ಗಾಜಿಯಾಬಾದ್: ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಪ್ರಕರಣ ಗಾಜಿಯಾಬಾದ್ನ ಇಂದಿರಾಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಬಾಲಕಿಯ ತಾಯಿ ಮನೆಯಲ್ಲಿ ಇಲ್ಲದ ವೇಳೆ ನೆರೆಮನೆಯ ವ್ಯಕ್ತಿಯೋರ್ವ ಬಾಲಕಿಯ ಮೇಲೆ ಅತ್ಯಾಚಾರ(ಡಿಜಿಟಲ್ ರೇಪ್) ಎಸಗಿದ್ದಾನೆ.
ಈ ಸಂಬಂಧ ಬಾಲಕಿ ತನ್ನ ತಾಯಿಗೆ ಹೇಳಿದಾಗ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ತಲೆಮರೆಸಿಕೊಂಡಿದ್ದು, ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಬಾಲಕಿಯ ಮೇಲೆ ಡಿಜಿಟಲ್ ಅತ್ಯಾಚಾರ ನಡೆದಿದೆ. ಸದ್ಯ ಆರೋಪಿಯನ್ನು ಗುರುತಿಸಲಾಗಿದ್ದು, ಪ್ರಕರಣದ ತನಿಖೆ ಮುಂದುವರೆದಿದೆ. ಇನ್ನು, ಬಾಲಕಿಯ ತಾಯಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ. ಕೆಲಸದಿಂದ ಮನೆಗೆ ಹಿಂದಿರುಗಿದಾಗ ಬಾಲಕಿ ತನ್ನ ಮೇಲೆ ನಡೆದ ದುಷ್ಕೃತ್ಯದ ಬಗ್ಗೆ ತಾಯಿಗೆ ವಿವರಿಸಿದ್ದಾಳೆ. ಬಳಿಕ ಪೊಲೀಸರಿಗೆ ದೂರು ನೀಡಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಎಸ್ಪಿ ಜ್ಞಾನೇಂದ್ರ ಸಿಂಗ್, ಈ ಘಟನೆ ಶನಿವಾರ ಸಂಜೆ 7:30 ಕ್ಕೆ ಸಂಭವಿಸಿದೆ. ಆರೋಪಿಯು ಬಾಲಕಿಯ ಕುಟುಂಬಕ್ಕೆ ಪರಿಚಿತನಾಗಿದ್ದಾನೆ. ಆರೋಪಿಯ ವಿವರ ಪೊಲೀಸರಿಗೆ ಲಭಿಸಿದ್ದು, ಶೀಘ್ರವೇ ಬಂಧಿಸುವುದಾಗಿ ಹೇಳಿದರು.
ಡಿಜಿಟಲ್ ರೇಪ್ ಎಂದರೇನು : ಡಿಜಿಟಲ್ ರೇಪ್ ಎಂದರೆ ಇಂಟರ್‌ನೆಟ್ ಮೂಲಕ ಲೈಂಗಿಕ ಕಿರುಕುಳಗಳು ನಡೆಯುತ್ತವೆ ಎಂದಲ್ಲ. ಡಿಜಿಟಲ್ ಪದವು ಡಿಜಿಟ್ಸ್ ಎಂಬ ಪದದಿಂದ ಬಂದಿದೆ. ಅಂಕಿ ಎಂಬ ಪದಕ್ಕೆ ಬೆರಳುಗಳು ಅಥವಾ ಹೆಬ್ಬೆರಳು ಎಂಬ ಅರ್ಥವೂ ಇದೆ. ವಾಸ್ತವವಾಗಿ, ಒಬ್ಬ ವ್ಯಕ್ತಿ ಅಥವಾ ಆರೋಪಿಯು ಬೆರಳು, ಕಾಲ್ಬೆರಳು, ಹೆಬ್ಬೆರಳು ಬಳಸಿ ಖಾಸಗಿ ಭಾಗಗಳನ್ನು ಸ್ಪರ್ಶಿಸಿ ಕಿರುಕುಳ ನೀಡಿದಾಗ ಅಥವಾ ಅದನ್ನು ಮೀರಿದ ಕ್ರಿಯೆಯನ್ನು ಡಿಜಿಟಲ್ ರೇಪ್ ಎಂದು ಕರೆಯಲಾಗುತ್ತದೆ.
ಇದನ್ನೂ ಓದಿ : ಗ್ಯಾಸ್ ಕಟರ್ ಬಳಸಿ ಎಟಿಎಂಯಲ್ಲಿದ್ದ 14 ಲಕ್ಷ ಲೂಟಿ