ETV Bharat / bharat

ಸ್ಮಶಾನದಲ್ಲಿ ಸೆರೆಸಿಕ್ಕ ಹಿಮಾಲಯದ​ ದೈತ್ಯ ಗರುಡ: 6 ಅಡಿ ಉದ್ದ ರೆಕ್ಕೆಯ ಅಪರೂಪದ ರಣಹದ್ದು!

ಉತ್ತರಪ್ರದೇಶದ ಕಾನ್ಪುರದಲ್ಲಿ ಹಿಮಾಲಯನ್​ ಗ್ರಿಫನ್​ ರಣಹದ್ದನ್ನು ಸೆರೆಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಲಾಗಿದೆ. ದೊಡ್ಡ ಗಾತ್ರದ ಪಕ್ಷಿ ಕಂಡು ಜನರು ಆಶ್ಚಯಗೊಂಡು, ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಹಿಮಾಲಯದಲ್ಲಿ ಕಂಡುಬರುವ ಈ ಅಪರೂಪದ ಪಕ್ಷಿ ಪ್ರಭೇದ ಸದ್ಯ ಅಳಿವಿನ ಅಂಚಿನಲ್ಲಿದೆ.

rare-himalayan-griffon-vulture
ಹಿಮಾಲಯನ್​ ದೈತ್ಯ ಗರುಡ
author img

By

Published : Jan 9, 2023, 12:55 PM IST

ಕಾನ್ಪುರ (ಉತ್ತರ ಪ್ರದೇಶ): ಅಳಿವಿನ ಅಂಚಿನಲ್ಲಿರುವ, 6 ಅಡಿ ಉದ್ದದ ಬಲವಾದ ರೆಕ್ಕೆಗಳನ್ನು ಹೊಂದಿರುವ ಹಿಮಾಲಯನ್​ ಗ್ರಿಫನ್​ ರಣಹದ್ದು ಉತ್ತರಪ್ರದೇಶದಲ್ಲಿ ಸೆರೆ ಸಿಕ್ಕಿದೆ. ಹಿಮಾಲಯ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುವ ಹದ್ದನ್ನು ಇಲ್ಲಿನ ಜನರು ಹಿಡಿದು ಅರಣ್ಯ ಇಲಾಖೆಗೆ ನೀಡಿದ್ದಾರೆ. ದೊಡ್ಡ ರೆಕ್ಕೆ, ದೇಹಗಾತ್ರ ಹೊಂದಿರುವ ರಣಹದ್ದನ್ನು ಕಂಡು ಜನರು ಚಕಿತರಾಗಿದ್ದಾರೆ.

ಹಿಮಾಲಯದ ಅತಿದೊಡ್ಡ ಪಕ್ಷಿ ಪ್ರಬೇಧಗಳಲ್ಲಿ ಒಂದಾದ ಗ್ರಿಫನ್​ ರಣಹದ್ದು ಕಾನ್ಪುರದಲ್ಲಿ ಒಂದು ವಾರದಿಂದ ಹಾರಾಡುತ್ತಿದ್ದು, ದೊಡ್ಡ ಗಾತ್ರದ ಪಕ್ಷಿಯು ಜನರಲ್ಲಿ ಕುತೂಹಲ ಮೂಡಿಸಿತ್ತು. ಇಲ್ಲಿನ ಸ್ಮಶಾನದಲ್ಲಿ ಮೃತದೇಹವನ್ನು ತಿನ್ನುತ್ತಿದ್ದಾಗ ಜನರು ಬಲೆ ಬೀಸಿ ಹಿಡಿದಿದ್ದಾರೆ. ಈ ವೇಳೆ ಹದ್ದು ಯಾವುದೇ ಪ್ರತಿರೋಧ ತೋರಿಲ್ಲ. ದೊಡ್ಡ ರೆಕ್ಕೆಗಳನ್ನು ಬಿಡಿಸಿದ ಜನರು ಅದರ ಜೊತೆಗೆ ಫೋಟೋ ತೆಗೆದುಕೊಂಡು ಖುಷಿ ಪಟ್ಟಿದ್ದಾರೆ.

'ಗ್ರಿಫನ್ ರಣಹದ್ದು 6 ಅಡಿಗಿಂತ ದೊಡ್ಡದಾದ ರೆಕ್ಕೆಗಳನ್ನು ಹೊಂದಿದೆ. ಹಿಮಾಲಯದಲ್ಲಿ ಕಂಡುಬರುವ ಅತಿದೊಡ್ಡ ಪಕ್ಷಿ ಪ್ರಭೇದ ಇದಾಗಿದೆ. ಈಗ ಇವುಗಳು ಬಹುತೇಕ ಅಪಾಯದ ಅಂಚಿನಲ್ಲಿವೆ. ಪರಿಸರ 'ವ್ಯವಸ್ಥೆಯ ಎಂಜಿನಿಯರ್‌ಗಳು' ಎಂಬ ಉಪನಾಮ ಹದ್ದುಗಳಿಗಿದೆ' ಎಂದು ಎಂದು ಅರಣ್ಯಾಧಿಕಾರಿ ಪ್ರವೀಣ್ ಕಸ್ವಾನ್ ತಿಳಿಸಿದರು.

