ಹರಿದ್ವಾರ: ಯೋಗ ಗುರು ಸ್ವಾಮಿ ರಾಮದೇವ್ ಅವರು ಸನ್ಯಾಸ್ ದಿವಸ್ ಮತ್ತು ಮೊರಾರಿ ಬಾಪು ಅವರ ರಾಮ್ ಕಥಾ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡಿದ್ದು, ರಾಮ್ ಕಥಾದ ಕೊನೆಯ ದಿನದಂದು, ಮೊರಾರಿ ಬಾಪು ಅನುಯಾಯಿಗಳಿಗೆ ಭಗವಾನ್ ರಾಮ ತೋರಿಸಿದ ಮಾರ್ಗವನ್ನು ಅನುಸರಿಸುವಂತೆ ಸೂಚಿಸಿದರು. ಇದೇ ವೇಳೆ ರಷ್ಯಾ-ಉಕ್ರೇನ್ ಯುದ್ಧ, ಪಾಕಿಸ್ತಾನ ಮತ್ತು ಪ್ರಧಾನಿ ಮೋದಿ ಬಗ್ಗೆ ರಾಮದೇವ್ ಮಾತನಾಡಿದ್ದಾರೆ.
ಉಕ್ರೇನ್-ರಷ್ಯಾ ಯುದ್ಧದ ಬಗ್ಗೆ ಮಾತನಾಡಿ, ಯುದ್ಧವು ಪರಿಹಾರವಲ್ಲ. ಶೀಘ್ರದಲ್ಲೇ ಅಲ್ಲಿ ಶಾಂತಿ ನೆಲೆಸುತ್ತದೆ ಎಂದು ಭಾವಿಸುತ್ತೇವೆ ಎಂದ ಅವರು, ಪಾಕಿಸ್ತಾನದ ರಾಜಕೀಯ ಅಸ್ಥಿರತೆಯನ್ನು ನೋಡಿದರೆ ಪಾಕಿಸ್ತಾನವು ಪ್ರಜಾಪ್ರಭುತ್ವದ ದೃಷ್ಟಿಯಿಂದ ಉತ್ತಮ ದೇಶವಲ್ಲ. ನಾವು ನೆರೆಹೊರೆಯವರನ್ನು ಬದಲಾಯಿಸಲು ಸಾಧ್ಯವಿಲ್ಲ ಎಂಬುದಂತೂ ನಿಜ. ಆದರೆ, ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಭಾರತವನ್ನು ಯಾರೂ ಹಾಳು ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಬಾಗಲಕೋಟೆ-ವಿಜಯಪುರದಲ್ಲಿ ಜೋರು ಮಳೆ: ಸಿಡಿಲು ಬಡಿದು ಯುವಕ, ಎತ್ತುಗಳು ಬಲಿ
ಪಾಕಿಸ್ತಾನವಾಗಲಿ ಅಥವಾ ಇತರ ಯಾವುದೇ ಶಕ್ತಿಗಳಾಗಲಿ ಭಾರತಕ್ಕೆ ಏನೂ ಮಾಡಲು ಸಾಧ್ಯವಿಲ್ಲ. ಪಾಕಿಸ್ತಾನದ ಅಮಾಯಕ ಜನರು ಅಲ್ಲಿನ ಆಡಳಿತಗಾರರಿಂದ ಸಾಕಷ್ಟು ವಂಚನೆಗೊಳಗಾಗಿದ್ದಾರೆ ಎಂದು ದೂರಿದರು.