ETV Bharat / bharat

5 ವರ್ಷದ ಪುತ್ರಿ ಮೇಲೆ ತಂದೆಯಿಂದಲೇ ಬಲಾತ್ಕಾರ; ರಕ್ತಸ್ರಾವದಿಂದ ನರಳುತ್ತಿದ್ದ ಮಗಳ ರಕ್ಷಿಸಿದ ಅಮ್ಮ - ಮಗಳ ರಕ್ಷಿಸಿದ ಅಮ್ಮ

ಐದು ವರ್ಷದ ಮಗಳ ಮೇಲೆ ತಂದೆಯೋರ್ವ ಅತ್ಯಾಚಾರ ಎಸಗಿದ ಹೀನ ಕೃತ್ಯ ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯಲ್ಲಿ ನಡೆದಿದೆ.

RAJASTHAN: Father rapes 5 year old daughter in Jaisalmer
ರಾಜಸ್ಥಾನ: ಐದು ವರ್ಷದ ಪುತ್ರಿ ಮೇಲೆ ತಂದೆಯಿಂದಲೇ ಬಲತ್ಕಾರ
author img

By ETV Bharat Karnataka Team

Published : Oct 6, 2023, 9:16 PM IST

ಜೈಸಲ್ಮೇರ್ (ರಾಜಸ್ಥಾನ): ರಾಜಸ್ಥಾನದಲ್ಲಿ ನಾಗರಿಕ ಸಮಾಜ ತಲೆ ತಗ್ಗಿಸುವ ಘಟನೆ ವರದಿಯಾಗಿದೆ. ತಂದೆಯೇ ತನ್ನ ಐದು ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿದ್ದಾನೆ. ಇದರಿಂದ ಸಂತ್ರಸ್ತೆ ತೀವ್ರ ರಕ್ತಸ್ರಾವವಾಗಿ ಚಿಂತಾಜನಕ ಸ್ಥಿತಿಯಲ್ಲಿದ್ದು, ಆಕೆಯ ತಾಯಿ ಮಗಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಾಮುಕ ತಂದೆಯನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ತನಿಖೆ ಆರಂಭಿಸಿದ್ದಾರೆ.

ಜೈಸಲ್ಮೇರ್ ಜಿಲ್ಲೆಯ ಶಂಕರ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಬುಧವಾರ ದುಷ್ಕೃತ್ಯ ಬೆಳಕಿಗೆ ಬಂದಿದೆ. ಮನೆಯಲ್ಲಿ ಮಗಳು ಒಬ್ಬಳೇ ಇರುವುದನ್ನು ಕಂಡು ತಂದೆ ಆಕೆಯ ಮೇಲೆ ಬಲಾತ್ಕಾರ ಮಾಡಿದ್ದಾನೆ. ಶುಕ್ರವಾರ ಆರೋಪಿ ವಿರುದ್ಧ ಸಂತ್ರಸ್ತೆಯ ತಾಯಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಕುರಿತು ಠಾಣಾಧಿಕಾರಿ ಮನಕ್ರಮ್ ಬಿಷ್ಣೋಯಿ ಮಾಹಿತಿ ನೀಡಿ, ''ಸಂತ್ರಸ್ತೆಯ ತಾಯಿ ನೀಡಿದ ದೂರಿನ ಆಧಾರದ ಮೇಲೆ ಆರೋಪಿ ತಂದೆಯ ಬಂಧಿಸಲಾಗಿದೆ'' ಎಂದು ತಿಳಿಸಿದರು.

