ETV Bharat / bharat

ಹುಬ್ಬಳ್ಳಿ ವ್ಯಕ್ತಿಯ ದೇಹದಿಂದ 156 ಕಿಡ್ನಿ ಸ್ಟೋನ್ಸ್​ ಹೊರತೆಗೆದ ಹೈದರಾಬಾದ್​ ವೈದ್ಯರು

ಲ್ಯಾಪರೊಸ್ಕೋಪಿ ಮತ್ತು ಎಂಡೋಸ್ಕೋಪಿಯನ್ನು ಬಳಸಿ 156 ಕಿಡ್ನಿ ಸ್ಟೋನ್ಸ್ ಗಳನ್ನು ಹೊರತೆಗೆಯಲಾಗಿದ್ದು, ರೋಗಿ ಇದೀಗ ಆರೋಗ್ಯವಾಗಿದ್ದಾನೆಂದು ವೈದ್ಯರು ಮಾಹಿತಿ ನೀಡಿದ್ದಾರೆ.

Rare Kidney Surgery In Hyderabad
Rare Kidney Surgery In Hyderabad
author img

By

Published : Dec 17, 2021, 3:03 AM IST

ಹೈದರಾಬಾದ್​​: ಹಠಾತ್​ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಹುಬ್ಬಳ್ಳಿ ವ್ಯಕ್ತಿಯ ದೇಹದಿಂದ ದಾಖಲೆಯ 156 ಕಿಡ್ನಿ ಸ್ಟೋನ್ಸ್​ ಹೊರ ತೆಗೆಯಲಾಗಿದ್ದು, ಹೈದರಾಬಾದ್​ ವೈದ್ಯರು ಅಪರೂಪದ ಆಪರೇಷನ್ ಮೂಲಕ ಇಷ್ಟೊಂದು ಕಲ್ಲು ಹೊರತೆಗೆದಿದ್ದಾರೆ.

ಹುಬ್ಬಳ್ಳಿಯಲ್ಲಿ ಶಾಲಾ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದ 50 ವರ್ಷದ ಬಸವರಾಜ್​ ಮಡಿವಾಳರ್​ ಹೊಟ್ಟೆ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದರು. ಈ ವೇಳೆ ಪರೀಕ್ಷೆಗೊಳಪಡಿಸಿದಾಗ ಮೂತ್ರಪಿಂಡದಲ್ಲಿ ದೊಡ್ಡ ಗುಂಪಿನ ಕಲ್ಲು ಇರುವುದು ಗೊತ್ತಾಗಿದೆ. ಚಿಕಿತ್ಸೆಗೋಸ್ಕರ ಹೈದರಾಬಾದ್​ಗೆ ತೆರಳಿದ್ದು ಇದೀಗ ಯಶಸ್ವಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿರಿ: ಬ್ರಿಟನ್​​ನಲ್ಲಿ ಒಂದೇ ದಿನ 88,376 ಹೊಸ ಕೋವಿಡ್​ ಕೇಸ್​ ದಾಖಲು

ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಆಸ್ಪತ್ರೆಯ ಎಂಡಿ ಡಾ.ಚಂದ್ರಮೋಹನ್​, ಕಳೆದ ಎರಡು ವರ್ಷಗಳಿಂದ ರೋಗಿ ಕಿಡ್ನಿ ಸ್ಟೋನ್ಸ್​ ಸಮಸ್ಯೆಯಿಂದ ಬಳಲುತ್ತಿದ್ದು, ಸಮಯ ಕಳೆದಂತೆ ಕಲ್ಲು ದೊಡ್ಡದಾಗಿವೆ. ಆದರೆ, ಆರಂಭದಲ್ಲಿ ರೋಗಿಯಲ್ಲಿ ಯಾವುದೇ ರೀತಿಯ ತೊಂದರೆ ಕಾಣಿಸಿಕೊಂಡಿಲ್ಲ. ಇದೀಗ ಹಠಾತ್​ ಆಗಿ ನೋವು ಕಾಣಿಸಿಕೊಂಡಿದೆ ಎಂದಿದ್ದಾರೆ.

ರೋಗಿ ಕಳೆದ ತಿಂಗಳು ಆಸ್ಪತ್ರೆಗೆ ದಾಖಲಾಗಿದ್ದು, ಇದೀಗ ಸುಮಾರು ಮೂರು ಗಂಟೆಗಳ ಕಾಲ ಅಪರೂಪದ ಶಸ್ತ್ರಚಿಕಿತ್ಸೆ ಮೂಲಕ 156ಸ್ಟೋನ್ಸ್ ಹೊರತೆಗೆಯಲಾಗಿದ್ದು, ಆತ ಆರೋಗ್ಯವಾಗಿದ್ದಾನೆಂದು ಹೇಳಿದ್ದಾರೆ. ಓರ್ವ ರೋಗಿಯ ಮೂತ್ರ ಪಿಂಡದಲ್ಲಿ ಇಷ್ಟೊಂದು ಸ್ಟೋನ್ಸ್​ ಹೊರತೆಗೆದಿರುವುದು ಇದೇ ಮೊದಲ ಸಲ ಎಂಬ ಮಾಹಿತಿ ಸಹ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.