ETV Bharat / bharat

ನಾ, ನಾ.. ನಾನವನಲ್ಲ.. ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣ.. 6 ತಿಂಗಳ ನಂತ್ರ ಮೌನ ಮುರಿದ ರಾಜ್ ಕುಂದ್ರಾ.. - ಆರು ತಿಂಗಳ ನಂತ್ರ ಮೌನ ಮುರಿದ ರಾಜ್ ಕುಂದ್ರಾ

ಪ್ರತಿಯೊಬ್ಬ ವ್ಯಕ್ತಿಗೂ ಘನತೆಯಿಂದ ಬದುಕುವ ಹಕ್ಕಿದೆ ಎಂದು ನಾನು ನಂಬುತ್ತೇನೆ ಮತ್ತು ನಾನು ಅದನ್ನೇ ಎಲ್ಲರಿಗೂ ವಿನಂತಿಸುತ್ತೇನೆ. ಈ ಹೇಳಿಕೆಯನ್ನು ಓದಲು ಸಮಯ ತೆಗೆದುಕೊಂಡಿದ್ದಕ್ಕಾಗಿ ಮತ್ತು ಇಂದಿನಿಂದ ನನ್ನ ಗೌಪ್ಯತೆಯನ್ನು ಗೌರವಿಸಿದ್ದಕ್ಕಾಗಿ ಧನ್ಯವಾದಗಳು ಎಂದು ಬರೆದಿದ್ದಾರೆ..

ರಾಜ್ ಕುಂದ್ರಾ
ರಾಜ್ ಕುಂದ್ರಾ
author img

By

Published : Dec 20, 2021, 5:04 PM IST

ಹೈದರಾಬಾದ್ : ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ಹಾಗೂ ಉದ್ಯಮಿ ರಾಜ್ ಕುಂದ್ರಾ ಈಗ ಮೌನ ಮುರಿದಿದ್ದಾರೆ. ಈ ಪ್ರಕರಣದಲ್ಲಿ ಆರು ತಿಂಗಳ ನಂತರ ಇದೇ ಮೊದಲ ಬಾರಿಗೆ ಅವರು ಮಾತನಾಡಿದ್ದಾರೆ. ಇನ್ನು ಕುಂದ್ರಾ ಅವರು ಈ ಪ್ರಕರಣದಲ್ಲಿ ಸುಮಾರು ಎರಡು ತಿಂಗಳ ಶಿಕ್ಷೆಯನ್ನು ಸಹ ಅನುಭವಿಸಿದ್ದಾರೆ.

ಅವರು ಬರೆದ ಮನವಿ ಇಂತಿದೆ..

ತಪ್ಪುದಾರಿಗೆಳೆಯುವ ಮತ್ತು ಬೇಜವಾಬ್ದಾರಿ ಹೇಳಿಕೆಗಳು ಹಾಗೆ ಅನೇಕ ಲೇಖನಗಳಲ್ಲಿ ನನ್ನ ಮೌನವನ್ನು ದೌರ್ಬಲ್ಯವೆಂದು ಪರಿಗಣಿಸಲಾಗುತ್ತಿದೆ ಎಂದು ನಾನು ಭಾವಿಸಿದ್ದೇನೆ. ನನ್ನ ಜೀವನದಲ್ಲಿ ನಾನು ಆ ರೀತಿಯ ಚಿತ್ರ ನಿರ್ಮಾಣ ಮತ್ತು ವಿತರಣೆಯಲ್ಲಿ ತೊಡಗಿಸಿಕೊಂಡಿಲ್ಲ ಎಂದು ಹೇಳಲು ಬಯಸುತ್ತೇನೆ. ಈ ಸಂಪೂರ್ಣ ಘಟನೆಯು ನನ್ನನ್ನು ಸಿಲುಕಿಸಲು ಮಾಡಿದ ತಂತ್ರವಲ್ಲದೇ ಬೇರೇನೂ ಅಲ್ಲ. ಈ ವಿಷಯವು ನ್ಯಾಯಾಲಯದಲ್ಲಿದೆ. ಆದ್ದರಿಂದ ನಾನು ಹೆಚ್ಚು ವಿವರಿಸಲು ಸಾಧ್ಯವಿಲ್ಲ.