ಕಳೆದ ವರ್ಷ ಗ್ರಿಫನ್​ ರಣಹದ್ದನ್ನು ಸಂರಕ್ಷಿಸಿದ ಫೋಟೋವನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿರುವ ಕಸ್ವಾನ್​ ಅವರು, 'ಉತ್ತರಪ್ರದೇಶದಲ್ಲಿ ಸಿಕ್ಕಿರುವ ಈ ಹದ್ದು ಕೂಡ ಹಿಮಾಲಯನ್ ಗ್ರಿಫನ್​ ತಳಿಯದ್ದಾಗಿದೆ. ಇದೊಂದು ಅಪರೂಪದ ಪಕ್ಷಿಯಾಗಿದ್ದು, ವಯಸ್ಕ ಹದ್ದುಗಳು ಬೇರೆಡೆಗೆ ವಲಸೆ ಹೋಗುತ್ತವೆ. ಉಳಿದವು ಇಲ್ಲಿಯೇ ಎತ್ತರದ ಪ್ರದೇಶದಲ್ಲಿ ಹಾರಾಟ ನಡೆಸುತ್ತವೆ. ಇವುಗಳು 40 ರಿಂದ 45 ವರ್ಷಗಳವರೆಗೆ ಬದುಕಬಲ್ಲವು' ಎಂದು ಮಾಹಿತಿ ನೀಡಿದರು.

ಮನುಷ್ಯರನ್ನು ರೋಗಗಳಿಂದ ಕಾಪಾಡುತ್ತವೆ: ಬಲವಾದ ದೊಡ್ಡ ರೆಕ್ಕೆಗಳೇ ಇವುಗಳ ತಾಕತ್ತಾಗಿದೆ. ಮುಗಿಲೆತ್ತರದಲ್ಲಿ ಹಾರಾಡುವ ಇವುಗಳು ತೀಕ್ಷ್ಣ ದೃಷ್ಟಿಯಿಂದ ಭೂಮಿಯಲ್ಲಿ ಕಂಡುಬರುವ ಮೃತದೇಹಗಳನ್ನು ಗುರುತಿಸಿ ತಿಂದು ಮನುಷ್ಯರಿಗೆ ರೋಗಗಳು ಹರಡದಂತೆ ತಡೆಯುತ್ತವೆ ಎಂಬುದು ವಿಧಿತ ಮಾತಾಗಿದೆ. ಇವುಗಳು ನೋಡಲು ಭಯಾನಕವಾಗಿ ಕಾಣುತ್ತವೆ. ರೆಕ್ಕೆ ಬಿಚ್ಚಿ ಕುಳಿತ ದೈತ್ಯ ಗರುಡಗಳ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಕಾಣಬಹುದಾಗಿದೆ.

ಪ್ರತಿರೋಧಿಸದ ದೈತ್ಯ ರಣಹದ್ದು: ಕಾನ್ಪುರದಲ್ಲಿ ಈ ದೈತ್ಯ ರಣಹದ್ದನ್ನು ಹಿಡಿದ ಜನರು ಅದರ ಜೊತೆ ಫೋಟೋಗೆ ಪೋಸ್​ ನೀಡಿದ್ದಾರೆ. ಅದನ್ನು ಮಗುವಿನಂತೆ ಹೊತ್ತು ತಿರುಗಾಡಿದ್ದಾರೆ. ಇಷ್ಟೆಲ್ಲಾ ಮಾಡಿದರೂ ಅದು ಯಾವುದೇ ಪ್ರತಿರೋಧ ತೋರಿಲ್ಲ. ಚಳಿಗಾಲದಲ್ಲಿ ಈ ಹಿಮಾಲಯನ್ ಗ್ರಿಫನ್ ರಣಹದ್ದುಗಳು ಹಿಮಾಲಯ ಮತ್ತು ಅದರ ಪಕ್ಕದ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಈ ಜಾತಿಯ ಹದ್ದುಗಳು ಹೆಚ್ಚಾಗಿ ವಲಸೆ ಪ್ರೇಮಿಯಾಗಿರುತ್ತವೆ ಎಂದು ತಜ್ಞರು ಹೇಳುತ್ತಾರೆ.

'ಒಂದು ವಾರದಿಂದ ಈ ಹದ್ದು ಊರಿನ ಸ್ಮಶಾನದಲ್ಲಿ ಹಾರಾಡುತ್ತಿತ್ತು. ಮೊದಮೊದಲು ಇದು ಸೆರೆಗೆ ಸಿಗಲಿಲ್ಲ. ಅಂತಿಮವಾಗಿ ಇದನ್ನು ಬಲೆಗೆ ಬೀಳಿಸಿದೆವು. ಇವುಗಳನ್ನು ಸಂರಕ್ಷಿಸಲು ಸೆರೆಗೆ ಬಹುಮಾನ ಘೋಷಿಸಿದ ಬಗ್ಗೆಯೂ ಕೇಳಿದ್ದೇನೆ. ಸಂತತಿ ನಶಿಸುತ್ತಿರುವ ಕಾರಣ ಇವುಗಳ ರಕ್ಷಣೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು' ಎಂದು ಕಾನ್ಪುರದ ನಿವಾಸಿಯೊಬ್ಬರು ಒತ್ತಾಯಿಸಿದರು. ಬಳಿಕ ಪೊಲೀಸರ ಸಮ್ಮುಖದಲ್ಲಿ ರಣಹದ್ದನ್ನು ಅರಣ್ಯ ಇಲಾಖೆಗೆ ಒಪ್ಪಿಸಲಾಯಿತು.

ಇದನ್ನೂ ಓದಿ: ಜೈಲಿನಿಂದ 98 ವರ್ಷದ ವೃದ್ಧ ಬಿಡುಗಡೆ: ಬೆಂಗಾವಲಿನೊಂದಿಗೆ ಕಳುಹಿಸಿಕೊಟ್ಟ ಪೊಲೀಸರು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.