ರಾಯ್‌ಪುರ (ಛತ್ತೀಸ್ಗಢ): ರಕ್ಷಾ ಬಂಧನ.. ಸೋದರ - ಸೋದರಿಯರ ಬಂಧ ಬೆಸೆಯುವ ಹಬ್ಬ. ಈ ಹಿಂದೆ ರಾಖಿ ಹಬ್ಬದ ದಿನ ರೇಷ್ಮೆದಾರದಿಂದ ತಯಾರಿಸಿದ ರಾಖಿಯನ್ನು ಸಹೋದರಿಯರು, ಸಹೋದರರ ಕೈಗೆ ಕಟ್ಟುವ ಮೂಲಕ ಹಬ್ಬವನ್ನು ಆಚರಿಸುತ್ತಿದ್ದರು. ಆದರೆ, ಈಗ ಕಾಲ ಬದಲಾಗಿದ್ದು ವಿಭಿನ್ನವಾದ ರಾಖಿಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.
ಹೌದು, ಈ ಬಾರಿಯ ರಕ್ಷಾ ಬಂಧನದ ಪ್ರಯುಕ್ತ ಕೆಲ ಚಿನ್ನಾಭರಣ ಮಳಿಗೆಗಳು ಚಿನ್ನ, ಬೆಳ್ಳಿ, ವಜ್ರದ ರಾಖಿಗಳನ್ನು ತಯಾರಿಸಿ ಮಾರುತ್ತಿವೆ. ಛತ್ತೀಸ್ಗಢದ ರಾಯ್ಪುರದ ಬುಲಿಯನ್ ಮಾರುಕಟ್ಟೆಯಲ್ಲಿ 1,200 ರೂ.ನಿಂದ 2 ಲಕ್ಷ ರೂಪಾಯಿವರೆಗಿನ ರಾಖಿಯಿವೆ.
ಚಿನ್ನ ಮತ್ತು ಬೆಳ್ಳಿಯ ರಾಖಿಗೆ ವ್ಯಾಪಕ ಬೇಡಿಕೆಯಿದೆ. ಚಿನ್ನದ ರಾಖಿಗಳನ್ನು 18, 20 ಮತ್ತು 22 ಕ್ಯಾರೆಟ್ ಚಿನ್ನದಿಂದ ಮಾಡಲಾಗಿದೆ. ಚಿನ್ನದ ಜೊತೆಗೆ, ಕುಂದನ್, ಪೋಲ್ಕಿ, ಜಿಬಿ ಸ್ಟೋನ್, ರೋಸ್ ಗೋಲ್ಡ್ ಮತ್ತು ಜಡೌ ರತ್ನಗಳಿಂದ ರಾಖಿಯನ್ನು ಅಲಂಕರಿಸಲಾಗಿದೆ.
ಇದನ್ನೂ ಓದಿ: ರಕ್ಷಾ ಬಂಧನ.. ವೀಕೆಂಡ್ ಕರ್ಫ್ಯೂ ಹಿನ್ನೆಲೆ ಆತಂಕಕ್ಕೊಳಗಾದ ರಾಖಿ ವ್ಯಾಪಾರಸ್ಥರು..
ಬುಲಿಯನ್ ವ್ಯಾಪಾರಿ ದಿಲೀಪ್ ಲುನಿಯಾ ಅವರ ಅಂಗಡಿಗಳಲ್ಲಿ ವಜ್ರದ ರಾಖಿಗಳಿವೆ. ಒಂದು ರಾಖಿಯ ಬೆಲೆ 10 ಸಾವಿರ ರೂ.ನಿಂದ 2 ಲಕ್ಷ ರೂ.ವರೆಗೆ ಒಂದು ರಾಖಿಯ ಮೌಲ್ಯ ಇರುತ್ತದೆ.