ETV Bharat / bharat

ಹೆಚ್ಚು ಬಿಲ್​ ವಸೂಲಿ ಆರೋಪ: ಆಸ್ಪತ್ರೆಗೆ ಹಣ ಮರುಪಾವತಿಸುವಂತೆ ಗ್ರಾಹಕ ಆಯೋಗದ ಆದೇಶ

author img

By ETV Bharat Karnataka Team

Published : Jan 9, 2024, 10:44 PM IST

ಕೋವಿಡ್ ಚಿಕಿತ್ಸೆಗೆ ಬಂದವರಿಂದ ಅಧಿಕ ಹಣ ವಸೂಲಿ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಗೆ, ಹೆಚ್ಚುವರಿಯಾಗಿ ಪಡೆದ ಬಿಲ್​​ ಅನ್ನು ಮರುಪಾವತಿಸುವಂತೆ ಗ್ರಾಹಕ ಆಯೋಗ ಆದೇಶಿಸಿದೆ.

ಗ್ರಾಹಕ ಆಯೋಗ
ಗ್ರಾಹಕ ಆಯೋಗ

ಹೈದರಾಬಾದ್ : ಸರ್ಕಾರಿ ಮಾರ್ಗಸೂಚಿಗಳಿಗೆ ವಿರುದ್ಧವಾಗಿ ಆಸ್ಪತ್ರೆಯೊಂದು ಬಿಲ್ ಸಂಗ್ರಹಿಸಿದ್ದಕ್ಕಾಗಿ ಕಾಚಿಗುಡಾದ ಖಾಸಗಿ ಆಸ್ಪತ್ರೆಯೊಂದಕ್ಕೆ ತೆಗೆದುಕೊಂಡ ಹಣವನ್ನು ವಾಪಸ್​ ಮಾಡುವಂತೆ ಹೈದರಾಬಾದ್ ಗ್ರಾಹಕ ಆಯೋಗ ಆದೇಶ ಮಾಡಿದೆ.

ಪ್ರತಿಮಾ ಆಸ್ಪತ್ರೆಗೆ ಹೈದರಾಬಾದ್ ಗ್ರಾಹಕ ಆಯೋಗ ಹಣ ಮರುಪಾವತಿಸುವಂತೆ ಈ ಆದೇಶ ಮಾಡಿದೆ. ಸಿದ್ದಿಪೇಟೆ ಜಿಲ್ಲೆಯ ಗಜ್ವೆಲ್‌ನ ಜಿ. ಸುಕನ್ಯಾ ಅವರು ಕೋವಿಡ್-19 ರೋಗಲಕ್ಷಣಗಳಿಂದ ಬಳಲುತ್ತಿದ್ದರು. 2020ರ ಜೂನ್ 29 ರಂದು ಆಸ್ಪತ್ರೆಯ ವೈದ್ಯರನ್ನು ಸಂಪರ್ಕಿಸಿದ್ದರು. ಆಗ ಅವರು ಈಗಾಗಲೇ ಕೋವಿಡ್ -19 ರೋಗನಿರ್ಣಯಕ್ಕಾಗಿ ಪರೀಕ್ಷೆಗಳಿಗೆ ಒಳಗಾಗಿದ್ದೇನೆ ಮತ್ತು ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದೆ ಎಂದು ವೈದ್ಯರಿಗೆ ಮಾಹಿತಿ ನೀಡಿದ್ದರು.

ಚಿಕಿತ್ಸೆಗೆ ಬಂದವರು ಈ ಬಗ್ಗೆ ಮಾಹಿತಿ ನೀಡಿದರೂ. ಆಸ್ಪತ್ರೆ ವೈದ್ಯರು, ಕೋವಿಡ್-19ಕ್ಕೆ ಸಂಬಂಧಿಸಿದ ಚಿಕಿತ್ಸೆಯನ್ನು ನೀಡಿದ್ದರು. ಈ ರೋಗಕ್ಕೆ ನೀಡಿದ ಚಿಕಿತ್ಸೆಗಾಗಿ ರೋಗಿಯಿಂದ ಬರೋಬ್ಬರಿ 2,67,514 ರೂಪಾಯಿ ಬಿಲ್ ಮಾಡಿದ್ದರು. ಈ ಬಗ್ಗೆ ಗ್ರಾಹಕ ಆಯೋಗಕ್ಕೆ ದೂರು ನೀಡಿದ್ದರು. ಈ ಸಂಬಂಧ ದೂರು ದಾಖಲಿಸಿಕೊಂಡ ಆಯೋಗ ವಿಚಾರಣೆ ನಡೆಸಿತ್ತು. ಆಯೋಗದ ತನಿಖಾ ಪೀಠವು ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ್ದು, ಆರೋಗ್ಯ ವಿಮೆ ಮೂಲಕ ರೂ.1,42,689 ನಗದು ರಹಿತ ಚಿಕಿತ್ಸೆ ಪಡೆದಿರುವುದು ಕಂಡು ಬಂದಿದೆ. ಆಸ್ಪತ್ರೆ ಹೆಚ್ಚುವರಿಯಾಗಿ ಸಂಗ್ರಹಿಸಿದೆ ಎಂದು ಆಕೆ ಹೇಳುತ್ತಿರುವ ರೂ. 1,24,825 ಸಾಕ್ಷ್ಯವನ್ನು ತೋರಿಸಲು ಸಾಧ್ಯವಿಲ್ಲ ಎಂದು ಆಯೋಗ ಹೇಳಿದೆ. ಆಯೋಗವು ಆಸ್ಪತ್ರೆಗೆ ನ್ಯಾಯಯುತವಾಗಿ 65 ಸಾವಿರ ರೂಪಾಯಿ ನೀಡುವಂತೆ ಆದೇಶಿಸಿದೆ.

ಸುಕನ್ಯಾ ಅವರ ಪತಿ ಜಿ. ಮಲ್ಲಯ್ಯ ಅವರು ಜುಲೈ 2021ರಲ್ಲಿ ಪ್ರತಿಮಾ ಆಸ್ಪತ್ರೆ ವಿರುದ್ಧ ಇದೇ ರೀತಿಯ ದೂರು ದಾಖಲಿಸಿದ್ದರು ಮತ್ತು ಈ ಕುರಿತು ಇತ್ತೀಚಿನ ತೀರ್ಪು ಹೊರಬಿದ್ದಿದೆ. ಅವರು COVID-19 ಹೊಂದಿಲ್ಲದಿದ್ದರೂ ಸಹ ಚಿಕಿತ್ಸೆ ಕೊಡಿಸಿ ಒಟ್ಟು 4,76,000 ರೂ. ಬಿಲ್ ಮಾಡಿರುವುದಾಗಿ ಹೇಳಿದ್ದರು. 4,48,794 ರೂ.ಗಳ ಮರುಪಾವತಿಗೆ ಫಿರ್ಯಾದುದಾರರು ಸಾಕಷ್ಟು ಪುರಾವೆಗಳನ್ನು ಒದಗಿಸಿಲ್ಲ ಎಂದು ವಿಚಾರಣಾ ಆಯೋಗ-1 ಪರಿಗಣಿಸಿ ರೂ.1,15,000 ಮರು ಪಾವತಿಸಲು ಆದೇಶಿಸಿದೆ.

ಇದನ್ನೂ ಓದಿ: 2 ವರ್ಷದ ಮಗುವಿಗೆ ಅವಧಿ ಮೀರಿದ ಇಂಜೆಕ್ಷನ್ ನೀಡಿದ್ದ ಆಸ್ಪತ್ರೆ ವಿರುದ್ಧ ಎಫ್​ಐಆರ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.