ವಯನಾಡ್ (ಕೇರಳ): ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ಕಚೇರಿಯ ಮೇಲೆ ಇತ್ತೀಚೆಗೆ ಎಸ್‌ಎಫ್‌ಐ ಕಾರ್ಯಕರ್ತರು ದಾಳಿ ಮಾಡಿದ್ದು, ಮಹಾತ್ಮ ಗಾಂಧಿ ಪೋಟೋಗೆ ಹಾನಿ ಉಂಟಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಅವರ ಆಪ್ತ ಸಹಾಯಕ ಸೇರಿದಂತೆ ನಾಲ್ವರು ಕಾಂಗ್ರೆಸ್ ಕಾರ್ಯಕರ್ತರನ್ನು ಕಲ್ಪೆಟ್ಟ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಜುಲೈ 24ರಂದು ವಯನಾಡ್ನಲ್ಲಿರುವ ರಾಹುಲ್ ಗಾಂಧಿ ಕಚೇರಿಗೆ ನುಗ್ಗಿದ್ದ ಎಸ್‌ಎಫ್‌ಐ ಕಾರ್ಯಕರ್ತರು ದಾಂಧಲೆ ನಡೆಸಿದ್ದರು. ಈ ವೇಳೆ ಕಚೇರಿಯೊಳಗಿನ ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದಲ್ಲದೇ, ಎಸ್‌ಎಫ್‌ಐ ಧ್ವಜಗಳನ್ನೂ ಹಾರಿಸಿದ್ದರು.
-
Kerala | 4 Congress workers incl MP Rahul Gandhi's staff arrested for vandalizing a picture of Mahatma Gandhi in his Wayanand office: Kalpetta police
— ANI (@ANI) August 19, 2022 " class="align-text-top noRightClick twitterSection" data="
Congress had earlier alleged that it was SFI workers who vandalized the picture in Congress MP Rahul Gandhi's office in Wayanad https://t.co/gN9R6GvkUs
">Kerala | 4 Congress workers incl MP Rahul Gandhi's staff arrested for vandalizing a picture of Mahatma Gandhi in his Wayanand office: Kalpetta police
— ANI (@ANI) August 19, 2022
Congress had earlier alleged that it was SFI workers who vandalized the picture in Congress MP Rahul Gandhi's office in Wayanad https://t.co/gN9R6GvkUsKerala | 4 Congress workers incl MP Rahul Gandhi's staff arrested for vandalizing a picture of Mahatma Gandhi in his Wayanand office: Kalpetta police
— ANI (@ANI) August 19, 2022
Congress had earlier alleged that it was SFI workers who vandalized the picture in Congress MP Rahul Gandhi's office in Wayanad https://t.co/gN9R6GvkUs
ಸುಳ್ಳು ಪ್ರಚಾರ ನಡೆಸಿದ್ದ ಕಾಂಗ್ರೆಸ್: ಇದರ ಲಾಭ ಪಡೆದುಕೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರು, ಎಸ್‌ಎಫ್‌ಐ ಕಾರ್ಯಕರ್ತರು ಗಾಂಧೀಜಿಯ ಭಾವಚಿತ್ರ ಧ್ವಂಸ ಮಾಡಿದ್ದಾರೆಂದು ವ್ಯಾಪಕ ಪ್ರಚಾರ ನಡೆಸಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಎಸ್‌ಎಫ್‌ಐ, ಕಾಂಗ್ರೆಸ್ ಕಾರ್ಯಕರ್ತರೇ ರಾಷ್ಟ್ರಪಿತನ ಭಾವಚಿತ್ರಕ್ಕೆ ಹಾನಿ ಉಂಟು ಮಾಡಿದ್ದಾರೆಂಬ ಪ್ರತಿ ಆರೋಪ ಮಾಡಿದ್ದರು. ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿದ್ದ ಪೊಲೀಸರು ಸಂಪೂರ್ಣ ತನಿಖೆ ನಡೆಸಿದ್ದರು.
