ನವದೆಹಲಿ : ರಾಜ್ಯದ ಬಿಟ್ ಕಾಯಿನ್ ಹಗರಣ ( Karnataka Bitcoin scam) ಈಗ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ರಾಜ್ಯದ ಪ್ರತಿಪಕ್ಷಗಳು ಮಾತ್ರವಲ್ಲದೇ, ಕಾಂಗ್ರೆಸ್ ಪಕ್ಷದ (Congress Party) ಪ್ರಧಾನ ಕಾರ್ಯದರ್ಶಿಯಾದ ರಂದೀಪ್ ಸುರ್ಜೇವಾಲಾ ಕೂಡ ಈ ಹಗರಣದ ಕುರಿತು ದನಿಯೆತ್ತಿದ್ದಾರೆ.
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಂದೀಪ್ ಸಿಂಗ್ ಸುರ್ಜೇವಾಲಾ (Randeep Singh Surjewala) ಕರ್ನಾಟಕ ಬಿಜೆಪಿ ಸರ್ಕಾರದ (Karnataka BJP Government) ವಿರುದ್ಧ ಕಿಡಿಕಾರಿದ್ದಾರೆ. ಅಷ್ಟೇ ಅಲ್ಲದೇ ಈ ಕುರಿತು ಟ್ವೀಟ್ ಮಾಡಿರುವ ಅವರು, ಸರ್ಕಾರ ಹಗರಣವನ್ನು ಮುಚ್ಚಿಡುವ ಪ್ರಯತ್ನ ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
-
The “Operation Bitcoin Coverup” !
— Randeep Singh Surjewala (@rssurjewala) November 13, 2021 " class="align-text-top noRightClick twitterSection" data="
• Who was stealing #Bitcoin ?
• Who did the stolen Bitcoins go?
• Who hacked InternationalExchanges?
• Who hacked E Procurement Portal?
• Who hacked Int. Companies?
• What is the Karnataka connection?
Pl wait for AICC PC at 2 PM today.
">The “Operation Bitcoin Coverup” !
— Randeep Singh Surjewala (@rssurjewala) November 13, 2021
• Who was stealing #Bitcoin ?
• Who did the stolen Bitcoins go?
• Who hacked InternationalExchanges?
• Who hacked E Procurement Portal?
• Who hacked Int. Companies?
• What is the Karnataka connection?
Pl wait for AICC PC at 2 PM today.The “Operation Bitcoin Coverup” !
— Randeep Singh Surjewala (@rssurjewala) November 13, 2021
• Who was stealing #Bitcoin ?
• Who did the stolen Bitcoins go?
• Who hacked InternationalExchanges?
• Who hacked E Procurement Portal?
• Who hacked Int. Companies?
• What is the Karnataka connection?
Pl wait for AICC PC at 2 PM today.
ಬಿಟ್ ಕಾಯಿನ್ ಹಗರಣದ ಕುರಿತು ಸರಣಿ ಟ್ವೀಟ್ ಮಾಡಿರುವ ರಂದೀಪ್ ಸುರ್ಜೇವಾಲಾ, ಸುದ್ದಿಗೋಷ್ಠಿಗೂ ಮುನ್ನ ರಾಜ್ಯ ಸರ್ಕಾರಕ್ಕೆ ಆಪರೇಷನ್ ಬಿಟ್ ಕಾಯಿನ್ ಕವರಪ್ (Operation Bitcoin coverup) ಹೆಸರಲ್ಲಿ ಕರ್ನಾಟಕ ಸರ್ಕಾರಕ್ಕೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಅವುಗಳೆಂದರೆ..
- ಬಿಟ್ಕಾಯಿನ್ಗಳನ್ನು ಕದ್ದವರು ಯಾರು ?
- ಕದ್ದ ಬಿಟ್ಕಾಯಿನ್ಗಳು ಎಲ್ಲಿ ಹೋದವು?
- ಅಂತಾರಾಷ್ಟ್ರೀಯ ವಿನಿಮಯವನ್ನು ಹ್ಯಾಕ್ ಮಾಡಿದ್ದು ಯಾರು?
- ಸಾರ್ವಜನಿಕ ಸಂಗ್ರಹಣೆ ಪೋರ್ಟಲ್ ಅನ್ನು ಹ್ಯಾಕ್ ಮಾಡಿದ್ದು ಯಾರು?
