ETV Bharat / bharat

ಮೊಟ್ಟೆಯೊಳಗೊಂದು ಮೊಟ್ಟೆ: ಸಿಕ್ತು ಡೈನೋಸಾರ್​ಗಳ ವಿಶಿಷ್ಟ ಮೊಟ್ಟೆ​ - ಡೈನೋಸಾರ್ ಪಳೆಯುಳಿಕೆ

ಧಾರ್ ಜಿಲ್ಲೆಯ ಡೈನೋಸಾರ್ ಪಳೆಯುಳಿಕೆಗಳ ರಾಷ್ಟ್ರೀಯ ಉದ್ಯಾನದಲ್ಲಿ ವಿಚಿತ್ರವಾದ ಮೊಟ್ಟೆಯೊಳಗೊಂದು ಮೊಟ್ಟೆ ಸಿಕ್ಕಿದೆ. ಈ ಮೊಟ್ಟೆಯು ಸೊರೋಪಾಡ್ ಪ್ರಬೇಧದ ಟೈಟಾನೋಸಾರ್ ಜಾತಿಯ ಡೈನೋಸಾರ್​ಗೆ ಸೇರಿದೆ ಎಂದು ಹೇಳಲಾಗಿದೆ.

dinosaur-egg
dinosaur-egg
author img

By

Published : Jun 14, 2022, 4:35 PM IST

ಧಾರ್ (ಮಧ್ಯ ಪ್ರದೇಶ): ರಾಜ್ಯದ ಪ್ರದೇಶವೊಂದರಲ್ಲಿ ಸಿಕ್ಕ ಡೈನೋಸಾರ್​ನ ಮೊಟ್ಟೆಯೊಂದು ಇದೀಗ ಭಾರಿ ಚರ್ಚೆಯ ವಿಷಯವಾಗಿದೆ. ಒಂದು ಮೊಟ್ಟೆಯೊಳಗೆ ಮತ್ತೊಂದು ಮೊಟ್ಟೆ ಇರುವುದು ಸಾಕಷ್ಟು ಕುತೂಹಲ ಮೂಡಿಸಿದ್ದು, ಇದು ಹೇಗೆ ಸಾಧ್ಯ ಎಂಬ ಪ್ರಶ್ನೆಯೂ ಮೂಡಿದೆ. ದೆಹಲಿ ವಿಶ್ವವಿದ್ಯಾಲಯದ ಪರಿಣಿತರ ತಂಡವೊಂದು ಈ ಅತಿ ವಿರಳವಾದ ಮೊಟ್ಟೆಯನ್ನು ಪತ್ತೆ ಮಾಡಿದೆ.

ಮೊಟ್ಟೆಯೊಳಗೊಂದು ಮೊಟ್ಟೆ: ರಾಜ್ಯದ ಧಾರ್ ಜಿಲ್ಲೆಯ ಡೈನೋಸಾರ್ ಪಳೆಯುಳಿಕೆಗಳ ರಾಷ್ಟ್ರೀಯ ಉದ್ಯಾನದಲ್ಲಿ ಇಂಥದ್ದೊಂದು ವಿಚಿತ್ರವಾದ ಮೊಟ್ಟೆಯೊಳಗೊಂದು ಮೊಟ್ಟೆ ಸಿಕ್ಕಿದೆ. ಈ ಮೊಟ್ಟೆಯು ಸೊರೋಪಾಡ್ ಪ್ರಬೇಧದ ಟೈಟಾನೋಸಾರ್ ಜಾತಿಯ ಡೈನೋಸಾರ್​ಗೆ ಸೇರಿದೆ ಎಂದು ಹೇಳಲಾಗಿದೆ. ದೆಹಲಿ ವಿಶ್ವವಿದ್ಯಾಲಯದ ಸೈಂಟಿಫಿಕ್ ರಿಪೋರ್ಟ್ಸ್ ಜರ್ನಲ್​ನಲ್ಲಿ ಇದರ ಬಗ್ಗೆ ಮಾಹಿತಿಯನ್ನು ಪ್ರಕಟಿಸಲಾಗಿದೆ. "ಫಸ್ಟ್ ಡಿಂಬ್-ಇನ್-ಓವೊ ಪೆಥಾಲಾಜಿಕಲ್ ಟೈಟಾನೋಸಾರಿಡ್ ಎಗ್ ಥ್ರೋ ಲೈಟ್ ಆನ್ ರಿಪ್ರೊಡಕ್ಟಿವ್ ಬಯಾಲಜಿ ಆಫ್ ಸೊರೋಪಾಡ್ ಡೈನೋಸಾರ್" ಎಂಬ ಶೀರ್ಷಿಕೆಯಡಿ ಈ ವರದಿ ಪ್ರಕಟವಾಗಿದೆ.

ಸಾಮಾನ್ಯ ಮೊಟ್ಟೆಗಿಂತ 10 ಪಟ್ಟು ದೊಡ್ಡದು: ಅತ್ಯಂತ ವಿರಳವಾದ ಮೊಟ್ಟೆಯೊಂದಿಗೆ 10 ಮೊಟ್ಟೆಗಳಿರುವ ಡೈನೋಸಾರ್​ಗಳ ಗೂಡನ್ನು ಸಹ ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಆಮೆ ಹಾಗೂ ಇತರ ಸರೀಸೃಪಗಳ ಮಾದರಿಯಲ್ಲಿಯೇ ಡೈನೋಸಾರ್​ಗಳು ಸಂತಾನೋತ್ಪತ್ತಿ ಮಾಡುತ್ತಿದ್ದವು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.