ಉತ್ತರಪ್ರದೇಶ : ನಿನ್ನೆ ರಾತ್ರಿ ಜೋರಾಗಿ ಬೀಸಿದ ಗಾಳಿ ಹಾಗೂ ಮಳೆಯ ಕಾರಣ ಟಿಕ್ರಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಗುಡಾರಗಳು ಕಿತ್ತು ಚೆಲ್ಲಾಪಿಲ್ಲಿಯಾಗಿವೆ.
ಗುಡಾರಗಳಲ್ಲಿದ್ದ ಬಟ್ಟೆ, ಆಹಾರ ಪದಾರ್ಥಗಳೆಲ್ಲಾ ಮಳೆಗೆ ಒದ್ದೆಯಾಗಿವೆ. ಆದರೂ ರೈತರು ಯಾವುದೇ ರೀತಿಯ ಹವಾಮಾನ ಬದಲಾವಣೆಯನ್ನು ಎದುರಿಸಲು ಸಂಪೂರ್ಣ ಸಿದ್ಧವಾಗಿರೋದಾಗಿ ತಮ್ಮ ಗಟ್ಟಿತನ ಪ್ರದರ್ಶಿಸಿದ್ದಾರೆ.
ನಮ್ಮ ಡೇರೆಗಳಿಗೆ ಹಾನಿಯಾಗಿರಬಹುದು. ಆದರೆ, ಅದು ತಮ್ಮ ಉತ್ಸಾಹದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ರೈತರು ಹೇಳಿದರು.