ದೀರಿ. ಹಾಗೆ ರಕ್ಷಿಸುತ್ತಿದ್ದೀರಾ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.
ನೀವಿಲ್ಲದ ಗೈರನ್ನು ಪ್ರತಿ ಸಮಯ ನೆನಪಿಕೊಳ್ಳುತ್ತೇನೆ. ನೀವು ನನ್ನೊಂದಿಗೆ ಇದ್ದೀರಾ ಎಂಬುದು ನನ್ನಗೆ ತಿಳಿದಿದೆ. ಎಲ್ಲಕಡೆ ನಿನ್ನನ್ನೇ ನೋಡುತ್ತಿರುತ್ತೇನೆ. ಐ ಮಿಸ್ ಯೂ, ಮೈ ಬೆಸ್ಟ್ ಫ್ರೆಂಡ್, ಮೈ ಮ್ಯಾನ್, ಮೈ ಲವ್ ಎಂದು ಬರೆದುಕೊಂಡಿದ್ದಾರೆ.
ಬಾಂದ್ರಾದಲ್ಲಿನ ತಮ್ಮ ಅಪಾರ್ಟ್ ಮೆಂಟ್ ನಲ್ಲಿ ಸುಶಾಂತ್ ಸಿಂಗ್ ರಜಪೂತ್ ಜೂನ್ 14, 2020ರಂದು ನೇಣು ಬಿಗಿದ ಸ್ಥಿತಿಯಲ್ಲಿ ಮೃತ ಪಟ್ಟಿದ್ದರು.