ಶಾಮ್ಲಿ(ಉತ್ತರ ಪ್ರದೇಶ): ವಿವಿಧ ಉದ್ದೇಶಗಳಿಗೋಸ್ಕರ ಕನ್ವರ್ ಯಾತ್ರ ಕೈಗೊಳ್ಳುವುದು ಸರ್ವೆ ಸಾಮಾನ್ಯ. ಆದರೆ, ರಾಜಸ್ಥಾನದ ಮಹಿಳೆಯೊಬ್ಬರು ವಿಶೇಷ ಕಾರಣಕ್ಕಾಗಿ ಯಾತ್ರೆ ಕೈಗೊಂಡಿದ್ದಾರೆ. ಬಾಬಾ ಭೋಲೆನಾಥ್ನ ಸನ್ನಿಧಿಗೆ ನಡೆದುಕೊಂಡು ಹೋಗುತ್ತಿರುವ 56 ವರ್ಷದ ಮಹಿಳೆ ಲಾಲವತಿ ಈಗಾಗಲೇ 120 ಕಿಲೋ ಮೀಟರ್ ಕ್ರಮಿಸಿ ಉತ್ತರ ಪ್ರದೇಶದ ಶಾಮ್ಲಿ ತಲುಪಿದ್ದಾರೆ.
ಹುಟ್ಟಿರುವ ಎಂಟು ಮಕ್ಕಳನ್ನ ಕಳೆದುಕೊಂಡಿರುವ ರಾಜಸ್ಥಾನದ ಮಹಿಳೆ ಲಾಲವತಿ ಇದೀಗ ಗಂಡನ ಕುಡಿತದ ಚಟ ಬಿಡಿಸುವ ಉದ್ದೇಶದಿಂದ ಕನ್ವರ್ ಯಾತ್ರೆ ಆರಂಭಿಸಿದ್ದಾರೆ. ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಬಸಾಯಿ ಗ್ರಾಮದಿಂದ ಏಕಾಂಗಿಯಾಗಿ ಮಹಿಳೆ ಪ್ರಯಾಣ ಬೆಳೆಸಿದ್ದಾರೆ. ಈಗಾಗಲೇ ಉತ್ತರ ಪ್ರದೇಶದ ಶಾಮ್ಲಿಗೆ ಆಗಮಿಸಿರುವ ಅವರು, ಇನ್ನೂ 242 ಕಿಲೀ ಮೀಟರ್ ಕ್ರಮಿಸುವುದು ಬಾಕಿ ಇದೆ.
ಇದನ್ನೂ ಓದಿರಿ: ಹರಿಯಾಣದಲ್ಲೊಬ್ಬ ದಶರಥ್ ಮಾಂಜಿ: 50 ವರ್ಷ ಬೆಟ್ಟ ಅಗೆದು ನೀರಿನ ಕೊಳ ನಿರ್ಮಿಸಿದ 90ರ ಕಲ್ಲುರಾಮ್!
ಭಾರತೀಯ ಸೇನೆಯಲ್ಲಿದ್ದ ವ್ಯಕ್ತಿಯೊಂದಿಗೆ ಈ ಹಿಂದೆ ಲಾಲವತಿ ದೇವಿ ಮದುವೆ ಮಾಡಿಕೊಂಡಿದ್ದರು. ಅವರಿಗೆ ಹುಟ್ಟಿರುವ ಎಂಟು ಮಕ್ಕಳು ಕಾಯಿಲೆಯಿಂದ ಸಾವನ್ನಪ್ಪಿವೆ. ಹೀಗಾಗಿ, ಗಂಡ ಮಾದಕ ವಸ್ತುಗಳ ಚಟಕ್ಕೆ ಬಿದ್ದಿದ್ದಾರೆ. ಗಂಡನ ಚಟ ಹೋಗಲಾಡಿಸಲು ಈಗಾಗಲೇ ಸಾಕಷ್ಟು ಪ್ರಯತ್ನ ಪಟ್ಟಿರುವ ಮಹಿಳೆ, ಅದರಲ್ಲಿ ಯಶಸ್ಸು ಸಾಧಿಸಿಲ್ಲ. ಆದರೆ, ಕನ್ವರ್ ಯಾತ್ರೆ ಬಗ್ಗೆ ತಿಳಿದುಕೊಂಡಿರುವ ಮಹಿಳೆ, ಏಕಾಂಗಿಯಾಗಿ ನಡೆದು ಹೋಗುತ್ತಿದ್ದಾರೆ. ಲಾಲವತಿ ದೇವಿ ಅವರಿಗೆ ಹರಿಯಾಣದಿಂದ 65 ವರ್ಷದ ಮಹಾವೀರ್ ಸಿಂಗ್ ಸಾಥ್ ನೀಡಿದ್ದಾರೆ.