ETV Bharat / bharat

ಚಲಿಸುತ್ತಿದ್ದ ರೈಲಿನ ಪ್ಯಾಂಟ್ರಿ ಕಾರಿನಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ: 15 ಮಂದಿ ವಶಕ್ಕೆ

ರೈಲಿನಲ್ಲಿ ಸ್ಥಳ ಸಿಗದ ಹಿನ್ನೆಲೆಯಲ್ಲಿ ತಿಂಡಿ - ತಿನಿಸು ಮಾರಾಟ ಮಾಡುವವರು ಬಾಲಕಿಯನ್ನು ಪ್ಯಾಂಟ್ರಿ ಕಾರಿನಲ್ಲಿ ಕೂರಲು ಜಾಗವಿದೆ ಎಂದು ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ.

rape in moving train
ಚಲಿಸುತ್ತಿದ್ದ ರೈಲಿನ ಪ್ಯಾಂಟ್ರಿ ಕಾರಿನಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ
author img

By

Published : Feb 12, 2022, 12:08 PM IST

ಭೋಪಾಲ್​ (ಮಧ್ಯಪ್ರದೇಶ): ನಿನ್ನೆ ರಾತ್ರಿ ಭೋಪಾಲ್‌ ಮಾರ್ಗವಾಗಿ ದೆಹಲಿಯೆಡೆಗೆ ಚಲಿಸುತ್ತಿದ್ದ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್‌ ರೈಲಿನ ಪ್ಯಾಂಟ್ರಿ ಕಾರಿನಲ್ಲಿ (ರೈಲಿನಲ್ಲಿ ತಿಂಡಿ-ತಿನಿಸು ತಯಾರಿಸುವ-ಸಂಗ್ರಹಿಸಿಡುವ ಸ್ಥಳ) ದೆಹಲಿ ಮೂಲದ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವುದು ತಿಳಿದು ಬಂದಿದೆ.

ಬಾಲಕಿಗೆ ರೈಲಿನಲ್ಲಿ ಸ್ಥಳ ಸಿಗದ ಹಿನ್ನೆಲೆಯಲ್ಲಿ ತಿಂಡಿ - ತಿನಿಸು ಮಾರಾಟ ಮಾಡುವವರು ಆಕೆಯನ್ನು ಪ್ಯಾಂಟ್ರಿ ಕಾರಿನಲ್ಲಿ ಕೂರಲು ಜಾಗವಿದೆ ಎಂದು ಕರೆದೊಯ್ದು ಕೃತ್ಯ ಎಸಗಿದ್ದಾರೆ. ಬಾಲಕಿ ಸ್ಥಿತಿ ಗಂಭೀರವಾಗಿದ್ದು, ಆಕೆ ಏನನ್ನೂ ಹೇಳುವ ಸ್ಥಿತಿಯಲ್ಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: ಮನೆ ಬಿಟ್ಟು ಬಂದಿದ್ದ ಯುವತಿ ಮೇಲೆ ಅತ್ಯಾಚಾರವೆಸಗಿ ಮಾರಾಟ ಮಾಡಲೆತ್ನಿಸಿದ ಆರೋಪಿ ಅರೆಸ್ಟ್!

ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪ್ಯಾಂಟ್ರಿ ಕಾರ್ ಮ್ಯಾನೇಜರ್​ನನ್ನು ಬಂಧಿಸಿ, ಅಲ್ಲಿ ಕೆಲಸ ಮಾಡುತ್ತಿದ್ದ 12 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.