ETV Bharat / bharat

ಶಿಮ್ಲಾದ ಶಿವ ಮಂದಿರ ದುರಂತ: ಅವಶೇಷಗಳಡಿ ಇದುವರೆಗೂ 17 ಮೃತದೇಹಗಳು ಪತ್ತೆ

Landslide in Himachal Pradesh: ''ಹಿಮಾಚಲ ಪ್ರದೇಶದ ಶಿಮ್ಲಾ ಜಿಲ್ಲೆಯ ಸಮ್ಮರ್ ಹಿಲ್ ಪ್ರದೇಶದಲ್ಲಿ ಸಂಭವಿಸಿದ ಭೂಕುಸಿತದ ಹಿನ್ನೆಲೆ, ಅವಶೇಷಗಳಡಿಯಿಂದ ಈವರೆಗೆ 17 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಒಂದೇ ಕುಟುಂಬದ ಇನ್ನೂ ಎರಡು ಶವಗಳನ್ನು ಹೊರತೆಗೆಯುವ ಪ್ರಯತ್ನಗಳು ನಡೆಯುತ್ತಿವೆ'' ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Himachal Pradesh: 17 bodies recovered from debris of Shiv Mandir in Shimla
ಶಿಮ್ಲಾದ ಶಿವ ಮಂದಿರದ ಅವಶೇಷಗಳ ಅಡಿಯಲ್ಲಿ 17 ಮೃತದೇಹಗಳು ಪತ್ತೆ
author img

By

Published : Aug 21, 2023, 10:57 AM IST

ಶಿಮ್ಲಾ (ಹಿಮಾಚಲ ಪ್ರದೇಶ): ಆಗಸ್ಟ್ 14 ರಂದು ಹಿಮಾಚಲ ಪ್ರದೇಶದ ಶಿಮ್ಲಾ ಜಿಲ್ಲೆಯ ಸಮ್ಮರ್ ಹಿಲ್ ಪ್ರದೇಶದಲ್ಲಿ ಸಂಭವಿಸಿದ ಭೂಕುಸಿತದ ನಂತರ, ಈವರೆಗೆ 17 ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಹಿಮಾಚಲ ಪ್ರದೇಶ ಸರ್ಕಾರದ ಮುಖ್ಯ ಕಾರ್ಯದರ್ಶಿ ಪ್ರಬೋಧ್ ಸಕ್ಸೇನಾ ಭಾನುವಾರ ತಿಳಿಸಿದ್ದಾರೆ.

ಸರ್ಕಾರದ ಮುಖ್ಯ ಕಾರ್ಯದರ್ಶಿ ಪ್ರಬೋಧ್ ಸಕ್ಸೇನಾ ಮಾಹಿತಿ: ಶಿವ ಮಂದಿರದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಇದುವರೆಗೆ 17 ಶವಗಳನ್ನು ಹೊರತೆಗೆಯಲಾಗಿದೆ. ಏಳು ಜನರ ಕುಟುಂಬದ ಎರಡು ಮೃತದೇಹಗಳು ಇನ್ನೂ ಪತ್ತೆಯಾಗಬೇಕಿದೆ. ಅವಶೇಷಗಳ ಅಡಿ ಇನ್ನೂ ಮೂರು ಶವಗಳಿರುವ ಸಾಧ್ಯತೆಯಿದೆ. ನಾನು ಜಿಲ್ಲಾಧಿಕಾರಿಗಳೊಂದಿಗೆ ಸೂಚನೆ ನೀಡಲಾಗಿದ್ದು, ಅವರು ಇನ್ನೂ 2ರಿಂದ 3 ದಿನಗಳಲ್ಲಿ ಈ ದೇಹಗಳನ್ನು ಹೊರಗೆ ತೆಗೆಯಲು ಸಾಧ್ಯವಾಗುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಸಕ್ಸೇನಾ ಹೇಳಿದರು.

