ETV Bharat / bharat

ನಿವೃತ್ತ ಕಾನ್ಸ್‌ಟೇಬಲ್‌ ಪುತ್ರನಿಂದ ಅಂಧ ಮಹಿಳೆಯ ಮೇಲೆ ಅತ್ಯಾಚಾರ - ಅಂಧ ಮಹಿಳೆ ಮೇಲೆ ವಿಶ್ವ ಮಹಿಳಾ ದಿನಾಚರಣೆಯಂದೇ ರೇಪ್

ವಿಶ್ವ ಮಹಿಳಾ ದಿನಾಚರಣೆಯಂದೇ ಅಂಧ ಮಹಿಳೆಯ ಮೇಲೆ ಕಾಮುಕನೋರ್ವ ಅತ್ಯಾಚಾರವೆಸಗಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

Rape on Blind women in AP
Rape on Blind women in AP
author img

By

Published : Mar 9, 2022, 4:26 PM IST

ಚಿತ್ತೂರು(ಆಂಧ್ರಪ್ರದೇಶ): ಅಂಧ ಮಹಿಳೆಯ ಮೇಲೆ ಅತ್ಯಾಚಾರ ನಡೆದ ಪ್ರಕರಣ ಆಂಧ್ರಪ್ರದೇಶದ ಚಿತ್ತೂರಿನಲ್ಲಿ ನಡೆದಿದೆ. ಸಂತ್ರಸ್ತೆಯ ತಾಯಿ ಈ ಕುರಿತು ದಿಶಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

ವಿವಾಹಿತ ವ್ಯಕ್ತಿ ಈ ದುಷ್ಕೃತ್ಯದಲ್ಲಿ ಭಾಗಿಯಾಗಿದ್ದಾನೆ. ಸಂತ್ರಸ್ತೆಯ ಕುಟುಂಬ ಚಿತ್ತೂರಿನಲ್ಲಿ ವಾಸವಾಗಿದ್ದು, ಯುವತಿಯ ತಂದೆ ಈ ಹಿಂದೆ ತೀರಿಕೊಂಡಿದ್ದರು. ಸದ್ಯ ತಾಯಿ ಜೊತೆ ಯುವತಿ ಉಳಿದುಕೊಂಡಿದ್ದಾಳೆ. ಇದೇ ಪ್ರದೇಶದಲ್ಲಿ ವಾಸವಾಗಿರುವ ನಿವೃತ್ತ ಪೊಲೀಸ್​​ ಕಾನ್ಸ್‌ಟೇಬಲ್‌ ಪುತ್ರ ಜಯಚಂದ್ರ ಈ ದುಷ್ಕೃತ್ಯವೆಸಗಿದ್ದಾನೆ. ವಿಶ್ವ ಮಹಿಳಾ ದಿನಾಚರಣೆಯಂದು ಆಕೆಗೆ ಸುಳ್ಳು ಹೇಳಿ, ತಮ್ಮ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ ಎಂದು ತಾಯಿ ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಉಗ್ರ ಸಂಹಾರದ ರೋಮಾಂಚಕ ಪ್ರದರ್ಶನ: ಬೆಳಗಾವಿಯಲ್ಲಿ ಇಂಡೋ-ಜಪಾನ್‌ ಜಂಟಿ ಸಮರಾಭ್ಯಾಸ

ಆರೋಪಿಯ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಚಿತ್ತೂರು ದಿಶಾ ಪೊಲೀಸ್ ಠಾಣೆ ಸಿಐ ಮುರಳಿಮೋಹನ್ ತಿಳಿಸಿದ್ದಾರೆ. ಆರೋಪಿಯ ತಂದೆ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿರುವ ಕಾರಣ ಪ್ರಕರಣ ದಿಕ್ಕು ತಪ್ಪುವ ಸಾಧ್ಯತೆ ದಟ್ಟವಾಗಿದ್ದು, ಉನ್ನತ ಅಧಿಕಾರಿಗಳು ಪ್ರಕರಣದ ವಿಚಾರಣೆ ನಡೆಸುವಂತೆ ಮನವಿ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.