ETV Bharat / bharat

ತ್ರಿವರ್ಣ ಧ್ವಜಕ್ಕೆ ಇಂದಿಗೆ 100 ವರ್ಷ.. ಹೀಗಿತ್ತು ಬಾವುಟದ ತಯಾರಿ..

ರಾಷ್ಟ್ರಧ್ವಜ ಮತ್ತು ಪಕ್ಷದ ಧ್ವಜದ ನಡುವೆ ವ್ಯತ್ಯಾಸವಿರಬೇಕು ಎಂಬ ಕಾರಣಕ್ಕೆ, ಜುಲೈ 22, 1947ರಂದು ಘೋಷಿಸಿದಂತೆ, ಕೇಸರಿ, ಬಿಳಿ ಮತ್ತು ಹಸಿರು ಪಟ್ಟೆಗಳನ್ನೊಳಗೊಂಡ ರಾಷ್ಟ್ರ ಧ್ವಜದಲ್ಲಿ ಅಶೋಕನ ಧರ್ಮ ಚಕ್ರವನ್ನು ಸೇರಿಸಲು ತೀರ್ಮಾನಿಸಲಾಯಿತು..

ಬಾವುಟ
ಬಾವುಟ
author img

By

Published : Mar 31, 2021, 9:43 PM IST

ಮೂರು ಬಣ್ಣಗಳನ್ನು ಪಡೆದು ಕೋಟ್ಯಂತರ ಹೃದಯಗಳನ್ನು ಒಟ್ಟುಗೂಡಿಸಿದ ನಮ್ಮ ರಾಷ್ಟ್ರ ಧ್ವಜಕ್ಕೆ ಇಂದಿಗೆ ನೂರು ವರ್ಷ. ಆಂಧ್ರದ ಪಿಂಗಲಿ ವೆಂಕಯ್ಯ ಅವರು ವಿವಿಧ ದೇಶಗಳ ಧ್ವಜಗಳನ್ನು ಪರಿಶೀಲಿಸಿದ ಬಳಿಕ ನಮ್ಮ ದೇಶದ ಸಂಸ್ಕೃತಿ, ಸಂಪ್ರದಾಯಗಳನ್ನು ಪ್ರತಿಬಿಂಬಿಸುವಂತೆ ನಮ್ಮ ರಾಷ್ಟ್ರ ಧ್ವಜವನ್ನು ವಿನ್ಯಾಸಗೊಳಿಸಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರರ ಸಮ್ಮುಖದಲ್ಲಿ ಆಂಧ್ರದ ಬೆಜವಾಡಾದ ಜಿಲ್ಲೆಯ ವಿಕ್ಟೋರಿಯಾ ಮಹಲ್‌ನಲ್ಲಿ ನಡೆದ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ಮಾರ್ಚ್ 31, 1921ರಂದು ಮಹಾತ್ಮ ಗಾಂಧಿಯವರಿಗೆ ಪಿಂಗಲಿ ವೆಂಕಯ್ಯ ಅವರು ಧ್ವಜ ಅರ್ಪಿಸಿದ್ದರು.

1906 ರಲ್ಲಿ ಧ್ವಜಕ್ಕೆ ಅಡಿಪಾಯ : 22ನೇ ಅಖಿಲ ಭಾರತ ಕಾಂಗ್ರೆಸ್ ಮಹಾಸಭಾ 1906ರಲ್ಲಿ ಕೋಲ್ಕತ್ತಾದಲ್ಲಿ ನಡೆಯಿತು. 'ಗ್ರ್ಯಾಂಡ್ ಓಲ್ಡ್ ಮ್ಯಾನ್' ಎಂದು ಜನಪ್ರಿಯವಾಗಿರುವ ದಾದಾಬಾಯಿ ನೌರೋಜಿ ಅವರು ಸದನದ ಅಧ್ಯಕ್ಷತೆ ವಹಿಸಿದ್ದರು. ಸಭೆ ಪ್ರಾರಂಭವಾಗುವ ಮೊದಲು ಬ್ರಿಟಿಷರ ಧ್ವಜವಾದ ಯೂನಿಯನ್ ಜ್ಯಾಕ್‌ಗೆ ಗೌರವ ಸಲ್ಲಿಸಬೇಕಾಗಿತ್ತು.

