ಹೈದರಾಬಾದ್(ತೆಲಂಗಾಣ): ಹುಟ್ಟುಹಬ್ಬದ ದಿನವೇ ಬ್ಯೂಟಿಷಿಯನ್ ಮೇಲೆ ಕಾಮುಕನೋರ್ವ ಅತ್ಯಾಚಾರವೆಸಗಿರುವ ಘಟನೆ ತೆಲಂಗಾಣದ ಹೈದರಾಬಾದ್ನಲ್ಲಿ ನಡೆದಿದೆ. ಮೆಡ್ಚಲ ಜಿಲ್ಲೆಯ ಜೇಡಿಮೆಟ್ಲಾ ಪ್ರದೇಶದಲ್ಲಿ ಪ್ರಕರಣ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ರಂಗಾರೆಡ್ಡಿ ಜಿಲ್ಲೆಯ ಶಾದ್‌ನಗರ ಪ್ರದೇಶದ ವಾಸವಾಗಿದ್ದ ಯುವತಿ ಜೀವನೋಪಾಯಕ್ಕಾಗಿ ಆರು ತಿಂಗಳ ಹಿಂದೆ ನಗರಕ್ಕೆ ಬಂದಿದ್ದಳು. ಗಾಜುಲರಾಮರಂನ ಪ್ರೆಸ್ಟನ್ ಪ್ಲೇಸ್ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದ ಇವರು, ಬ್ಯೂಟಿಷಿಯನ್ ಕೋರ್ಸ್ ಮುಗಿಸಿ ಬ್ಯೂಟಿ ಪಾರ್ಲರ್ನಲ್ಲಿ ಕೆಲಸ ಮಾಡುತ್ತಿದ್ದಾರೆ.
ಇದನ್ನೂ ಓದಿ: ಬಾಲಕಿ ಮೇಲೆ ಚಿಕ್ಕಪ್ಪನ ಮಕ್ಕಳಿಂದಲೇ ಅತ್ಯಾಚಾರ, ಕೊಲೆ ಬೆದರಿಕೆ
ಈ ವೇಳೆ ಸಂಜೀವ್ ರೆಡ್ಡಿ(57) ಎಂಬಾತ ಮಹಿಳೆಯ ಸಂಪರ್ಕಕ್ಕೆ ಬಂದಿದ್ದಾನೆ. ಮಹಿಳೆ ಸ್ವಂತ ಬ್ಯೂಟಿ ಪಾರ್ಲರ್ ಪ್ರಾರಂಭಿಸುವ ಇಂಗಿತವನ್ನು ಆತನ ಮುಂದೆ ವ್ಯಕ್ತಪಡಿಸಿದ್ದಳು. ಇದಕ್ಕೆ ಆರೋಪಿ ಹಣ ನೀಡುವ ಭರವಸೆ ನೀಡಿದ್ದನಂತೆ. ಹೀಗಾಗಿ, ಯುವತಿಯ ಹುಟ್ಟುಹಬ್ಬವಾಗಿದ್ದ ಕಾರಣ ನಿನ್ನೆ ರಾತ್ರಿ ಆಕೆಯ ನಿವಾಸಕ್ಕೆ ತೆರಳಿದ್ದಾನೆ. ಈ ಸಂದರ್ಭದಲ್ಲಿ ಮಹಿಳೆಯ ಮೇಲೆ ಅತ್ಯಾಚಾರವೆಸಗಿ, ಅಲ್ಲಿಂದ ಪರಾರಿಯಾಗಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಯುವತಿ ದೂರು ದಾಖಲು ಮಾಡಿದ್ದಾಳೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತಲೆಮರೆಸಿಕೊಂಡಿರುವ ಆರೋಪಿಗೋಸ್ಕರ ಬಲೆ ಬೀಸಿದ್ದಾರೆ.