ETV Bharat / bharat

ವ್ಯಾಪಾರದ ನಿಮಿತ್ತ ದಕ್ಷಿಣ ಆಫ್ರಿಕಾಕ್ಕೆ ತೆರಳಿದ್ದ ಉದ್ಯಮಿ ಯುವಕನ ಅಪಹರಣ.. - Rajkots Young Man Kidnap

ವ್ಯಾಪಾರದ ನಿಮಿತ್ತ ದಕ್ಷಿಣ ಆಫ್ರಿಕಾಕ್ಕೆ ತೆರಳಿದ್ದ ಉದ್ಯಮಿ ಯುವಕ ಅಪಹರಣ - 30 ಲಕ್ಷ ಪಡೆದು ಯುವಕನನ್ನು ಬಿಡುಗಡೆ ಮಾಡಿದ ಅಪಹರಣಕಾರರು.

Rajkots Young Man Kidnap In Africa But Police Help His Family And Leave Him
ವ್ಯಾಪಾರದ ನಿಮಿತ್ತ ದಕ್ಷಿಣ ಆಫ್ರಿಕಾಕ್ಕೆ ತೆರಳಿದ್ದ ಉದ್ಯಮಿ ಯುವಕನ ಅಪಹರಣ.
author img

By

Published : Feb 4, 2023, 10:44 PM IST

ರಾಜ್ ಕೋಟ್(ಗುಜರಾತ್​): ವ್ಯಾಪಾರದ ನಿಮಿತ್ತ ದಕ್ಷಿಣ ಆಫ್ರಿಕಾಕ್ಕೆ ತೆರಳಿದ್ದ ಉದ್ಯಮಿ ಯುವಕನೊಬ್ಬನನ್ನು ಅಪಹರಣ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಅಪಹರಣಕಾರರು ಉದ್ಯಮಿ ಯುವಕನ ಕುಟುಂಬದಿಂದ 30 ಲಕ್ಷ ಪಡೆದಿದ್ದರು. ಯುವಕನ ಅಪಹರಣದ ಕುರಿತು ವಿಷಯ ತಿಳಿದ ದಕ್ಷಿಣ ಆಫ್ರಿಕಾದ ಪೊಲೀಸರು ಅಪಹರಣಕಾರರನ್ನು ಬಂಧಿಸಿ ಉದ್ಯಮಿಯನ್ನು ಅಪಹರಣಕಾರರಿಂದ ಬಿಡುಗಡೆಗೊಳಿಸಿದ್ದಾರೆ.

ಉದ್ಯಮಿ ಯುವಕ ಗುಜರಾತ್‌ಗೆ ಸುರಕ್ಷಿತವಾಗಿ ಮರಳಿದ್ದಾರೆ. ಈಗ ಯುವಕನ ಕುಟುಂಬ ಸುಲಿಗೆ ಮಾಡಲಾದ ಹಣವನ್ನು ತಮಗೆ ಹಿಂದಿರುಗಿಸಬೇಕು ಎಂದು ಮನವಿ ಮಾಡಿದ್ದಾರೆ. ರಾಜ್ ಕೋಟ್​ನ ಯುವಕನೊಬ್ಬ ವ್ಯಾಪಾರಕ್ಕಾಗಿ ದಕ್ಷಿಣ ಆಫ್ರಿಕಾಕ್ಕೆ ತೆರಳಿದ್ದ. ಅಲ್ಲಿನ ವಿಮಾನ ನಿಲ್ದಾಣದಲ್ಲಿ ಬಂದಿಳಿದ ನಂತರ ಅಪಹರಣಕಾರರು ಆತನನ್ನು ಅಪಹರಿಸಿ ಬಿಡುಗಡೆ ಮಾಡಲು 1.5 ಕೋಟಿ ರೂ ನೀಡುವಂತೆ ಬೇಡಿಕೆ ಇಟ್ಟಿದ್ದರು, ನಂತರ ಯುವಕನನ್ನು 30 ಲಕ್ಷ ಕೊಟ್ಟರೆ ಬಿಡುಗಡೆ ಮಾಡಲು ಒಪ್ಪಿಕೊಂಡಿದ್ದರು. ಯುವಕನ ತಂದೆ ಅಪಹರಣಕಾರರಿಗೆ ಹಣವನ್ನು ನೀಡಿದ ನಂತರ ಅಪಹರಣಕಾರರು ಯುವಕನನ್ನು ಬಿಡುಗಡೆ ಮಾಡಿದರು ಎಂದು ಯುವಕನ ಕುಟುಂಬದವರು ಹೇಳಿದರು.