ಇದಕ್ಕೆ ಪಿಂಗಲಿ ವೆಂಕಯ್ಯ ಅಸಮಾಧಾನ ವ್ಯಕ್ತಪಡಿಸಿದ್ದರು. ಆ ಕ್ಷಣದಲ್ಲಿ ಅವರ ಮನಸ್ಸಿನಲ್ಲಿ ನಮಗೂ ಒಂದು ಪ್ರತ್ಯೇಕ ಧ್ವಜ ಏಕೆ ಇರಬಾರದು ಎಂಬ ಪ್ರಶ್ನೆ ಮೂಡಿತ್ತು. ಬಳಿಕ ಆ ಸದನದಲ್ಲೇ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ಸಂದರ್ಭದಲ್ಲಿ ಅವರನ್ನು ಕಾಂಗ್ರೆಸ್ ನಿರ್ಧಾರ ಸಮಿತಿಯ ಸದಸ್ಯರನ್ನಾಗಿ ನೇಮಿಸಲಾಯಿತು. ಬಳಿಕ ವೆಂಕಯ್ಯ ಅವರು ರಾಷ್ಟ್ರಧ್ವಜದ ಅಗತ್ಯವನ್ನು ವಿವರಿಸುತ್ತಾ ದೇಶ ಪ್ರವಾಸ ಮಾಡಿದರು. 1916ರಲ್ಲಿ 'ಎ ನ್ಯಾಷನಲ್ ಫ್ಲ್ಯಾಗ್ ಫಾರ್ ಇಂಡಿಯಾ' ಎಂಬ ಇಂಗ್ಲಿಷ್ ಪುಸ್ತಕವನ್ನು ಬರೆದರು.

ಗಾಂಧಿ ಉಪಸ್ಥಿತಿಯಲ್ಲಿ ಧ್ವಜ ಹಸ್ತಾಂತರ : 1921ರ ಮಾರ್ಚ್ 31ರಂದು ವಿಜಯವಾಡದ ವಿಕ್ಟೋರಿಯಾ ಜುಬಿಲಿ (ಬಾಪು) ಮ್ಯೂಸಿಯಂ ಕಾನ್ಫರೆನ್ಸ್ ಹಾಲ್‌ನಲ್ಲಿ ಮಹಾತ್ಮ ಗಾಂಧಿಯವರ ಸಮ್ಮುಖದಲ್ಲಿ ಸಭೆಗಳು ನಡೆದಿದ್ದವು. ಅದಕ್ಕೂ ಮುಂಚೆ ಗಾಂಧಿ ಮತ್ತು ಪಿಂಗಲಿ ವೆಂಕಯ್ಯ ಅವರು ರಾಷ್ಟ್ರಧ್ವಜದ ವಿನ್ಯಾಸದ ಬಗ್ಗೆ ಹಲವು ಬಾರಿ ಚರ್ಚಿಸಿದ್ದರು.

ಈ ಸಭೆಯಲ್ಲಿಯೇ ರಾಷ್ಟ್ರ ಧ್ವಜವನ್ನು ವಿನ್ಯಾಸಗೊಳಿಸುವ ಕೆಲಸವನ್ನು ವೆಂಕಯ್ಯ ಅವರಿಗೆ ವಹಿಸಲಾಗಿತ್ತು. ಮೂರು ಗಂಟೆಗಳಲ್ಲಿ, ಅವರು ತಮ್ಮ ಸಹ ಶಿಕ್ಷಕ ಇರಾಂಕಿ ವೆಂಕಟಶಾಸ್ತ್ರಿ ಸಹಾಯದಿಂದ ಧ್ವಜದ ವಿನ್ಯಾಸವನ್ನು ರಾಷ್ಟ್ರಪಿತನಿಗೆ ಹಸ್ತಾಂತರಿಸಿದ್ದರು. ಇದು ನೂಲುವ ಚಕ್ರದ ಜೊತೆಗೆ ಕೆಂಪು ಮತ್ತು ಹಸಿರು ಚಿಹ್ನೆ ಹೊಂದಿತ್ತು.

