ETV Bharat / bharat

IIT ಪ್ರವೇಶ ಪರೀಕ್ಷೆಯ JEE-Advanced ಫಲಿತಾಂಶ ಪ್ರಕಟ: ವಾವಿಲಾಲ ಚಿದ್ವಿಲಾ ರೆಡ್ಡಿಗೆ ಫಸ್ಟ್‌ ರ‍್ಯಾಂಕ್

IIT ಪ್ರವೇಶ ಪರೀಕ್ಷೆಯ JEE-Advanced ಪರೀಕ್ಷೆಯ ಫಲಿತಾಂಶ ಇಂದು ಪ್ರಕಟವಾಗಿದೆ.

ಜೆಇಇ  ಅಡ್ವಾನ್ಸ್‌ಡ್‌ ಪರೀಕ್ಷೆ ಫಲಿತಾಂಶ
JEE-Advanced exam Results
author img

By

Published : Jun 18, 2023, 1:18 PM IST

ನವದೆಹಲಿ : ಭಾರತೀಯ ತಂತ್ರಜ್ಞಾನ ಸಂಸ್ಥೆಗಳಿಗೆ (IIT ) ಪ್ರವೇಶಾತಿ ನಿರ್ಧರಿಸಲು ನಡೆದ ಜೆಇಇ - ಅಡ್ವಾನ್ಸ್‌ಡ್‌​ (JEE - Advanced) ಉನ್ನತ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟವಾಗಿದೆ. ಹೈದರಾಬಾದ್ ಮೂಲದ ವಾವಿಲಾಲ ಚಿದ್ವಿಲಾಸ್ ರೆಡ್ಡಿ ಅತಿ ಹೆಚ್ಚು ಅಂಕಗಳಿಸುವ ಮೂಲಕ ಪ್ರಥಮ ರ‍್ಯಾಂಕ್​ ಗಳಿಸಿದ್ದಾರೆ.

ಈ ವರ್ಷದ JEE - Advanced ಪರೀಕ್ಷೆಯನ್ನು ಐಐಟಿ ಗುವಾಹಟಿ ನಡೆಸಿತ್ತು. ವಾವಿಲಾಲ ರೆಡ್ಡಿ ಅವರು 360 ಅಂಕಗಳಿಗೆ 341 ಅಂಕಗಳನ್ನು ಗಳಿಸಿ ವಿಶೇಷ ಸಾಧನೆ ತೋರಿದ್ದಾರೆ. ಹಾಗೆಯೇ, ವಿದ್ಯಾರ್ಥಿನಿಯರ ಪೈಕಿ, ಐಐಟಿ ಹೈದರಾಬಾದ್ ವಲಯದ ನಾಯಕಿ ನಾಗ ಭವ್ಯ ಶ್ರೀ ಅವರು 298 ಅಂಕ ಪಡೆಯುವ ಮೂಲಕ ಮಹಿಳಾ ವಿಭಾಗದ ಟಾಪರ್ ಆಗಿದ್ದಾರೆ.

" ಐಐಟಿ - ಜೆಇಇ ಅಡ್ವಾನ್ಸ್‌ಡ್‌ನಲ್ಲಿ ಒಟ್ಟು 1,80,372 ಮಂದಿ ಎರಡೂ ಪರೀಕ್ಷೆ ಬರೆದಿದ್ದು, ಅದರಲ್ಲಿ 43,773 ಮಂದಿ ಅರ್ಹತೆ ಪಡೆದಿದ್ದಾರೆ. 36,204 ಪುರುಷ ವಿದ್ಯಾರ್ಥಿಗಳು ಮತ್ತು 7,509 ವಿದ್ಯಾರ್ಥಿನಿಯರು 2023ರಲ್ಲಿ ತೇರ್ಗಡೆಯಾಗಿದ್ದಾರೆ " ಎಂದು ಹಿರಿಯ ಐಐಟಿ ಗುವಾಹಟಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : NEET Result 2023 : ಧ್ರುವ ಅಡ್ವಾಣಿ ರಾಜ್ಯಕ್ಕೆ ಫಸ್ಟ್ , ವಿಕಲಚೇತನ ಮಹಿಳಾ ಕೋಟಾದಲ್ಲಿ ಲಾವಣ್ಯ ಗುಪ್ತ ದೇಶಕ್ಕೆ ಟಾಪರ್

