ETV Bharat / bharat

ಅಪರೂಪದ ಮಾಂಸಾಹಾರಿ ಸಸ್ಯ ಉತ್ತರಾಖಂಡದ ಗೋಪೇಶ್ವರದಲ್ಲಿ ಪತ್ತೆ

ಉತ್ತರಾಖಂಡ ಅರಣ್ಯ ಇಲಾಖೆಯ ಸಂಶೋಧನಾ ವಿಭಾಗದ ಹಲ್ದ್ವಾನಿ ತಂಡವು ಚಮೋಲಿಯ ಗೋಪೇಶ್ವರದಲ್ಲಿ ಅಪರೂಪದ ಕೀಟನಾಶಕ ಸಸ್ಯವನ್ನು ಕಂಡುಹಿಡಿದಿದೆ. ಈ ಸಸ್ಯವು 36 ವರ್ಷಗಳ ನಂತರ ಭಾರತದಲ್ಲಿ ಕಾಣಿಸಿಕೊಂಡಿದೆ.

ಅಪರೂಪದ ಮಾಂಸಾಹಾರಿ ಸಸ್ಯ ಉತ್ತರಾಖಂಡದ ಗೋಪೇಶ್ವರದಲ್ಲಿ ಪತ್ತೆ
ಅಪರೂಪದ ಮಾಂಸಾಹಾರಿ ಸಸ್ಯ ಉತ್ತರಾಖಂಡದ ಗೋಪೇಶ್ವರದಲ್ಲಿ ಪತ್ತೆ
author img

By

Published : Jun 26, 2022, 4:10 PM IST

ಹಲ್ದ್ವಾನಿ (ಉತ್ತರಾಖಂಡ) : ಅಳಿವಿನಂಚಿನಲ್ಲಿರುವ ಸಸ್ಯ ಸಂಕುಲಗಳನ್ನು ಸಂರಕ್ಷಿಸಲು ಶ್ರಮಿಸುತ್ತಿರುವ ಉತ್ತರಾಖಂಡ ಅರಣ್ಯ ಇಲಾಖೆಯ ಸಂಶೋಧನಾ ವಿಭಾಗ ಹಲವು ಸಾಧನೆಗಳಿಗೆ ಹೆಸರುವಾಸಿಯಾಗಿದೆ. ಇದೀಗ ಸಂಶೋಧನಾ ತಂಡವು ಚಮೋಲಿಯ ಗೋಪೇಶ್ವರ ಶ್ರೇಣಿಯ ಮಂಡಲ ಕಣಿವೆಯಲ್ಲಿ ಯುಟ್ರಿಕ್ಯುಲೇರಿಯಾ ಫರ್ಸೆಲ್ಲಾಟಾ (Lentibulariaceae)ಎಂಬ ಅಪರೂಪದ ಕೀಟನಾಶಕ ಸಸ್ಯವನ್ನು ಕಂಡುಹಿಡಿದಿದೆ.

ಉತ್ತರಾಖಂಡ ಅರಣ್ಯ ಇಲಾಖೆಯ ಸಂಶೋಧನಾ ವಿಭಾಗವಾದ ಹಲ್ದ್ವಾನಿ ತಂಡವು ಅತ್ಯಂತ ಅಪರೂಪದ ಮಾಂಸಾಹಾರಿ ಸಸ್ಯ ಪ್ರಭೇದವನ್ನು ಕಂಡುಹಿಡಿದಿದೆ ಮತ್ತು ಇದರ ಬಗ್ಗೆ ಸಸ್ಯ ವರ್ಗೀಕರಣ ಮತ್ತು ಸಸ್ಯಶಾಸ್ತ್ರದ 106 ವರ್ಷಗಳ ಹಳೆಯ ಜರ್ನಲ್ 'ಜರ್ನಲ್ ಆಫ್ ಜಪಾನೀಸ್ ಬಾಟನಿ' ನಲ್ಲಿ ಪ್ರಕಟಿಸಲಾಗಿದೆ.

ರೇಂಜ್ ಆಫೀಸರ್ ಹರೀಶ್ ನೇಗಿ ಮತ್ತು ಜೆಆರ್​ಎಫ್​ ಮನೋಜ್ ಸಿಂಗ್ ಅವರನ್ನು ಒಳಗೊಂಡ ಉತ್ತರಾಖಂಡ ಅರಣ್ಯ ಇಲಾಖೆಯ ಸಂಶೋಧನಾ ವಿಭಾಗದ ತಂಡ ಗೋಪೇಶ್ವರದ ಮಂಡಲ ಕಣಿವೆಯಲ್ಲಿ ಈ ಮಾಂಸಾಹಾರಿ ಸಸ್ಯ ಉಟ್ರಿಕ್ಯುಲೇರಿಯಾ ಫರ್ಸೆಲ್ಲಾಟಾವನ್ನು ಕಂಡುಹಿಡಿದಿದ್ದಾರೆ.

36 ವರ್ಷಗಳ ನಂತರ ಪತ್ತೆ: ಉತ್ತರಾಖಂಡದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂಜೀವ್ ಚತುರ್ವೇದಿ ಈ ಬಗ್ಗೆ ಮಾತನಾಡಿ, ಈ ಕೀಟಹಾರಿ ಸಸ್ಯವು ಉತ್ತರಾಖಂಡದಲ್ಲಿ ಮಾತ್ರವಲ್ಲದೆ ಇಡೀ ಭಾರತದ ಪಶ್ಚಿಮ ಹಿಮಾಲಯ ಪ್ರದೇಶದಲ್ಲಿದೆ. ಮೊದಲ ಬಾರಿಗೆ ಅಪರೂಪದ ಈ ಸಸ್ಯ ಇಲ್ಲಿ ಕಂಡುಬಂದಿದೆ. 1986 ರ ನಂತರ ಈ ಸಸ್ಯವು ಭಾರತದ ಯಾವುದೇ ಭಾಗದಲ್ಲಿ ಕಂಡುಬಂದಿರಲಿಲ್ಲ. ಉತ್ತರಾಖಂಡದ ಪ್ರವಾಸಿ ತಾಣದೊಳಗೆ ಭಾರಿ ಜೈವಿಕ ಒತ್ತಡದಿಂದಾಗಿ ಈ ಜಾತಿಯ ಸಸ್ಯವು ಅಪಾಯವನ್ನು ಎದುರಿಸುತ್ತಿದೆ ಎಂದು ಅವರು ಹೇಳಿದರು.

ಸಸ್ಯವು ಬೇಟೆಯಾಡುತ್ತದೆ: ಈ ಮಾಂಸಾಹಾರಿ ಸಸ್ಯವು ಸಾಮಾನ್ಯವಾಗಿ ಬ್ಲಾಡರ್‌ವರ್ಟ್ಸ್ ಎಂದು ಕರೆಯಲ್ಪಡುವ ಕುಲಕ್ಕೆ ಸೇರಿದೆ. ಇದು ಕೀಟಗಳ ಲಾರ್ವಾಗಳನ್ನು ತಿನ್ನುತ್ತದೆ ಮತ್ತು ಅವುಗಳಿಂದ ಸಾರಜನಕವನ್ನು ಪಡೆಯುತ್ತದೆ ಎಂದು ವಿವರಿಸಿದ್ದಾರೆ.

ಇದನ್ನೂ ಓದಿ: ದ.ಆಫ್ರಿಕಾದ ನೈಟ್‌ಕ್ಲಬ್‌ನಲ್ಲಿ 17 ಜನರ ಶವ ಪತ್ತೆ! ಕಾರಣ ನಿಗೂಢ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.