ಸಿಲಿಗುರಿ,(ಪಶ್ಚಿಮಬಂಗಾಳ) : ಅಪರೂಪದ ಶಸ್ತ್ರ ಚಿಕಿತ್ಸೆಯೊಂದರಲ್ಲಿ ವೈದ್ಯರು ಬಾಲಕನ ಎದೆಯೊಳಗೆ ಸಿಲುಕಿದ್ದ ಮೊಳೆಯನ್ನು ಜಾಗರೂಕತೆಯಿಂದ ತೆಗೆದು ಆತನ ಪ್ರಾಣವನ್ನ ಕಾಪಾಡಿರುವ ಘಟನೆ ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ನಡೆದಿದೆ.
ಮೂರು ವರ್ಷದ ಮೊಹಮ್ಮದ್ ಆರೀಸ್ ಎಂಬ ಬಾಲಕ ಮೊಳೆಯೊಂದನ್ನು ನುಂಗಿದ್ದ. ಕೆಮ್ಮು ಮತ್ತು ಗಂಭೀರ ಉಸಿರಾಟದ ಸಮಸ್ಯೆಗೆ ಒಳಗಾಗಿದ್ದ. ಬುಧವಾರ ರಾತ್ರಿ ಸಿಲಿಗುರಿಯಲ್ಲಿರುವ ಉತ್ತರ ಬಂಗಾಳ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಾಗಿದ್ದ ಬಾಲಕನಿಗೆ ಗುರುವಾರ ಬೆಳಗ್ಗೆ ಶಸ್ತ್ರ ಚಿಕಿತ್ಸೆ ನಡೆಸಿ, ಮೊಳೆಯನ್ನು ಹೊರತೆಗೆಯಲಾಗಿದೆ. ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಡಾ.ಶೇಖರ್ ಬಂಡೋಪಾಧ್ಯಾಯ ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರ ತಂಡವನ್ನು ಮುನ್ನಡೆಸಿದ್ದಾರೆ. ಡಾ.ಮಣಿದೀಪ ಸರ್ಕಾರ್, ಅರಿವಳಿಕೆ ವಿಭಾಗದ ಪ್ರಾಧ್ಯಾಪಕ ಡಾ.ಸೌಮೇಂದು ಭೌಮಿಕ್, ಡಾ.ತಾರಪದ ದಾಸ್, ಪ್ರೊಫೆಸರ್ ಸುಬ್ರತಾ ಮಂಡಲ್ ಮತ್ತು ಡಾ.ಕುನಾಲ್ ಶಸ್ತ್ರಚಿಕಿತ್ಸೆ ನಡೆಸಿದ ತಂಡದಲ್ಲಿದ್ದರು.
ಶಸ್ತ್ರಚಿಕಿತ್ಸೆ ನಡೆಸುವುದು ಅತ್ಯಂತ ಕಠಿಣವಾಗಿತ್ತು. ಆದರೂ ನಾವು ಸಾಕಷ್ಟು ಶ್ರಮವಹಿಸಿ, ಮಗುವಿನ ದೇಹದಿಂದ ಮೊಳೆಯನ್ನು ತೆಗೆದಿದ್ದೇವೆ. ಮಗು ಈಗ ಅಪಾಯದಿಂದ ಪಾರಾಗಿದ್ದು, ನಿಗಾವಹಿಸಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ಕಾಳ್ಗಿಚ್ಚಿನ ಹೊಗೆ ಓಝೋನ್ ಪದರವನ್ನು ನಾಶಪಡಿಸುತ್ತದೆ: ಸಂಶೋಧನೆ