ETV Bharat / bharat

ಜೈಪುರದಲ್ಲಿ ಜಂಗಲ್ ಸಫಾರಿ ಆನಂದಿಸಿದ ಮುನ್ನಾಭಾಯ್​, ನಟಿ ರವೀನಾ ಟಂಡನ್ - ಝಾಲಾನಾ ಚಿರತೆ ಸಫಾರಿಗೆ ಸಂಜಯ್ ದತ್

ಬಾಲಿವುಡ್ ನಟ ಸಂಜಯ್ ದತ್ ಮತ್ತು ನಟಿ ರವೀನಾ ಟಂಡನ್ ಜೈಪುರದ ಝಲಾನಾ ಜಂಗಲ್‌ನಲ್ಲಿ ಝಾಲಾನಾ ಚಿರತೆ ಸಫಾರಿ ಆನಂದಿಸಿದ್ದಾರೆ. ಇಬ್ಬರೂ ಬೇರೆ ಬೇರೆ ವಾಹನಗಳಲ್ಲಿ ಕಾಣಿಸಿಕೊಂಡಿದ್ದು, ಕಾಡಿನಲ್ಲಿ ಚಿರತೆ ಕುಳಿತಿರುವುದನ್ನು ಕಂಡು ರವೀನಾ ಟಂಡನ್ ಮತ್ತು ಸಂಜಯ್ ದತ್ ರೋಮಾಂಚಿತರಾಗಿದ್ದಾರೆ.

raveena-tandon-and-sanjay-dutt-in-jhalana-safari-park
ಜೈಪುರ್ ನ ಜಂಗಲ್ ಸಫಾರಿಯನ್ನು ಆನಂದಿಸಿದ ಬಾಲಿವುಡ್ ನಟ ಸಂಜಯ್ ದತ್ ಮತ್ತು ನಟಿ ರವೀನಾ ಟಂಡನ್
author img

By

Published : Mar 10, 2022, 1:39 PM IST

ಜೈಪುರ : ಬಾಲಿವುಡ್ ನಟಿ ರವೀನಾ ಟಂಡನ್ ಮತ್ತು ನಟ ಸಂಜಯ್ ದತ್ ಜೈಪುರದಲ್ಲಿನ ಝಲಾನಾ ಚಿರತೆ ಸಫಾರಿಯನ್ನು ಆನಂದಿಸಿದ್ದಾರೆ. ಸಂಜಯ್ ದತ್ ಈ ವಾರದಲ್ಲಿ ಎರಡನೇ ಬಾರಿ ಚಿರತೆ ಸಫಾರಿಗೆ ಭೇಟಿ ನೀಡಿದ್ದು, ಕಾಡಿನ ಸೌಂದರ್ಯವನ್ನು ಹಾಡಿ ಹೊಗಳಿದ್ದಾರೆ. ಝಲನಾ ಜಂಗಲ್‌ನ ಸೌಂದರ್ಯವನ್ನು ಅದ್ಭುತ ಎಂದು ಇದೇ ವೇಳೆ ಬಣ್ಣಿಸಿದ್ದಾರೆ.

raveena-tandon-and-sanjay-dutt-in-jhalana-safari-park
ಜೈಪುರದ ಜಂಗಲ್ ಸಫಾರಿಯನ್ನು ಆನಂದಿಸಿದ ಬಾಲಿವುಡ್ ನಟ ಸಂಜಯ್ ದತ್

ರವೀನಾ ಟಂಡನ್ ಮತ್ತು ಸಂಜಯ್ ದತ್ ಅವರು ಝಲಾನಾ ಜಂಗಲ್‌ನಲ್ಲಿ ಚಿರತೆಯನ್ನು ಕಂಡು ರೋಮಾಂಚಿತರಾಗಿದ್ದಾರೆ. ಜೊತೆಗೆ ಪ್ರಕೃತಿಯ ಜೊತೆ ಸುಂದರ ಸೆಲ್ಫಿ ಮತ್ತು ಛಾಯಾಚಿತ್ರಗಳನ್ನು ತೆಗೆದುಕೊಂಡಿದ್ದಾರೆ. ಸಂಜಯ್ ದತ್ ಮತ್ತು ರವೀನಾ ಟಂಡನ್ ಚಿರತೆ ರಿಸರ್ವ್ ಸೆಲ್ಫಿ ಪಾಯಿಂಟ್‌ನಲ್ಲಿಯೂ ಛಾಯಾಚಿತ್ರಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಚಿರತೆ ಮೀಸಲು ಪ್ರದೇಶದ ಅತ್ಯುನ್ನತ ಸ್ಥಳವಾದ ಶಿಕಾರ್ ಹೊಡಿಗೆ ಭೇಟಿ ನೀಡಿ, ಶಿಕಾರ್ ಹೊಡಿಯಿಂದ ಝಾಲಾನಾ ಕಾಡಿನ ರಮಣೀಯ ಸೌಂದರ್ಯವನ್ನು ಸವಿದಿದ್ದಾರೆ.

ಜೈಪುರ್ ನ ಜಂಗಲ್ ಸಫಾರಿಯನ್ನು ಆನಂದಿಸಿದ ಬಾಲಿವುಡ್ ನಟಿ ರವೀನಾ ಟಂಡನ್

ಈ ವೇಳೆ ಝಲಾನಾ ಚಿರತೆ ಮೀಸಲು ಪ್ರದೇಶದ ಪ್ರಾದೇಶಿಕ ಅರಣ್ಯಾಧಿಕಾರಿ ಜನೇಶ್ವರ್ ಚೌಧರಿ ಅವರು ಝಲಾನಾ ಚಿರತೆ ಸಫಾರಿ ಕುರಿತು ಹಲವು ಮಹತ್ವದ ಮಾಹಿತಿಯನ್ನು ಇವರಿಗೆ ನೀಡಿದ್ದಾರೆ. ಜೈಪುರದ ಜನರು ಝಲಾನಾದಂತಹ ಅರಣ್ಯವನ್ನು ಹೊಂದಿರುವುದು ಅವರ ಅದೃಷ್ಟ ಎಂದು ಸಂಜಯ್ ದತ್ ಹೇಳಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಇಂತಹ ಜಂಗಲ್ ಸಫಾರಿ ಇದ್ದು, ಝಾಲಾನಾ ಕಾಡನ್ನು ನೋಡಿದ ಸಂಜಯ್ ದತ್ ಹರ್ಷ ವ್ಯಕ್ತಪಡಿಸಿದ್ದಾರೆ. ಈ ವೇಳೆ ರೇಂಜರ್ ಜನೇಶ್ವರ್ ಚೌಧರಿ, ಫಾರೆಸ್ಟರ್ ಜೋಗೇಂದ್ರ ಸಿಂಗ್ ಶೇಖಾವತ್ ಮತ್ತಿತರರು ಉಪಸ್ಥಿತರಿದ್ದರು.

ಓದಿ : ಕೇಜ್ರಿವಾಲ್ ಮಾದರಿ ಆಡಳಿತವನ್ನು ಪಂಜಾಬ್ ಜನ ಒಪ್ಪಿಕೊಂಡಿದ್ದಾರೆ.. ಮನೀಶ್ ಸಿಸೋಡಿಯಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.