ETV Bharat / bharat

ಉದಯ್​ಪುರ ಹತ್ಯೆ ಕೇಸ್​.. ಬಿಜೆಪಿ ವಿರುದ್ಧ ರೈತ ಮುಖಂಡ ಟಿಕಾಯತ್ ವಾಗ್ದಾಳಿ

author img

By

Published : Jun 30, 2022, 12:49 PM IST

Updated : Jun 30, 2022, 1:52 PM IST

ಉದಯಪುರ್ ಹಿಂದೂ ವ್ಯಕ್ತಿಯ ಕೊಲೆ ಪ್ರಕರಣದ ತನಿಖೆಯನ್ನು ಎನ್​ಐಎ ವಹಿಸಿಕೊಂಡಿದೆ. ಘಟನೆಯ ಹಿಂದೆ ಪಾಕಿಸ್ತಾನ ಕೈವಾಡವಿರುವುದು ಬೆಳಕಿಗೆ ಬಂದಿದೆ. ಈ ಕುರಿತು ರೈತ ಮುಖಂಡ ರಾಕೇಶ್​ ಟಿಕಾಯತ್ ಪ್ರತಿಕ್ರಿಯಿಸಿ​ದ್ದಾರೆ.

Rakesh Taikath on Udaipur and Maharashtra

ಉಧಂಪುರ್(ಜಮ್ಮು ಕಾಶ್ಮೀರ): ಉದಯ್​ಪುರ​ದಲ್ಲಿ ಇತ್ತೀಚೆಗೆ ನಡೆದ ಹಿಂದೂ ಟೈಲರ್​ನ ಶಿರಚ್ಛೇದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಕಿಸಾನ್ ಯೂನಿಯನ್ ಮಾಜಿ ವಕ್ತಾರ ರಾಕೇಶ್ ಟಿಕಾಯತ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪ್ರತಿಪಕ್ಷದ ಆಡಳಿತವಿರುವ ರಾಜ್ಯಗಳಲ್ಲೇ ಇಂಥ ಪ್ರಕರಣಗಳು ಏಕೆ ಸಂಭವಿಸುತ್ತಿವೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ದ್ವೇಷದಿಂದ ಕೆಲವು ಅಹಿತಕರ ಘಟನೆಗಳು ನಡೆದರೂ ಅದರ ಹಿಂದೆ ಪಾಕಿಸ್ತಾನ ಕೈವಾಡವಿದೆ ಎಂದು ಬಿಜೆಪಿ ಹೇಳುತ್ತದೆ ಅಂತಾ ಟಿಕಾಯತ್ ಹರಿಹಾಯ್ದಿದ್ದಾರೆ.

ಬಿಜೆಪಿ ಸರ್ಕಾರವಿರದ ರಾಜ್ಯಗಳಲ್ಲಿ ಈ ಪ್ರಕರಣ ನಡೆದಿದೆ. ಪಂಜಾಬ್ ಅಥವಾ ರಾಜಸ್ಥಾನದಲ್ಲಿ ಇಂಥ ಘಟನೆಗಳು ನಡೆಯುತ್ತಿವೆ. ಯಾವುದೇ ಅಹಿತಕರ ಘಟನೆಗಳು ನಡೆದರೂ ಅದರ ಹಿಂದೆ ಪಾಕಿಸ್ತಾನ ಕೈವಾಡವಿದೆ ಎಂದು ಕೇಂದ್ರ ಸರ್ಕಾರ ಹೇಳುತ್ತೆ. ಭಾರತವು ಸಂವಿಧಾನ, ಕಾನೂನು ಮತ್ತು ಕಾಯ್ದೆಗಳನ್ನು ಹೊಂದಿದೆ. ಕೊಲೆ ಮಾಡಿದವರನ್ನು ಸೆಕ್ಷನ್ 302 ರಡಿ ಬಂಧಿಸಿ ಎಂದು ಮಾಧ್ಯಮಗಳೊಂದಿಗೆ ಮಾತನಾಡಿದ ರಾಕೇಶ್ ಟಿಕಾಯತ್ ಒತ್ತಾಯಿಸಿದರು.

ಓದಿ: ಉದಯ್​ಪುರ ಪ್ರಕರಣದ ಹಿಂದೆ ಅಂತಾರಾಷ್ಟ್ರೀಯ ಷಡ್ಯಂತ್ರ: ಸಿಎಂ ಬೊಮ್ಮಾಯಿ

ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು ಕುರಿತು ಮಾತನಾಡಿದ ಟಿಕಾಯತ್​, ಅಲ್ಲಿ ಬಿಜೆಪಿ ಎಲ್ಲವನ್ನೂ ಮಾಡುತ್ತಿದೆ. ಶಿವಸೇನೆಯೊಂದಿಗೆ ಬಿಜೆಪಿ ಮೈತ್ರಿ ಸರ್ಕಾರ ಇದ್ದಿದ್ದರೆ ಶಿವಸೇನೆಯವರು ತುಂಬಾ ಚೆನ್ನಾಗಿರುತ್ತಿದ್ದರು. ಈಗ ಶಿವಸೇನೆ ಬಿಜೆಪಿಯವರ ಜೊತೆ ಇಲ್ಲ. ಹೀಗಾಗಿ ಶಿವಸೇನೆಯನ್ನು ಎರಡು ಭಾಗಗಳಾಗಿ ಮಾಡಿದ್ದಾರೆ. ಪರಸ್ಪರ ಜಗಳದಲ್ಲಿ ಬಿಜೆಪಿ ವೋಟ್​ಗಳನ್ನು ಹುಡುಕುತ್ತದೆ.​ ಬಿಜೆಪಿಯವರು ಜಾತಿಯನ್ನು ನಂಬುತ್ತಾರೆ. ಹಿಡಿದಿಟ್ಟುಕೊಳ್ಳುವ ಪರಿಣತಿ ಹೊಂದಿದ್ದಾರೆ ಎಂದು ಆರೋಪಿಸಿದರು.

ಉದಯ್​ಪುರ ಹಿಂದೂ ವ್ಯಕ್ತಿಯ ಕೊಲೆ ಪ್ರಕರಣದ ತನಿಖೆಯನ್ನು ಎನ್​ಐಎ ವಹಿಸಿಕೊಂಡಿದೆ. ಘಟನೆಯ ಹಿಂದೆ ಪಾಕಿಸ್ತಾನ ಕೈವಾಡವಿರುವುದು ಬೆಳಕಿಗೆ ಬಂದಿದ್ದು, ಕೊಲೆಗಾರರು ಕರಾಚಿಗೆ ಭೇಟಿ ನೀಡಿ ದವಾತ್ ಎ ಇಸ್ಲಾಮಿ ಉಗ್ರಗಾಮಿ ಸಂಘಟನೆಯಿಂದ ತರಬೇತಿ ಪಡೆದಿದ್ದರು ಎಂಬುದು ತಿಳಿದುಬಂದಿದೆ.

Last Updated : Jun 30, 2022, 1:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.