ಚೆನ್ನೈ (ತಮಿಳುನಾಡು): ತೈವಾನ್‌ಗೆ ರಫ್ತು ಮಾಡಲೆಂದು ಹೊರಟಿದ್ದ 5 ಕೋಟಿ ರೂ. ಮೌಲ್ಯದ 6.4 ಮೆಟ್ರಿಕ್ ಟನ್ ರಕ್ತ ಚಂದನವನ್ನು ಚೆನ್ನೈ ಬಂದರಿನಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ನಿರ್ದಿಷ್ಟ ಗುಪ್ತಚರ ಮಾಹಿತಿಯ ಮೇರೆಗೆ ಚೆನ್ನೈ ಸೀ ಕಸ್ಟಮ್ಸ್ (Sea Customs) ಅಧಿಕಾರಿಗಳು ದಾಳಿ ನಡೆಸಿದ ವೇಳೆ ರಕ್ತ ಚಂದನದ ತುಂಡುಗಳನ್ನು ಅಡಗಿಸಿಟ್ಟಿದ್ದ ಕಂಟೈನರ್ ಅನ್ನು ಪತ್ತೆ ಮಾಡಿದ್ದಾರೆ. ತಪಾಸಣೆಗೆ ಅಡ್ಡಿಪಡಿಸಿದ ಆರೋಪಿಗಳು, ಇವು ಚಪ್ಪಡಿ ಕಲ್ಲುಗಳು, ತೈವಾನ್‌ಗೆ ರಫ್ತು ಮಾಡುತ್ತಿದ್ದೇವೆ ಎಂದು ಸುಳ್ಳು ಹೇಳಿದ್ದಾರೆ.
ಇದನ್ನೂ ಓದಿ: ರೆಮ್ಡಿಸಿವಿರ್ ಮಾರಾಟ: ಇಬ್ಬರು ವೈದ್ಯರಿಗೆ ಜಾಮೀನು, 15 ದಿನ ಕೋವಿಡ್ ರೋಗಿಗಳ ಆರೈಕೆ ಷರತ್ತು!
ಸದ್ಯ ರಕ್ತ ಚಂದನವನ್ನು ವಶಕ್ಕೆ ಪಡೆದಿರುವ ಕಸ್ಟಮ್ಸ್ ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.