ನವದೆಹಲಿ: ಕೋವಿಡ್ ವ್ಯಾಕ್ಸಿನೇಷನ್ ಕಾರ್ಯಕ್ರಮದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದ ಹಿನ್ನೆಲೆ ರಾಹುಲ್ ಗಾಂಧಿಯವರ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.
ಬಳಸಿದ ಭಾಷೆಯ ಶೈಲಿ ಹಾಗೆ ಜನರನ್ನು ಭಯಬೀಳುವಂತ ಹೇಳಿಕೆ ನೀಡಿರುವ ಅವರನ್ನು ಗಮನಿಸಿದರೆ ಇದರ ಹಿಂದೆ ಪಕ್ಕಾ ಟೂಕ್ಕಿಟ್ ಕಾಂಗ್ರೆಸ್ನಿಂದಲೇ ಆಗಿರುವುದು ಎಂದು ಆರೋಪ ಮಾಡಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿಯ ಹಿರಿಯ ಮುಖಂಡ ಮತ್ತು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, ಆರೋಗ್ಯ ಸಚಿವಾಲಯದ ಇತ್ತೀಚಿನ ಹೇಳಿಕೆಗಳನ್ನು ಉಲ್ಲೇಖಿಸಿ ಭಾರತದಲ್ಲಿ ಇನಾಕ್ಯುಲೇಷನ್ ಕಾರ್ಯವನ್ನು ಈ ವರ್ಷದ ಡಿಸೆಂಬರ್ ವೇಳೆಗೆ ಪೂರ್ಣಗೊಳಿಸಲಾಗುವುದು ಎಂದು ಹೇಳಿದ್ದಾರೆ.
ಡಿಸೆಂಬರ್ ವೇಳೆಗೆ 216 ಕೋಟಿ ಡೋಸ್‌ಗಳನ್ನು ಉತ್ಪಾದಿಸುವ ಬಗ್ಗೆ ಮತ್ತು 108 ಕೋಟಿ ಜನರಿಗೆ ಹೇಗೆ ಲಸಿಕೆ ನೀಡಲಾಗುವುದು ಎಂಬುದರ ಕುರಿತು ಸಚಿವಾಲಯ ಮಾರ್ಗಸೂಚಿ ನೀಡಿದೆ ಎಂದು ಮಾಹಿತಿ ನೀಡಿದರು.
ಇನ್ನು ಕೊರೊನಾ ನಿಗ್ರಹಿಸಲು ಮೋದಿ ಕೆಲಸ ಮಾಡುತ್ತಿರುವ ಸಮಯದಲ್ಲಿ ರಾಹುಲ್ ಅವರು ಪ್ರಧಾನಮಂತ್ರಿಯವರಿಗೆ 'ನೌಟಂಕಿ' ಎಂಬ ಪದ ಬಳಕೆ ಮಾಡಿರುವುದು ಟೂಲ್‌ಕಿಟ್‌ನ ಭಾಗವಾಗಿದೆ ಎಂದು ಸಚಿವರು ಆರೋಪಿಸಿದರು.
ಕಾಂಗ್ರೆಸ್ ಇದರ ಹಿಂದೆ ಇದೆ ಎಂದು ಬಿಜೆಪಿ ಹೇಳಿಕೊಂಡಿದೆಯಾದರೂ ಈ ಆರೋಪವನ್ನು ವಿರೋಧ ಪಕ್ಷವು ತಿರಸ್ಕರಿಸಿದೆ. ಅದರ ಬದಲಾಗಿ ಬಿಜೆಪಿಯನ್ನೇ ದೂಷಿಸಿದೆ ಮತ್ತು ಈ ಬಗ್ಗೆ ಪೊಲೀಸ್ ತನಿಖೆಗೆ ಕೋರಿದೆ.
ಈಗಾಗಲೇ ಇದು ದೃಢಕರಿಸಲ್ಪಟ್ಟಿದೆ. ಯಾವುದೇ ಪುರಾವೆಗಳ ಅಗತ್ಯವಿಲ್ಲ. ಟೂಲ್ಕಿಟ್ ಅನ್ನು ನೀವು ತಯಾರಿಸಿದ್ದೀರಿ ಎಂಬುದು ಸ್ಪಷ್ಟವಾಗಿದೆ. ನೀವು ಯಾವ ರೀತಿಯ ಭಾಷೆಯನ್ನು ಬಳಸಿದ್ದೀರಿ ಮತ್ತು ಜನರಲ್ಲಿ ಗೊಂದಲ ಮತ್ತು ಭಯವನ್ನು ಉಂಟುಮಾಡಲು ನೀವು ಪ್ರಯತ್ನಿಸಿದ ರೀತಿಯೇ ಟೂಲ್‌ಕಿಟ್‌ನ ಒಂದು ಭಾಗವಾಗಿದೆ ಎಂದು ಜಾವಡೇಕರ್ ಹೇಳಿದ್ದಾರೆ.
ಗಾಂಧಿ ಹೇಳಿಕೆ ದೇಶ ಮತ್ತು ಜನರಿಗೆ ಮಾಡಿದ ಅವಮಾನ ಎಂದು ಅರೋಪಿಸಿದ ಅವರು, ಇಲ್ಲಿಯವರೆಗೆ 20 ಕೋಟಿ ಡೋಸ್‌ಗಳನ್ನು ನೀಡಲಾಗುತ್ತಿದ್ದು, ಭಾರತವು ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದೆ. ವ್ಯಾಕ್ಸಿನೇಷನ್ ಆಗಸ್ಟ್‌ನಿಂದ ದೊಡ್ಡ ಏರಿಕೆ ಕಾಣಲಿದೆ ಎಂದ ಅವರು ದೇಶದ ಇನಾಕ್ಯುಲೇಷನ್ ಕಾರ್ಯಕ್ರಮದ ನಿಧಾನಗತಿಯ ಬಗ್ಗೆ ಕಾಂಗ್ರೆಸ್, ರಾಹುಲ್ ಗಾಂಧಿ ಟೀಕೆಗಳನ್ನು ಖಂಡಿಸಿದರು.