ETV Bharat / bharat

ರೈತನೇ ಕಿಂಗ್ ಮೇಕರ್​, ಚುನಾವಣೆಯಲ್ಲಿ ಸ್ಪರ್ಧಿಸುವ ಅವಶ್ಯಕತೆ ಇಲ್ಲ: ರಾಕೇಶ್ ಟಿಕಾಯತ್

author img

By

Published : Dec 25, 2021, 4:21 PM IST

ವರ್ಷವಿಡೀ ರೈತ ಚಳವಳಿಯನ್ನು ಜೀವಂತವಾಗಿಟ್ಟಿದ್ದ ರೈತರೇ ಪ್ರಮುಖ ನಾಯಕರಾಗಿದ್ದಾರೆ. ದೇಶದಲ್ಲಿ ಚಳವಳಿ, ಚಳವಳಿಗಾರರು ಬಲಿಷ್ಠರಾಗಬೇಕು. ಇಬ್ಬರೂ ಬಲಿಷ್ಠವಾಗಿದ್ದರೆ ಯಾವುದೇ ರೀತಿಯ ಸಮಸ್ಯೆ ಬರುವುದಿಲ್ಲ..

rakesh-tikait-in-bharatpur-says-farmer-is-a-king-maker
ರೈತನೇ ಕಿಂಗ್ ಮೇಕರ್​, ಚುನಾವಣೆಯಲ್ಲಿ ಸ್ಪರ್ಧಿಸುವ ಅವಶ್ಯಕತೆ ಇಲ್ಲ: ರಾಕೇಶ್ ಟಿಕಾಯತ್

ಭರತಪುರ, ರಾಜಸ್ಥಾನ : ರೈತರು ಕಿಂಗ್ ಮೇಕರ್ ಆಗಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸುವ ಅವಶ್ಯಕತೆ ಇಲ್ಲ. ಚುನಾವಣೆ ಸ್ಪರ್ಧೆಯಿಂದ ದೂರವಿರುವುದು ಉತ್ತಮ ಎಂದು ರೈತ ನಾಯಕ ರಾಕೇಶ್ ಟಿಕಾಯತ್ ಅಭಿಪ್ರಾಯಪಟ್ಟಿದ್ದಾರೆ.

ರಾಜಸ್ಥಾನದ ಭರತಪುರದಲ್ಲಿ ಮಹಾರಾಜ ಸೂರಜ್​​ಮಲ್ ಅವರ ಸ್ಮರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ರಾಕೇಶ್ ಟಿಕಾಯತ್​, ರೈತರ ಹೋರಾಟದಿಂದ ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ಹಿಂಪಡೆದಿದೆ. ಯುದ್ದವೆಂದರೆ ಶಸ್ತ್ರಗಳಿಂದ ಹೋರಾಡುವುದಲ್ಲ, ಸತ್ಯಾಗ್ರಹದಿಂದಲೂ ಗೆಲ್ಲಬಹುದು. ನನಗೆ ಭರತ್​ಪುರದ ಮಹಾರಾಜ ಸೂರಜ್​ಮಲ್ ಸ್ಫೂರ್ತಿ ಎಂದರು.

ರೈತರು ಬೇರೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವ ಅಗತ್ಯವಿಲ್ಲ. ಏಕೆಂದರೆ, ಸ್ಪರ್ಧಿಸದೆ ಅವರ ಎಲ್ಲಾ ಕೆಲಸಗಳು ನಡೆಯುತ್ತವೆ. ರೈತನೇ ಕಿಂಗ್ ಮೇಕರ್. ಸೋಲು-ಗೆಲುವಿನ ಪ್ರಶ್ನೆಯೂ ಇಲ್ಲ. ವರ್ಷವಿಡೀ ರೈತ ಚಳವಳಿಯನ್ನು ಜೀವಂತವಾಗಿಟ್ಟಿದ್ದ ರೈತರೇ ಪ್ರಮುಖ ನಾಯಕರಾಗಿದ್ದಾರೆ. ದೇಶದಲ್ಲಿ ಚಳವಳಿ, ಚಳವಳಿಗಾರರು ಬಲಿಷ್ಠರಾಗಬೇಕು. ಇಬ್ಬರೂ ಬಲಿಷ್ಠವಾಗಿದ್ದರೆ ಯಾವುದೇ ರೀತಿಯ ಸಮಸ್ಯೆ ಬರುವುದಿಲ್ಲ ಎಂದು ರಾಕೇಶ್ ಟಿಕಾಯತ್ ಅಭಿಪ್ರಾಯಪಟ್ಟಿದ್ದಾರೆ.

ಮಹಾರಾಜ ಸೂರಜ್​ಮಲ್ ಯಾರು? : ಮಹಾರಾಜಿ ಸೂರಜ್​ಮಲ್ ರಜಪೂತ ಜಾಟ್ ದೊರೆಗಳಲ್ಲಿ ಸ್ವತಂತ್ರ ಹಿಂದೂ ರಾಜ್ಯದ ಕನಸನ್ನು ಕಂಡವರಲ್ಲಿ ರಾಜಸ್ಥಾನದ ದೊರೆಗಳಲ್ಲಿ ಒಬ್ಬರು. ಮೊಘಲ್ ದೊರೆಗಳ ವಿರುದ್ಧ ಹೋರಾಡಿದ್ದ ಸೂರಜ್​ಮಲ್ ಮರಾಠರ ಜೊತೆಗೂಡಿ ಮೊಘಲರನ್ನು ಸೋಲಿಸಿದ್ದ. ಸೂರಜ್​ಮಲ್ ಭರತ್​ಪುರದಲ್ಲಿ ಲೋಹಾಗಢ್​ ಕೋಟೆಯನ್ನು ನಿರ್ಮಾಣ ಮಾಡಿದ್ದರು.

ಬ್ರಿಟಿಷರು ಲೋಹಾಗಢ ಕೋಟೆಯ ಮೇಲೆ 13 ಬಾರಿ ದಾಳಿ ಮಾಡಿದರೂ, ಕೋಟೆಗೆ ಯಾವುದೇ ಹಾನಿ ಮಾಡಲು ಬ್ರಿಟಿಷರಿಂದ ಸಾಧ್ಯವಾಗಿರಲಿಲ್ಲ. ಮಹಾರಾಜ ಸೂರಜ್​ಮಲ್ 1763ರ ಡಿಸೆಂಬರ್ 25ರಂದು ಯುದ್ಧವೊಂದರಲ್ಲಿ ಹೋರಾಡುವಾಗ ವೀರ ಮರಣವನ್ನಪ್ಪಿದ್ದು, ಅಂದಿನಿಂದ ಪ್ರತಿವರ್ಷ ಈ ದಿನವನ್ನು ಬಲಿದಾನದ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ.

ಇದನ್ನೂ ಓದಿ: ಅಟಲ್​ ಬಿಹಾರಿ ವಾಜಪೇಯಿ 97ನೇ ಜನ್ಮದಿನ: ಗೌರವ ಸಮರ್ಪಿಸಿದ ಪಿಎಂ ಮೋದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.