ನವದೆಹಲಿ: ಕಳೆದ ಎರಡು ದಿನಗಳ ಹಿಂದೆ ಪಂಜಾಬ್ನ ಫಿರೋಜ್ಪುರ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಭದ್ರತಾ ಲೋಪ ಎದುರಿಸಿದ್ದು, ಈ ವಿಚಾರವಾಗಿ ಇದೀಗ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟ್ವೀಟ್ ಮಾಡುವ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
ದೇಶದ ಗಡಿಯಲ್ಲಿ ನಡೆಯುತ್ತಿರುವ ಅತಿದೊಡ್ಡ ರಾಷ್ಟ್ರೀಯ ಭದ್ರತಾ ಲೋಪದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಾತನಾಡುವರೇ? ಎಂದು ಟ್ವೀಟ್ ಮಾಡಿದ್ದಾರೆ.
-
What has been happening at our borders is a major lapse of national security.
— Rahul Gandhi (@RahulGandhi) January 7, 2022 " class="align-text-top noRightClick twitterSection" data="
Will the PM ever talk about it?#PangongTso #China
">What has been happening at our borders is a major lapse of national security.
— Rahul Gandhi (@RahulGandhi) January 7, 2022
Will the PM ever talk about it?#PangongTso #ChinaWhat has been happening at our borders is a major lapse of national security.
— Rahul Gandhi (@RahulGandhi) January 7, 2022
Will the PM ever talk about it?#PangongTso #China
ಹಿಮಾಚಲ ಪ್ರದೇಶದಲ್ಲಿ ಚೀನಾ ಯೋಧರು ಭಾರತದ ಗಡಿಯಲ್ಲಿ ಟೆಂಟ್ ನಿರ್ಮಾಣ ಮಾಡಿರುವ ವಿಚಾರ ಹಾಗು ಜನವರಿ 1ರಂದು ಗಡಿಯೊಳಗೆ ನುಗ್ಗಿ ತಮ್ಮ ದೇಶದ ಧ್ವಜ ಹಾರಿಸಿರುವ ವಿಷಯಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಕಳೆದ ಕೆಲ ದಿನಗಳ ಹಿಂದೆ ಟ್ವೀಟ್ ಮಾಡಿ ಕೇಂದ್ರ ಸರ್ಕಾರವನ್ನು ಟೀಕಿಸಿದ್ದರು.
ಇದನ್ನೂ ಓದಿ: 'ಕೇಂದ್ರದ ಗಿಣಿ': ಕ್ಯಾ.ಅಮರೀಂದರ್ ವಿರುದ್ಧ ಸಿಧು ವಾಗ್ದಾಳಿ
ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ವಿದೇಶಾಂಗ ವ್ಯವಹಾರಗಳ ವಕ್ತಾರರು, ರಾಷ್ಟ್ರೀಯ ಭದ್ರತೆ ವಿಷಯದಲ್ಲಿ ಬೇಕಾದ ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಪಷ್ಟನೆ ನೀಡಿದ್ದರು.