ETV Bharat / bharat

ವಿಶೇಷ ಚೇತನ ಬಾಲಕಿ ಮೇಲೆ ಅತ್ಯಾಚಾರ: ಮೂವರು ಆರೋಪಿಗಳ ಬಂಧನ - ಈಟಿವಿ ಭಾರತ ಕರ್ನಾಟಕ

ಅಪ್ರಾಪ್ತ ವಿಶೇಷ ಚೇತನ ಬಾಲಕಿಯೋರ್ವಳ ಮೇಲೆ ಕಾಮುಕರು ನಿರಂತರವಾಗಿ ಅತ್ಯಾಚಾರವೆಸಗಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

Etv Bharat
Etv Bharat
author img

By

Published : Sep 15, 2022, 9:39 AM IST

ಇಂದಾಪುರ(ಮಹಾರಾಷ್ಟ್ರ): 13 ವರ್ಷದ ವಿಶೇಷ ಚೇತನ ಬಾಲಕಿಯ ಮೇಲೆ ಕಾಮುಕರು ಅತ್ಯಾಚಾರವೆಸಗಿರುವ ಘಟನೆ ಮಹಾರಾಷ್ಟ್ರದ ಇಂದಾಪುರದಲ್ಲಿ ನಡೆದಿದೆ. ಆರೋಪಿಗಳನ್ನು ಬಂಧಿಸುವಲ್ಲಿ ಇಲ್ಲಿನ ಪೊಲೀಸರು ಯಶಸ್ವಿಯಾಗಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ವಾಲ್​​ಚಂದನಗರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾದ ಬಳಿಕ ಆರೋಪಿಗಳಾದ ಶುಭಾಂಗಿ ಅಮೋಲ್​, ಅನಿಲ್ ನಾಲ್ವಡೆ ಹಾಗೂ ನಾನಾ ಬಗಡೆ ವಿರುದ್ಧ ಕೇಸು ದಾಖಲಾಗಿದ್ದು, ಇದೀಗ ಬಂಧಿಸಲಾಗಿದೆ.

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಇಂದಾಪುರ ತಾಲೂಕಿನ ಪಶ್ಚಿಮ ಭಾಗದ ಗ್ರಾಮವೊಂದರಲ್ಲಿ ಬಾಲಕಿ 6ನೇ ತರಗತಿ ವ್ಯಾಸಂಗ ಮಾಡ್ತಿದ್ದಳು. ಕಾಮುಕರು ಈಕೆಯ ಮೇಲೆ 2021 ರಿಂದ 2022ರ ಏಪ್ರಿಲ್ ತಿಂಗಳವರೆಗೂ ದುಷ್ಕೃತ್ಯವೆಸಗಿದ್ದಾರೆ. ಇದಕ್ಕೆ ಮಹಿಳೆ ಶುಭಾಂಗಿ ಸಹಕಾರ ನೀಡಿದ್ದಳಂತೆ.

ಇದನ್ನೂ ಓದಿ: ನೇಣು ಬಿಗಿದ ಸ್ಥಿತಿಯಲ್ಲಿ ದಲಿತ ಸಹೋದರಿಯರ ಶವ ಪತ್ತೆ; ಅತ್ಯಾಚಾರವೆಸಗಿ ಕೊಲೆ ಶಂಕೆ

ಕಳೆದ ಕೆಲ ದಿನಗಳ ಹಿಂದೆ ಬಾಲಕಿ ಹೊಟ್ಟೆ ನೋವಿನಿಂದ ಬಳಲುತ್ತಿದ್ದಳು. ಬಾರಾಮತಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ತಪಾಸಣೆ ನಡೆಸಿದಾಗ ಗರ್ಭಿಣಿಯಾಗಿರುವುದು ಗೊತ್ತಾಗಿದೆ. ಇದಾದ ನಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.