ತನಿಖೆ ವೇಳೆ ಸತ್ಯಾಂಶ ಬಯಲು: ತನಿಖೆಯ ವೇಳೆ ರಾಹುಲ್ ಗಾಂಧಿ ಅವರ ಪಿಎ ರತೀಶ್ ಕುಮಾರ್, ಸಂಸದರ ಕಚೇರಿ ಸಿಬ್ಬಂದಿ, ರಾಹುಲ್ ಎಸ್ ರವಿ, ಕಾಂಗ್ರೆಸ್ ಕಾರ್ಯಕರ್ತರಾದ ನೌಶಾದ್ ಮತ್ತು ಮುಜೀಬ್ ಅವರು ಭಾವಚಿತ್ರ ಧ್ವಂಸ ಮಾಡಿದ್ದು ದೃಢಗೊಂಡಿದೆ. ಇದೀಗ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಕಾಂಗ್ರೆಸ್ ಕಾರ್ಯಕರ್ತ ರತೀಶ್ ಖುದ್ದಾಗಿ ಸಾಕ್ಷಿ ನುಡಿದಿದ್ದಾರೆ.
ಎಸ್‌ಎಫ್‌ಐ ಕಾರ್ಯಕರ್ತರು ಕಚೇರಿ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಗಾಂಧೀಜಿ ಅವರ ಭಾವಚಿತ್ರಕ್ಕೆ ಯಾವುದೇ ರೀತಿಯ ಹಾನಿಯಾಗಿರಲಿಲ್ಲ. ವೈರಲ್ ಆಗಿರುವ ವಿಡಿಯೋದಲ್ಲೂ ಇದು ಸ್ಪಷ್ಟವಾಗಿ ಗೋಚರಿಸಿದೆ. ಆದರೆ, ಕಾಂಗ್ರೆಸ್‌ನ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ಈ ವಿಚಾರವನ್ನಿಟ್ಟುಕೊಂಡು ವ್ಯಾಪಕವಾಗಿ ಪ್ರಚಾರ ಮಾಡಿತ್ತು. ಮಹಾತ್ಮ ಗಾಂಧಿ ಅವರ ಭಾವಚಿತ್ರಕ್ಕೆ ಎಸ್‌ಎಫ್‌ಐ ಹಾನಿ ಉಂಟು ಮಾಡಿದೆ ಎಂಬ ಆರೋಪ ಮಾಡಿದ್ದರು.
ಇದನ್ನೂ ಓದಿ: ವಯನಾಡ್ನ ರಾಹುಲ್ ಗಾಂಧಿ ಕಚೇರಿಗೆ ನುಗ್ಗಿ ಎಸ್‌ಎಫ್‌ಐ ಕಾರ್ಯಕರ್ತರ ದಾಂಧಲೆ
ಈ ಪ್ರಕರಣದಲ್ಲಿ ಎಸ್ಎಪ್ಐನ 29 ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, "ನಾವು ಇಂತಹ ಹಿಂಸಾಚಾರಕ್ಕೆ ಕರೆ ನೀಡಿರಲಿಲ್ಲ. ಜಿಲ್ಲಾ ಸಮಿತಿ ಅನುಮತಿ ಇಲ್ಲದೇ ಎಸ್‌ಎಫ್‌ಐ ಕಾರ್ಯಕರ್ತರು ಮೆರವಣಿಗೆ ನಡೆಸಿದ್ದರು" ಎಂದು ತಿಳಿಸಿದ್ದರು.
ರಾಹುಲ್ ವಿರುದ್ಧ ಪ್ರತಿಭಟನೆಗೆ ಕಾರಣವೇನು? ಕಳೆದ ಬಾರಿ ಲೋಕಸಭೆ ಚುನಾವಣೆಯಲ್ಲಿ ವಯನಾಡು ಸಂಸದೀಯ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಗೆದ್ದಿದ್ದ ರಾಹುಲ್ ಗಾಂಧಿ, ಪರಿಸರ ಸೂಕ್ಷ್ಮ ವಲಯ ಸಂಬಂಧ ಮಧ್ಯಪ್ರವೇಶ ಮಾಡುತ್ತಿಲ್ಲ ಎಂದು ಆರೋಪಿಸಿ ಎಸ್‌ಎಫ್‌ಐ ಕಾರ್ಯಕರ್ತರು ಕಚೇರಿಗೆ ನುಗ್ಗಿ ಗಲಾಟೆ ಮಾಡಿದ್ದರು.