4 ದಿನದೊಳಗೆ ಭಾರಿ ವಾಹನಗಳ ಸಂಚಾರ ಪ್ರಾರಂಭ: ಮುಂದಿನ 3ರಿಂದ 4 ದಿನಗಳಲ್ಲಿ ಕುಲುವಿನಲ್ಲಿ ಸೇಬುಗಳನ್ನು ಸಾಗಿಸುವ ವಾಹನಗಳು ಸೇರಿದಂತೆ ಭಾರಿ ವಾಹನಗಳ ಸಂಚಾರ ಪ್ರಾರಂಭವಾಗಲಿದೆ. ಪುನಃಸ್ಥಾಪನೆಯ ಬದಿಯಲ್ಲಿ, ಈಗ ಕುಲುವಿನಿಂದ ಸೇಬುಗಳ ಸಾಗಾಟಕ್ಕೆ ಒತ್ತು ನೀಡಲಾಗಿದೆ. ಕುಲುವಿನಲ್ಲಿ ಹಲವು ವರ್ಷಗಳಿಂದ ಬಳಕೆಯಾಗದೇ ಬಿದ್ದಿದ್ದ ಬಿಬಿಎಂಬಿ ರಸ್ತೆಯನ್ನು ಕಳೆದ ಎರಡು ದಿನಗಳಲ್ಲಿ ದುರಸ್ತಿ ಮಾಡಿದ್ದೇವೆ. ಈಗ ನಾವು ಎನ್​ಎಚ್​ನ ಇನ್ನೊಂದು ಭಾಗದಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ನೈಸರ್ಗಿಕ ವಿಕೋಪ ಪೀಡಿತ ಪ್ರದೇಶ, 8,014.61 ಕೋಟಿ ರೂ. ಹಾನಿ: ನಿರಂತರ ಮಳೆಯಿಂದ ಭೂಕುಸಿತಗಳಿಗೆ ಹಾಗೂ ಹಠಾತ್ ಪ್ರವಾಹಗಳಿಗೆ ಕಾರಣವಾಗಿದ್ದು, ರಾಜ್ಯದಲ್ಲಿ ಭಾರಿ ಪ್ರಮಾಣದ ಹಾನಿ ಉಂಟಾಗಿದೆ. ಹಿಮಾಚಲ ಪ್ರದೇಶ ಸರ್ಕಾರ ಇಡೀ ರಾಜ್ಯವನ್ನು ನೈಸರ್ಗಿಕ ವಿಕೋಪ ಪೀಡಿತ ಪ್ರದೇಶ' ಎಂದು ಘೋಷಿಸಿದೆ. ರಾಜ್ಯ ಸರ್ಕಾರ ನೀಡಿರುವ ಇತ್ತೀಚಿನ ಮಾಹಿತಿಯ ಪ್ರಕಾರ, ಜೂನ್ 24ರಿಂದ ಹಿಮಾಚಲದಲ್ಲಿ ಒಟ್ಟು ಹಣಕಾಸಿನ ನಷ್ಟವು 8,014.61 ಕೋಟಿ ರೂಪಾಯಿಗಳಿಗೆ ತಲುಪಿದೆ.

ಮಾನ್ಸೂನ್​ನಲ್ಲಿ 113 ಭೂ ಕುಸಿತದ ಘಟನೆಗಳು, 224 ಜನರು ಸಾವು: ಒಟ್ಟು 2,022 ಮನೆಗಳು ಸಂಪೂರ್ಣವಾಗಿ ಹಾನಿಗೊಳಗಾಗಿವೆ. 9,615 ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಈ ವರ್ಷದ ಮುಂಗಾರು ಋತುವಿನಲ್ಲಿ 113 ಭೂ ಕುಸಿತದ ಘಟನೆಗಳು ಸಂಭವಿಸಿವೆ. ಮಾನ್ಸೂನ್ ಬಿರುಸಿನಲ್ಲಿ ಒಟ್ಟು 224 ಜನರು ಸಾವನ್ನಪ್ಪಿದ್ದಾರೆ. ಈದುವರೆಗೆ ರಾಜ್ಯದಲ್ಲಿ 117 ಮಂದಿ ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ ಎಂದು ಸರ್ಕಾರ ತಿಳಿಸಿದೆ. ಸಮ್ಮರ್ ಹಿಲ್ ಘಟನೆಯಲ್ಲಿ ಇಲ್ಲಿಯವರೆಗೆ ಹದಿನೇಳು ಶವಗಳನ್ನು ಪತ್ತೆಯಾಗಿವೆ. ಅವಶೇಷಗಳ ಅಡಿ ಸಿಲುಕಿರುವ ಮೃತದೇಹಗಳನ್ನು ಹೊರತೆಗೆಯಲು ವಿವಿಧೆಡೆ ಕಾರ್ಯಾಚರಣೆಗಳು ನಡೆಯುತ್ತಿವೆ.

ಇದನ್ನೂ ಓದಿ: ಧಾರಾಕಾರ ಮಳೆ, ಪ್ರವಾಹಕ್ಕೆ ತತ್ತರ.. ಪ್ರವಾಹದಲ್ಲಿ ಸಿಲುಕಿದ ಐವರು ಅರಣ್ಯಾಧಿಕಾರಿಗಳು ಸೇರಿ 10 ಜನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.