ನವದೆಹಲಿ: ಗೂಗಲ್ ಬಳಕೆದಾರರಿಂದ 24,569 ದೂರು ಸ್ವೀಕರಿಸಿದ್ದು, ಅಕ್ಟೋಬರ್ನಲ್ಲಿ ಆ ದೂರುಗಳ ಆಧಾರದ ಮೇಲೆ 48,594 ಆಕ್ಷೇಪಾರ್ಹ ವಿಷಯದ ಮಾಹಿತಿ ತೆಗೆದುಹಾಕಲಾಗಿದೆ ಎಂದು ಟೆಕ್ ದೈತ್ಯ ಮಾಸಿಕ ಪಾರದರ್ಶಕತೆ ವರದಿಯಲ್ಲಿ ತಿಳಿಸಿದೆ.
ಬಳಕೆದಾರರ ನೀಡಿರುವ ದೂರಿನ ಜೊತೆಗೆ ಖುದ್ದಾಗಿ ಅಕ್ಟೋಬರ್ ತಿಂಗಳಲ್ಲೇ 3,84,509 ಆಕ್ಷೇಪಾರ್ಹ ತುಣುಕು ತೆಗೆದುಹಾಕಿರುವುದಾಗಿ ಗೂಗಲ್ ಮಾಹಿತಿ ನೀಡಿದೆ. ಮೇ ತಿಂಗಳಲ್ಲಿ ಜಾರಿಗೆ ಬಂದಿರುವ ಭಾರತದ ಐಟಿ ನಿಯಮಗಳ ಅನುಸಾರದ ಭಾಗವಾಗಿ ಅಮೆರಿಕ ಮೂಲದ ಗೂಗಲ್ ಈ ನಿರ್ಧಾರ ಕೈಗೊಂಡಿದೆ.
Googleನಲ್ಲಿ ಮಾನನಷ್ಟದಂತಹ ವಿಷಯ, ವ್ಯಕ್ತಿಗಳ ಹಕ್ಕುಗಳ ಉಲ್ಲಂಘನೆ ಹಾಗೂ ಇನ್ನಿತರ ವಿಷಯದ ಮೇಲಿನ ಅಂಶ ತೆಗೆದು ಹಾಕಿದೆ. ಗೂಗಲ್ ತಿಳಿಸಿರುವ ಮಾಹಿತಿ ಪ್ರಕಾರ, ಹಕ್ಕುಸ್ವಾಮ್ಯದ ವಿಷಯದ ಮೇಲೆ (48,078), ಟ್ರೇಡ್‌ಮಾರ್ಕ್ (313), ವಂಚನೆ (94), ನಕಲಿ (53), ನ್ಯಾಯಾಲಯದ ಆದೇಶ (49) ಮತ್ತು ಗ್ರಾಫಿಕ್ ಲೈಂಗಿಕ ವಿಷಯ (7) ಸೇರಿದಂತೆ ಹಲವಾರು ಅಂಶ ತೆಗೆದು ಹಾಕಲಾಗಿದೆ.
ಇದನ್ನೂ ಓದಿರಿ: ಮೊದಲ ಸಲ ಸಾರ್ವಜನಿಕವಾಗಿ ಕಾಣಿಸಿಕೊಂಡ ಆಥಿಯಾ - ರಾಹುಲ್!
ಬಳಕೆದಾರರು ನೀಡಿರುವ ದೂರಿನ ಆಧಾರದ ಮೇಲೆ ಒಂದು ತಿಂಗಳ ಅವಧಿಯಲ್ಲಿ ಎಲ್ಲ ವಿಷಯ ತೆಗೆದು ಹಾಕಲಾಗಿದೆ ಎಂದು ಗೂಗಲ್ ಮಾಹಿತಿ ಹಂಚಿಕೊಂಡಿದ್ದು, ಬಳಕೆದಾರರ ಜೊತೆಗೆ ಆನ್ಲೈನ್ನಲ್ಲಿ ಹಾನಿಕಾರ ವಿಷಯದ ವಿರುದ್ಧ ಕಂಪನಿ ಹೆಚ್ಚು ಹೋರಾಟ ಮಾಡ್ತಿದೆ ಎಂದರು.
ಮಕ್ಕಳ ಲೈಂಗಿಕ ದೌರ್ಜನ್ಯ, ಹಿಸಾತ್ಮಕ ಕೃತ್ಯ ಸೇರಿದಂತೆ ಅನೇಕ ವಿಷಯ ತೆಗೆದುಹಾಕಲಾಗಿದೆ ಎಂದು ತಿಳಿಸಿರುವ ಗೂಗಲ್ ಗೌಪ್ಯತೆ ಮತ್ತು ಬಳಕೆದಾರರ ರಕ್ಷಣೆ ಕಾಪಾಡಿಕೊಳ್ಳುತ್ತೇವೆ ಎಂದಿದೆ. ಹೊಸ ಐಟಿ ನಿಯಮದ ಪ್ರಕಾರ ಗೂಗಲ್ ಐದು ಮಿಲಿಯನ್ ಬಳಕೆದಾರರನ್ನ ಗೂಗಲ್ ಹೊಂದಿದೆ ಎಂಬ ಮಾಹಿತಿ ತಿಳಿಸಿದೆ. ಗೂಗಲ್ ಮೇ ತಿಂಗಳಲ್ಲಿ 6,34,357 ಮತ್ತು ಜೂನ್‌ನಲ್ಲಿ 5,26,866 ವಿವಾದಿತ ಅಂಶಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡಿತ್ತು.