- ಅಂತಾರಾಷ್ಟ್ರೀಯ ಕಂಪನಿಗಳನ್ನು ಹ್ಯಾಕ್ ಮಾಡಿದ್ದು ಯಾರು?
- ಇದರೊಂದಿಗೆ ಕರ್ನಾಟಕದ ಕನೆಕ್ಷನ್ ಏನು?
ಒಂದು ಟ್ವೀಟ್ನಲ್ಲಿ ಈ ರೀತಿಯ ಪ್ರಶ್ನೆಗಳನ್ನು ಕೇಳಿರುವ ಅವರು ಮತ್ತೊಂದು ಟ್ವೀಟ್ನಲ್ಲಿ ಕರ್ನಾಟಕ ಬಿಜೆಪಿ ಸರ್ಕಾರದ ಅಡಿಯಲ್ಲಿ ಭಾರತದ ಅತಿ ದೊಡ್ಡ ಬಿಟ್ಕಾಯಿನ್ ಹಗರಣ ನಡೆದಿದೆ. ಒಳಸಂಚು ರೂಪಿಸಲು, ಹಗರಣವನ್ನು ಮರೆ ಮಾಚಲು ಪ್ರಯತ್ನಗಳು ನಡೆಯತ್ತಿವೆ. ಇಂಟರ್‌ಪೋಲ್, ಎನ್‌ಐಎ, ಇಡಿ, ಎಸ್‌ಎಫ್‌ಐಒ ತನಿಖಾ ಸಂಸ್ಥೆಗಳಿಗೆ ಕರ್ನಾಟಕ ಸರ್ಕಾರ ಮಾಹಿತಿ ನೀಡದೇ ವಿಷಯ ಮುಚ್ಚಿಟ್ಟಿದೆ ಎಂದು ಎಂದು ಆರೋಪಿಸಿದ್ದಾರೆ.
-
India’s biggest ever “Bitcoin Scam Coverup” under the Karnataka BJP Government!
— Randeep Singh Surjewala (@rssurjewala) November 13, 2021 " class="align-text-top noRightClick twitterSection" data="
Intrigue, Whitewash, Concealment, Deception smack of a deep-rooted conspiracy!
Why were Interpol/NIA/ED/SFIO kept in the dark till the very end?
Our Statement-: pic.twitter.com/l9BeIZU436
">India’s biggest ever “Bitcoin Scam Coverup” under the Karnataka BJP Government!
— Randeep Singh Surjewala (@rssurjewala) November 13, 2021
Intrigue, Whitewash, Concealment, Deception smack of a deep-rooted conspiracy!
Why were Interpol/NIA/ED/SFIO kept in the dark till the very end?
Our Statement-: pic.twitter.com/l9BeIZU436India’s biggest ever “Bitcoin Scam Coverup” under the Karnataka BJP Government!
— Randeep Singh Surjewala (@rssurjewala) November 13, 2021
Intrigue, Whitewash, Concealment, Deception smack of a deep-rooted conspiracy!
Why were Interpol/NIA/ED/SFIO kept in the dark till the very end?
Our Statement-: pic.twitter.com/l9BeIZU436
ಇದರ ಜೊತೆಗೆ ಬಿಟ್ಕಾಯಿನ್ ಹಗರಣದ ವಿಚಾರವಾಗಿ ನ್ಯಾಯಸಮ್ಮತ ತನಿಖೆಯ ಅಗತ್ಯವಿದೆ ಎಂದು ರಂದೀಪ್ ಸಿಂಗ್ ಸುರ್ಜೇವಾಲಾ ಅಭಿಪ್ರಾಯ ವ್ಯಕ್ತಪಡಿಸಿದ್ದು, ಸುದ್ದಿಗೋಷ್ಠಿಯಲ್ಲಿ ಹಗರಣದ ಕುರಿತ ಪಕ್ಷದ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.
ಇದನ್ನೂ ಓದಿ: ಕ್ರೂಸ್ ಹಡಗು ಡ್ರಗ್ಸ್ ಪ್ರಕರಣ: ಮೋಹಕ್ ಜೈಸ್ವಾಲ್‌ಗೆ ಜಾಮೀನು