ಜೆಇಇ - ಮೇನ್ ಪರೀಕ್ಷೆಯು ದೇಶಾದ್ಯಂತ ಇರುವ ಎಂಜಿನಿಯರಿಂಗ್ ಕಾಲೇಜುಗಳಿಗೆ ಪ್ರವೇಶ ನಿರ್ಧರಿಸಲು ನಡೆಸುವ ಪರೀಕ್ಷೆಯಾಗಿದ್ದು, ಜೆಇಇ-ಅಡ್ವಾನ್ಸ್‌ಡ್‌ ಅರ್ಹತಾ ಪರೀಕ್ಷೆಯಾಗಿದೆ. ಈ ಪರೀಕ್ಷೆಯನ್ನು ಜೂನ್ 4ರಂದು ನಡೆಸಲಾಗಿತ್ತು.

ಇದನ್ನೂ ಓದಿ : CET Result 2023 : ಒಂದು ವಾರದಲ್ಲಿ ಕೌನ್ಸಿಲಿಂಗ್​ ಪ್ರಾರಂಭ , ಟಾಪರ್ಸ್​ಗೆ ಸರ್ಕಾರದಿಂದ ಸ್ಕಾಲರ್​ಶಿಪ್​

CET Result 2023 : ಇನ್ನು ಕಳೆದ 2 ದಿನಗಳ ಹಿಂದೆ (ಜೂನ್​ 15) ಆರ್ಕಿಟೆಕ್ಚರ್, ಇಂಜಿನಿಯರಿಂಗ್, ಆಯುರ್ವೇದ, ಹೋಮಿಯೋಪತಿ ಮತ್ತು ಫಾರ್ಮಸಿ, ಬಿಎಸ್‌ಸಿ ನರ್ಸಿಂಗ್ ಸೇರಿದಂತೆ ವೃತ್ತಿಪರ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸಲಾಗಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆ ( CET ) ಫಲಿತಾಂಶ ಹೊರಬಿದ್ದಿತ್ತು. ಈ ಎಲ್ಲ ವಿಭಾಗಗಳಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದು ಗಮನಾರ್ಹ. ಬೆಂಗಳೂರಿನ ವಿಜ್ಞೇಶ್ ನಟರಾಜ್ ಕುಮಾರ್ ಎಂಬವರು ಶೇ. 97.88%ರಷ್ಟು ಅಂಕ ಗಳಿಸಿ ಪ್ರಥಮ ರ‍್ಯಾಂಕ್‌ ಪಡೆದಿದ್ದಾರೆ. ಹಾಗೆಯೇ, ಟಾಪ್ 10 ರ‍್ಯಾಂಕ್‌ ಪಟ್ಟಿಯಲ್ಲಿ ಮತ್ತೋರ್ವ ಬೆಂಗಳೂರಿನ ಅರುಣ್ ಕೃಷ್ಣಸ್ವಾಮಿ ಶೇ.97.5 ರಷ್ಟು ಅಂಕಗಳಿಸಿ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಕಳೆದ ಮೇ ತಿಂಗಳ 20ರಿಂದ ಮೇ 22ರ ವರೆಗೆ ಪರೀಕ್ಷೆ ನಡೆಸಲಾಗಿತ್ತು. ಈ ಪರೀಕ್ಷೆಗೆ ದೇಶಾದ್ಯಂತ 2,44,345 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದರು.

ಇದನ್ನೂ ಓದಿ : CET Result 2023 : ಇಂದು ಸಿಇಟಿ ಫಲಿತಾಂಶ ಪ್ರಕಟ. . ರಿಸಲ್ಟ್​ ನೋಡಲು ಹೀಗೆ ಮಾಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.