ETV Bharat / bharat

ಸಿಎಂ ಉದ್ಧವ್​ ಠಾಕ್ರೆ ಬಾವನಿಗೆ ಸೇರಿದ 11 ಫ್ಲಾಟ್​​ಗಳಿಗೆ ಬೀಗ ಜಡಿದ ಇಡಿ

author img

By

Published : Mar 22, 2022, 7:03 PM IST

ಪುಷ್ಪಕ್ ಬುಲಿಯನ್ ಪ್ರಕರಣದಲ್ಲಿ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಅವರ ಪತ್ನಿ ರಶ್ಮಿ ಠಾಕ್ರೆ ಸಹೋದರ ಶ್ರೀಧರ್​ ಪಾಟಣಕರ್ ಹೆಸರು ಕೇಳಿ ಬಂದಿದೆ. ಈ ಬಗ್ಗೆ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು ವಸತಿ ಫ್ಲಾಟ್​ಗಳ ಜಪ್ತಿ ಮಾಡುವ ಮೂಲಕ ಕಠಿಣ ಕ್ರಮ ಜರುಗಿಸಿದೆ.

uddhav thackeray
uddhav thackeray

ಥಾಣೆ(ಮಹಾರಾಷ್ಟ್ರ): ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಕುಟುಂಬದ ಸಂಬಂಧಿಕರಿಗೆ ಜಾರಿ ನಿರ್ದೇಶನಾಲಯ (ಇಡಿ) ಶಾಕ್​ ನೀಡಿದೆ. ಠಾಕ್ರೆ ಅವರ ಪತ್ನಿ ರಶ್ಮಿ ಸಹೋದರನಿಗೆ ಸೇರಿದ 11 ಫ್ಲಾಟ್​​ಗಳಿಗೆ ಇಡಿ ಬೀಗ ಹಾಕಿದೆ. ಈ ಫ್ಲಾಟ್​ಗಳ ಮೌಲ್ಯ ಅಂದಾಜು 6.54 ಕೋಟಿ ರೂ. ಆಗಿದೆ.

ಪುಷ್ಪಕ್ ಬುಲಿಯನ್ ಪ್ರಕರಣದಲ್ಲಿ ರಶ್ಮಿ ಠಾಕ್ರೆ ಸಹೋದರ ಶ್ರೀಧರ್​ ಪಾಟಣಕರ್ ಅವರ ಹೆಸರು ಕೇಳಿ ಬಂದಿದೆ. ಈ ಬಗ್ಗೆ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು ಸಿಎಂ ಠಾಕ್ರೆ ಸಂಬಂಧಿ ವಿರುದ್ಧ ಕಠಿಣ ಕ್ರಮ ಜರುಗಿಸಿದೆ. ಮಹಾರಾಷ್ಟ್ರದ ಥಾಣೆಯಲ್ಲಿರುವ ಶ್ರೀಧರ್​ ಪಾಟಣಕರ್ ಅವರಿಗೆ ಸೇರಿದ ವಸತಿ ಫ್ಲಾಟ್​ಗಳನ್ನು ಜಪ್ತಿ ಮಾಡಿದೆ.

ಇದನ್ನೂ ಓದಿ: ಮಲ್ಯ, ನೀರವ್​ ಮೋದಿ, ಚೋಕ್ಸಿಯಿಂದ ಬ್ಯಾಂಕ್​ಗಳಿಗಾದ ನಷ್ಟ ಎಷ್ಟು?.. ಸರ್ಕಾರ ಜಪ್ತಿ ಮಾಡಿದ ಆಸ್ತಿ ಎಷ್ಟು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.