ಈ ಘಟನೆ ಕುರಿತು ಪ್ರತಿಕ್ರಿಯಿಸಿದ ಯುವಕ 'ನಾನು ಆಮದು ರಫ್ತು ವ್ಯವಹಾರ ಮಾಡುತ್ತೇನೆ. ಜಂಕ್ ಅನ್ನು ಆಮದು ಮಾಡಿಕೊಳ್ಳಲು ಅಲ್ಲಿಗೆ ಹೋಗಿದ್ದೆ. ಅಲ್ಲಿ ಭೇಟಿಯಾಗಬೇಕಾಗಿದ್ದವರು ಮೂಲತಃ ಪಾಕಿಸ್ತಾನಿಗಳು. ನಾನು ವಿಮಾನ ನಿಲ್ದಾಣದಲ್ಲಿ ಇಳಿದಾಗ, ನನ್ನನ್ನು ಕೆಲವು ಜನರು ಅಪಹರಿಸಿದರು. ನಂತರ ಬಿಡುಗಡೆಗೆ 1.5 ಕೋಟಿ ರೂ ಬೇಡಿಕೆ ಇಟ್ಟಿದ್ದರು, ಕೊನೆಗೆ 30 ಲಕ್ಷ ರೂ.ಗೆ ಒಪ್ಪಂದವಾಯಿತು. ನನ್ನ ತಂದೆ ನನಗೆ 30 ಲಕ್ಷ ನೀಡಿದರು ನಂತರ ಅವರು ನನ್ನನ್ನು ಬಿಡುಗಡೆಗೊಳಿಸಿದರು ಎಂದು ತಿಳಿಸಿದರು.

ಇದನ್ನೂ ಓದಿ:ಐಬಿ ನಿರ್ದೇಶಕರ ಮನೆಯಲ್ಲಿ ಸಿಆರ್​ಪಿಎಫ್​ ಸಿಬ್ಬಂದಿ ಆತ್ಮಹತ್ಯೆ

ಈ ವಿಷಯ ನನ್ನ ತಂದೆಗೆ ತಿಳಿದಾಗ ಭಾರತ ಸರ್ಕಾರ ಮತ್ತು ರಾಜ್‌ಕೋಟ್ ಪೊಲೀಸರನ್ನು ಸಂಪರ್ಕಿಸಿದರು ಎಂದು ಯುವಕ ಹೇಳಿದರು. ವಿಷಯ ತಿಳಿದ ರಾಜ್‌ಕೋಟ್ ಪೊಲೀಸರು ನಮಗೆ ಸಾಕಷ್ಟು ಸಹಾಯ ಮಾಡಿದ್ದಾರೆ. ಆದರೆ, ನನ್ನ ತಂದೆ ಕೊಟ್ಟಿದ್ದ 30 ಲಕ್ಷ ರೂಪಾಯಿ ವಾಪಸ್ ಸಿಕ್ಕಿಲ್ಲ. ಸರ್ಕಾರ ಮಧ್ಯಪ್ರವೇಶಿಸಿದರೆ 30 ಲಕ್ಷ ರೂಪಾಯಿ ವಾಪಸ್ ಬರಲಿದೆ ಎಂದು ಯುವಕನ ಕುಟುಂಬ ಸರ್ಕಾರಕ್ಕೆ ಮನವಿ ಮಾಡಿದೆ.

ಉದ್ಯಮಿಯ ತಂದೆ ಪ್ರಫುಲ್ಲಭಾಯಿ ಮಲ್ಲಿ ಮಾತನಾಡಿ, 'ನನ್ನ ಮಗ ವ್ಯಾಪಾರಕ್ಕೆ ಸಂಬಂಧಿಸಿದಂತೆ ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ಗೆ ಹೋಗಿದ್ದ. ವಿಮಾನ ನಿಲ್ದಾಣದಲ್ಲಿ ಇಳಿದಾಗ ಟ್ಯಾಕ್ಸಿ ಚಾಲಕರು ಆತನನ್ನು ಅಪಹರಿಸಿದ್ದಾರೆ. ಅಪಹರಣಕಾರರಿಗೆ 30 ಲಕ್ಷ ನೀಡಿದ ನಂತರ ಮಗನನ್ನು ಬಿಟ್ಟು ತೆರಳಿದ್ದಾರೆ ಎಂದು ಹೇಳಿದರು. ಪೊಲೀಸರು ಈ ಬಗ್ಗೆ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಬೇಕಾಗಿದೆ. ಕುಟುಂಬಸ್ಥರು ಒತ್ತಾಯ ಮಾಡಿದಂತೆ ಸರ್ಕಾರ ಇದಕ್ಕೆ ಸ್ಪಂದಿಸುತ್ತಾ ಕಾದು ನೋಡಬೇಕಿದೆ.

ಇದನ್ನೂ ಓದಿ:ಸೌದಿ ಅರೇಬಿಯಾದಲ್ಲಿ ಅಪಘಾತ: ಮಂಗಳೂರಿನ ಮೂವರು ಸಾವು

ಇದನ್ನು ಓದಿ: ಕರ್ನಾಟಕಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಬಂದ ವ್ಯಕ್ತಿ: ಉಗ್ರ ಎಂಬ ಶಂಕೆ ಮೇಲೆ ಅಮೃತಸರದಲ್ಲಿ ಬಂಧಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.