ETV Bharat / bharat

ಕೇರಳದಲ್ಲಿ ವಿಧಾನಸಭಾ ಚುನಾವಣೆ: ಸ್ಟಾರ್​ ಪ್ರಚಾರಕರಾಗಿ ರಾಹುಲ್, ಪ್ರಿಯಾಂಕಾ - Rahul, Priyanka to lead poll campaign in Kerala

ಕೇರಳದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ರಾಹುಲ್​ ಮತ್ತು ಪ್ರಿಯಾಂಕ ಗಾಂಧಿ ಅವರನ್ನು ಸ್ಟಾರ್​ ಪ್ರಚಾರಕರನ್ನಾಗಿ ಮಾಡಲು ಕಾಂಗ್ರೆಸ್​ ನಿರ್ಧರಿಸಿದೆ. ಹಂಗಾಮಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ರಾಜ್ಯದಲ್ಲಿ ಪ್ರಚಾರ ಮಾಡುವುದು ಅಸಂಭವವಾಗಿರುವುದರಿಂದ, ಪ್ರಿಯಾಂಕಾ ಅವರು ಚುನಾವಣಾ ಪ್ರಚಾರಕ್ಕೆ ಆಗಮಿಸಲಿದ್ದಾರೆ.

Rahul, Priyanka to lead poll campaign in Kerala
ಸ್ಟಾರ್​ ಪ್ರಚಾರಕರಾಗಿ ರಾಹುಲ್, ಪ್ರಿಯಾಂಕಾ
author img

By

Published : Feb 9, 2021, 3:16 PM IST

ತಿರುವನಂತಪುರಂ: ಕೇರಳದಲ್ಲಿ ಏಪ್ರಿಲ್​- ಮೇ ತಿಂಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ರಾಹುಲ್​ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಸ್ಟಾರ್​ ಪ್ರಚಾರಕರನ್ನಾಗಿ ಮಾಡಲು ಕಾಂಗ್ರೆಸ್​ ನೇತೃತ್ವದ ಪ್ರತಿಪಕ್ಷಗಳು ನಿರ್ಧರಿಸಿವೆ.

ಪಕ್ಷದ ಹೈಕಮಾಂಡ್ ಕೇರಳ ವಿಧಾನಸಭಾ ಚುನಾವಣೆಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಲಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡರು ಹೇಳಿದ್ದಾರೆ.

ಓದಿ: ತೆಲಂಗಾಣ ರಾಜಕೀಯಕ್ಕೆ ಆಂಧ್ರ ಸಿಎಂ ಸಹೋದರಿ ಹೆಜ್ಜೆ..?

"ಉನ್ನತ ನಾಯಕರಿಬ್ಬರೂ ಕೇರಳದಲ್ಲಿ ಪ್ರಚಾರ ಮಾಡಲು ಒಪ್ಪಿಕೊಂಡಿದ್ದಾರೆ. ಅದರ ಮೊದಲ ಹೆಜ್ಜೆಯಾಗಿ ರಾಜ್ಯ ರಾಜಧಾನಿಗೆ ರಾಹುಲ್ ಬರಲಿದ್ದಾರೆ. ಈ ತಿಂಗಳ ಕೊನೆಯಲ್ಲಿ ರಾಹುಲ್​ ಗಾಂಧಿ ರಾಜ್ಯವ್ಯಾಪಿ ಪ್ರಚಾರ ನಡೆಸಲಿದ್ದು, ಇದರ ನೇತೃತ್ವವನ್ನು ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿಥಾಲಾ ವಹಿಸಲಿದ್ದಾರೆ. ರಾಹುಲ್ ಕೆಲವು ಪ್ರಮುಖ ಘೋಷಣೆಗಳನ್ನು ಮಾಡುವ ನಿರೀಕ್ಷೆಯಿದೆ "ಎಂದು ಕಾಂಗ್ರೆಸ್ ಉನ್ನತ ಮುಖಂಡರು ಹೇಳಿದ್ದಾರೆ.

ಹಂಗಾಮಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ರಾಜ್ಯದಲ್ಲಿ ಪ್ರಚಾರ ಮಾಡಲು ಅಸಂಭವವಾಗಿರುವುದರಿಂದ, ಪ್ರಿಯಾಂಕಾ ಅವರು ಚುನಾವಣಾ ಪ್ರಚಾರದ ಭಾಗವಾಗಿ ರಾಜ್ಯಕ್ಕೆ ಆಗಮಿಸುವ ನಿರೀಕ್ಷೆಯಿದೆ ಮತ್ತು ರಾಜ್ಯಾದ್ಯಂತ ಪ್ರಯಾಣಿಸಲಿದ್ದಾರೆ ಎಂದು ಕಾಂಗ್ರೆಸ್​ ನಾಯಕರು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.