ಮುಂದುವರೆದು ಮಾತನಾಡಿದ ಅವರು, ''ಬುಧವಾರ ಇಬ್ಬರು ಪುಟ್ಟ ಹೆಣ್ಣು ಮಕ್ಕಳು ತಂದೆಯೊಂದಿಗೆ ಮನೆಯಲ್ಲಿದ್ದರು. ಇವರ ತಾಯಿ ಹೊಲದ ಕೆಲಸಕ್ಕೆ ಹೋಗಿದ್ದರು. ಈ ವೇಳೆ, ಐದು ವರ್ಷದ ಮಗಳ ಮೇಲೆ ಆರೋಪಿ ಅತ್ಯಾಚಾರ ಎಸಗಿದ್ದಾನೆ. ಆಗ ನಾಲ್ಕು ವರ್ಷದ ಮತ್ತೋರ್ವ ಬಾಲಕಿ ಹೊಲಕ್ಕೆ ಓಡಿ ಹೋಗಿ ತನ್ನ ಸಹೋದರಿಯನ್ನು ಅಪ್ಪ ಥಳಿಸುತ್ತಿದ್ದಾನೆ ಎಂದು ಅಮ್ಮನಿಗೆ ಮಾಹಿತಿ ನೀಡಿದ್ದಾಳೆ'' ಎಂದು ವಿವರಿಸಿದರು.

''ಚಿಕ್ಕ ಮಗಳ ಮಾತು ಕೇಳಿ ಹೊಲದಿಂದ ಮನೆಗೆ ತಾಯಿ ದೌಡಾಯಿಸಿದ್ದಾರೆ. ಅಷ್ಟರಲ್ಲೇ, ಹಿರಿಯ ಮಗಳು ರಕ್ತಸ್ರಾವದಿಂದ ಕಣ್ಣೀರು ಸುರಿಸುತ್ತಿರುವುದನ್ನು ಗಮನಿಸಿದ್ದಾಳೆ. ಇದಾದ ಬಳಿಕ ಆಕೆ ಶಂಕರ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಸದ್ಯ ಸಂತ್ರಸ್ತೆಯ ಸ್ಥಿತಿ ಗಂಭೀರವಾಗಿದೆ. ಆದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಬಾರ್ಮರ್‌ಗೆ ರವಾನಿಸಿದ್ದು, ಅಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ'' ಎಂದು ಪೊಲೀಸ್​ ಅಧಿಕಾರಿ ಮಾಹಿತಿ ನೀಡಿದರು.

ಉತ್ತರ ಪ್ರದೇಶದಲ್ಲಿ 60 ವರ್ಷದ ಆರೋಪಿ ಆತ್ಮಹತ್ಯೆ: ಮತ್ತೊಂದೆಡೆ, ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಯತ್ನ ಪ್ರಕರಣದ ಆರೋಪಿಯೋರ್ವನ ಶವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡು ಸ್ಥಿತಿಯಲ್ಲಿ ಪತ್ತೆಯಾಗಿದೆ. ಘಟನೆ ಶುಕ್ರವಾರ ನಡೆದಿದೆ. ಮೃತನನ್ನು ಶೇರ್ ಮೊಹಮ್ಮದ್ ಎಂದು ಗುರುತಿಸಲಾಗಿದೆ.

ಇಲ್ಲಿನ ಫರೀದ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದಲ್ಲಿ ಮನೆಯ ಹೊರಗೆ ಆಟವಾಡುತ್ತಿದ್ದ ಬಾಲಕಿಯ ಮೇಲೆ ಅತ್ಯಾಚಾರ ಯತ್ನಿಸಿದ ಆರೋಪದಡಿ ಈ ಆರೋಪಿಗಾಗಿ ಪೊಲೀಸರು ಶೋಧ ನಡೆಸಲಾಗುತ್ತಿತ್ತು. ಆದರೆ, ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಶವ ದೊರೆತಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಇದೊಂದು ಆತ್ಮಹತ್ಯೆ ಎಂದು ಗೊತ್ತಾಗಿದೆ. ಮರಣೋತ್ತರ ಪರೀಕ್ಷೆಯ ವರದಿ ನಂತರವೇ ನಿಖರ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ರಕ್ತಸ್ರಾವವಾಗಿ ಬೀದಿ ಅಲೆಯುತ್ತಿದ್ದರೂ ಅತ್ಯಾಚಾರಕ್ಕೊಳಗಾದ ಬಾಲಕಿಗೆ ನೆರವಾಗದ ಜನರು: ಮರೆಯಾದ ಮಾನವೀಯತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.