ನಾನು ಈ ಬಗ್ಗೆ ವಿಚಾರಣೆಯನ್ನು ಎದುರಿಸಲು ಸಿದ್ಧನಿದ್ದೇನೆ. ನ್ಯಾಯಾಂಗದಲ್ಲಿ ಸಂಪೂರ್ಣ ನಂಬಿಕೆ ಹೊಂದಿದ್ದೇನೆ. ಅಲ್ಲಿ ಸತ್ಯವು ಮೇಲುಗೈ ಸಾಧಿಸುತ್ತದೆ. ಆದಾಗ್ಯೂ, ದುರದೃಷ್ಟವಶಾತ್​​ ಮಾಧ್ಯಮಗಳು ಮತ್ತು ನನ್ನ ಕುಟುಂಬದಿಂದ ನನ್ನನ್ನು ಈಗಾಗಲೇ 'ಅಪರಾಧಿ' ಎಂದು ಘೋಷಿಸಲಾಗಿದೆ. ಪರಿಣಾಮ ನಾನು ನಿರಂತರ ನೋವನ್ನು ಅನುಭವಿಸುತ್ತಿದ್ದೇನೆ.

ಇದನ್ನೂ ಓದಿ: ಸಮರಕಲೆಯಲ್ಲಿ ಗೋಪಿನಾಥಂ ಯುವಕನ ಸಾಧನೆ : ದೊಣ್ಣೆವರಸೆಯ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆ

ಟ್ರೋಲಿಂಗ್/ನಕಾರಾತ್ಮಕತೆಯಿಂದ ಜನರ ದ್ವೇಷ ಹೆಚ್ಚುತ್ತಿದೆ. ನಾನು ಅವಮಾನದಿಂದ ನನ್ನ ಮುಖವನ್ನು ಮರೆ ಮಾಚಿಕೊಳ್ಳುವುದಿಲ್ಲ. ಆದರೆ, ನಿರಂತರವಾಗಿ ಮಾಧ್ಯಮ ಪ್ರಯೋಗದಿಂದ ನನ್ನ ಗೌಪ್ಯತೆಗೆ ಧಕ್ಕೆ ತರುವುದು ನನಗೆ ಇಷ್ಟವಿಲ್ಲ. ನನ್ನ ಆದ್ಯತೆಯು ಯಾವಾಗಲೂ ನನ್ನ ಕುಟುಂಬವಾಗಿದೆ. ಈ ಸಮಯದಲ್ಲಿ ಬೇರೇನೂ ಮುಖ್ಯವಲ್ಲ.

ಪ್ರತಿಯೊಬ್ಬ ವ್ಯಕ್ತಿಗೂ ಘನತೆಯಿಂದ ಬದುಕುವ ಹಕ್ಕಿದೆ ಎಂದು ನಾನು ನಂಬುತ್ತೇನೆ ಮತ್ತು ನಾನು ಅದನ್ನೇ ಎಲ್ಲರಿಗೂ ವಿನಂತಿಸುತ್ತೇನೆ. ಈ ಹೇಳಿಕೆಯನ್ನು ಓದಲು ಸಮಯ ತೆಗೆದುಕೊಂಡಿದ್ದಕ್ಕಾಗಿ ಮತ್ತು ಇಂದಿನಿಂದ ನನ್ನ ಗೌಪ್ಯತೆಯನ್ನು ಗೌರವಿಸಿದ್ದಕ್ಕಾಗಿ ಧನ್ಯವಾದಗಳು ಎಂದು ಬರೆದಿದ್ದಾರೆ.

ಇತ್ತೀಚೆಗಷ್ಟೇ ನ್ಯಾಯಾಲಯ ರಾಜ್ ಕುಂದ್ರಾ ಬಂಧನಕ್ಕೆ ನಾಲ್ಕು ವಾರಗಳ ತಡೆ ನೀಡಿತ್ತು. ಇದರೊಂದಿಗೆ ಮಹಾರಾಷ್ಟ್ರ ಸರ್ಕಾರಕ್ಕೂ ನೋಟಿಸ್ ಜಾರಿ ಮಾಡಲಾಗಿತ್ತು. ಸದ್ಯ ಈ ಪ್ರಕರಣದಲ್ಲಿ ರಾಜ್ ಜಾಮೀನಿನ ಮೇಲೆ ಹೊರಗಿದ್ದಾರೆ. ಹಾಗೆ ಈ ವಿಷಯದಲ್ಲಿ ಮಧ್ಯಪ್ರವೇಶಿಸಬೇಡಿ ಮತ್ತು ತಮ್ಮ ಖಾಸಗಿತನವನ್ನು ಗೌರವಿಸುವಂತೆ ಮಾಧ್ಯಮಗಳಿಗೆ ಮನವಿ ಮಾಡಿದ್ದಾರೆ.

ಈ ವರ್ಷ ಜುಲೈ 19ರಂದು ಮುಂಬೈ ಪೊಲೀಸರು ಪೋರ್ನ್ ಚಿತ್ರಗಳನ್ನು ನಿರ್ಮಿಸಿದ್ದಾರೆ ಎಂಬ ಆರೋಪದಲ್ಲಿ ರಾಜ್ ಕುಂದ್ರಾ ಅವರನ್ನು ಬಂಧಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.