ETV Bharat / bharat

ಹಿಂದೂ ದೇಗುಲಗಳ ಮೇಲೆ ಕಮ್ಯೂನಿಸ್ಟ್​ ಸರ್ಕಾರಗಳ ಹಿಡಿತ: ನಿವೃತ್ತ ನ್ಯಾ. ಇಂದು ಮಲ್ಹೋತ್ರಾ

ಹಿಂದೂ ದೇವಾಲಯಗಳ ಮೇಲೆ ಕಮ್ಯೂನಿಸ್ಟ್ ಸರ್ಕಾರಗಳ ಹಿಡಿತವಿದೆ ಎಂದು ನಿವೃತ್ತ ನ್ಯಾಯಮೂರ್ತಿ ಇಂದು ಮಲ್ಹೋತ್ರಾ ಅವರು ಹೇಳಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

retired-justice-indu-malhotra
ನಿವೃತ್ತ ನ್ಯಾ.ಇಂದು ಮಲ್ಹೋತ್ರಾ
author img

By

Published : Aug 29, 2022, 1:08 PM IST

ತಿರುವನಂತಪುರ(ಕೇರಳ): ಕಮ್ಯುನಿಸ್ಟ್ ಸರ್ಕಾರಗಳು ಹಿಂದೂ ದೇವಾಲಯಗಳ ಮೇಲೆ ಹಿಡಿತ ಸಾಧಿಸಿವೆ ಎಂದು ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಇಂದು ಮಲ್ಹೋತ್ರಾ ಅವರು ಹೇಳಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಕೇರಳದ ಪದ್ಮನಾಭಸ್ವಾಮಿ ದೇಗುಲದ ಮುಂದೆ ಭಕ್ತರು ಮತ್ತು ಅರ್ಚಕರ ಜೊತೆ ಮಾತನಾಡುವಾಗ ಈ ವಿಡಿಯೋವನ್ನು ಚಿತ್ರೀಕರಿಸಲಾಗಿದೆ ಎಂದು ಹೇಳಲಾಗಿದೆ.

ಕೇರಳದ ಪದ್ಮನಾಭಸ್ವಾಮಿ ದೇಗುಲಕ್ಕೆ ಸಂಬಂಧಿಸಿದಂತೆ ತಾನು ಮತ್ತು ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್‌ ಸೇರಿದಂತೆ ಕೆಲವರು ಇಂತಹ ಪ್ರಯತ್ನವನ್ನು ನಿಲ್ಲಿಸಿದ್ದಾಗಿ ಹೇಳುತ್ತಿರುವುದು ವಿಡಿಯೋದಲ್ಲಿದೆ.

ಕಮ್ಯುನಿಸ್ಟ್‌ ಸರ್ಕಾರಗಳಿರುವೆಡೆ ಇಂತಹ ಕೃತ್ಯಗಳು ನಡೆಯುತ್ತವೆ. ಅವರು ಆದಾಯದ ಕಾರಣಕ್ಕಾಗಿ ದೇವಾಲಯಗಳನ್ನು ಸ್ವಾಧೀನಪಡಿಸಿಕೊಳ್ಳಲು ಬಯಸುತ್ತಾರೆ. ಅವರಿಗೆ ಬೇಕಾಗಿದ್ದು ಕೇವಲ ಆದಾಯ ಅಷ್ಟೇ. ಹೀಗಾಗಿ ಹಿಂದೂ ದೇವಾಲಯಗಳನ್ನು ಮಾತ್ರ ತಮ್ಮ ತೆಕ್ಕೆಗೆ ಪಡೆದಿರುತ್ತಾರೆ. ಇಂತಹ ಕೆಲಸಗಳಿಗೆ ನ್ಯಾ. ಲಲಿತ್‌ ಮತ್ತು ನಾನು ಅನುಮತಿ ನೀಡುವುದಿಲ್ಲ ಎಂದು ಹೇಳಿದ್ದೆವು ಎಂಬುದಾಗಿ ಅವರು ವಿಡಿಯೋದಲ್ಲಿ ಹೇಳಿದ್ದಾರೆ.

ಇದೇ ವೇಳೆ, ಪದ್ಮನಾಭಸ್ವಾಮಿ ದೇವಸ್ಥಾನ ನಿರ್ವಹಣೆಯ ಹಕ್ಕು ತಿರುವಾಂಕೂರು ರಾಜಮನೆತನಕ್ಕೆ ಸೇರಿದ್ದು ಎಂದು ನ್ಯಾ. ಲಲಿತ್‌ ಅವರಿದ್ದ ಸುಪ್ರೀಂಕೋರ್ಟ್‌ ಪೀಠ ಜುಲೈ 2020ರಲ್ಲಿ ನೀಡಿದ್ದ ತೀರ್ಪನ್ನು ನ್ಯಾ. ಇಂದು ಅವರು ಉಲ್ಲೇಖಿಸಿದ್ದಾರೆ. ನಿವೃತ್ತ ನ್ಯಾಯಮೂರ್ತಿ ಇಂದು ಮಲ್ಹೋತ್ರಾ ಅವರು 2018 ರಲ್ಲಿ ಶಬರಿಮಲೆಗೆ ಮಹಿಳೆಯರ ಪ್ರವೇಶದ ಕುರಿತಾದ ಪ್ರಕರಣದ ವಿಚಾರಣೆ ನಡೆಸಿದ ಐವರು ಪೀಠದ ಭಾಗವಾಗಿದ್ದರು.

ಓದಿ: ಹಿಜಾಬ್​ ಅರ್ಜಿ ವಿಚಾರಣೆ... ರಾಜ್ಯ ಸರ್ಕಾರಕ್ಕೆ ಸುಪ್ರೀಂ ನೋಟಿಸ್​​.. ಸೆಪ್ಟೆಂಬರ್​ 5 ಕ್ಕೆ ವಿಚಾರಣೆ ಮುಂದೂಡಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.