ಇದಾದ ಬಳಿಕ ನಡೆದ ಮತ್ತೊಂದು ಸಭೆಯಲ್ಲಿ ಹಿಂದೂಗಳಿಗೆ ಕೆಂಪು, ಮುಸ್ಲಿಮರಿಗೆ ಹಸಿರು ಮತ್ತು ಇತರ ಧರ್ಮಗಳಿಗೆ ಬಿಳಿ ಇರುವಂತೆ ಧ್ವಜವನ್ನು ವಿನ್ಯಾಸಗೊಳಿಸಲು ಸಲಹೆ ನೀಡಿದರು. ಹೀಗೆ, ರಾಷ್ಟ್ರೀಯ ಧ್ವಜವನ್ನು ಕೆಂಪು, ಹಸಿರು ಮತ್ತು ಬಿಳಿ ಮಧ್ಯದಲ್ಲಿ ಚರಕವಿರುವ ಚಿಹ್ನೆಯೊಂದಿಗೆ ಮಾಡಲಾಯಿತು.

ಬಣ್ಣಗಳ ಕುರಿತು ಸಿಖ್ಖರ ಆಕ್ಷೇಪ : 1931ರಲ್ಲಿ ಕರಾಚಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಸಿಖ್ಖರು ಧ್ವಜದ ಬಣ್ಣಗಳ ಕುರಿತು ಆಕ್ಷೇಪ ವ್ಯಕ್ತ ಪಡಿಸಿದರು. ಈ ಹಿನ್ನೆಲೆ ನೆಹರೂ, ಮೌಲಾನಾ ಅಬುಲ್ ಕಲಾಂ ಆಜಾದ್, ಭೋಗರಾಜು ಪಟ್ಟಾಬಿ ಸೀತಾರಾಮಯ್ಯ, ತಾರಸಿಂಗ್, ದತ್ತಾತ್ರೇಯ ಬಾಲಕೃಷ್ಣರನ್ನು ಒಳಗೊಂಡ ಸಮಿತಿಯ ಸೂಚನೆಗಳ ಪ್ರಕಾರ, ಕೇಸರಿ, ಬಿಳಿ ಮತ್ತು ಹಸಿರು ಧ್ವಜದ ಮೇಲೆ ನೂಲುವ ಚಕ್ರ ಹೊಂದುವಂತೆ ವೆಂಕಯ್ಯ ಧ್ವಜದಲ್ಲಿ ಬದಲಾವಣೆಗಳನ್ನು ಮಾಡಿದರು. ಇದನ್ನು ರಾಷ್ಟ್ರೀಯ ಕಾಂಗ್ರೆಸ್ ಅನುಮೋದಿಸಿತು.

ರಾಷ್ಟ್ರಧ್ವಜ ಮತ್ತು ಪಕ್ಷದ ಧ್ವಜದ ನಡುವೆ ವ್ಯತ್ಯಾಸವಿರಬೇಕು ಎಂಬ ಕಾರಣಕ್ಕೆ, ಜುಲೈ 22, 1947ರಂದು ಘೋಷಿಸಿದಂತೆ, ಕೇಸರಿ, ಬಿಳಿ ಮತ್ತು ಹಸಿರು ಪಟ್ಟೆಗಳನ್ನೊಳಗೊಂಡ ರಾಷ್ಟ್ರ ಧ್ವಜದಲ್ಲಿ ಅಶೋಕನ ಧರ್ಮ ಚಕ್ರವನ್ನು ಸೇರಿಸಲು ತೀರ್ಮಾನಿಸಲಾಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.