ETV Bharat / bharat

ರಾಹುಲ್ ಗಾಂಧಿಗೆ ಒಂದು ವಾರ ಆಯುರ್ವೇದ ಚಿಕಿತ್ಸೆ..! ಏನಿದು ಕರ್ಕಿಡಕ ಟ್ರೀಟ್​​​​​​​ಮೆಂಟ್​? - ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್

ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ತೀವ್ರ ಮಂಡಿ ನೋವಿನಿಂದ ಬಳಲುತ್ತಿದ್ದಾರೆ. ಕೊಟ್ಟಕ್ಕಲ್ ಆರ್ಯ ವೈದ್ಯ ಶಾಲೆಯಲ್ಲಿ ರಾಹುಲ್ ಗಾಂಧಿ ಆಯುರ್ವೇದ ಚಿಕಿತ್ಸೆ ಪಡೆಯಲಿದ್ದಾರೆ. ಈ ವೇಳೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಕೂಡ ಜೊತೆಗಿರಲಿದ್ದಾರೆ.

Rahul Gandhi
ರಾಹುಲ್ ಗಾಂಧಿ
author img

By

Published : Jul 21, 2023, 6:02 PM IST

ಮಲಪ್ಪುರಂ (ಕೇರಳ): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಶುಕ್ರವಾರ ಕೊಟ್ಟಕ್ಕಲ್ ಆರ್ಯ ವೈದ್ಯ ಶಾಲೆಯಲ್ಲಿ ಆಯುರ್ವೇದ ಚಿಕಿತ್ಸೆ ಪಡೆಯಲಿದ್ದಾರೆ. ರಾಹುಲ್ ಗಾಂಧಿ ತೀವ್ರ ಮೊಣಕಾಲು ನೋವಿನಿಂದ ಬಳಲುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮ್ಯಾನೇಜಿಂಗ್ ಟ್ರಸ್ಟಿ ಪಿ.ಎಂ. ಮಾಧವನ್ ಕುಟ್ಟಿ ವಾರಿಯರ್ ಅವರ ನೇತೃತ್ವದಲ್ಲಿ ಒಂದು ವಾರದವರೆಗೆ ಅವರ ಚಿಕಿತ್ಸೆ ನಡೆಯಲಿದೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನಾ ಪ್ರಭಾರಿ) ಕೆ.ಸಿ. ವೇಣುಗೋಪಾಲ್ ಅವರೊಂದಿಗೆ ಆಗಮಿಸಲಿದ್ದಾರೆ. ರಾಹುಲ್ ಗಾಂಧಿ ಜುಲೈ 29 ರವರೆಗೆ ಆರ್ಯ ವೈದ್ಯಶಾಲೆಯಲ್ಲಿ ಉಳಿಯುವ ನಿರೀಕ್ಷೆಯಿದೆ. ಇನ್ನೆರಡು ದಿನಗಳಲ್ಲಿ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ಕೂಡ ಚಿಕಿತ್ಸೆಗೆ ಬರಲಿದ್ದಾರೆ ಎಂಬ ವರದಿಗಳಿವೆ. ಕೇರಳದ ದಿವಂಗತ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಉಮ್ಮನ್ ಚಾಂಡಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ರಾಹುಲ್ ಗಾಂಧಿ ನಿನ್ನೆ ಕೇರಳಕ್ಕೆ ಆಗಮಿಸಿದ್ದರು.

ಇಂದು ಶುಕ್ರವಾರ ಬೆಳಗ್ಗೆ ಕೇರಳ ತಲುಪಿದ ರಾಹುಲ್ ಗಾಂಧಿ ಅವರು, ಚಿಕಿತ್ಸೆಗಾಗಿ ಸಂಜೆ ಕೊಟ್ಟಕ್ಕಲ್ ತಲುಪಲಿದ್ದಾರೆ ಎಂಬ ಮಾಹಿತಿಯಿದೆ. ಆದರೆ, ಅಂತ್ಯಕ್ರಿಯೆ ವಿಳಂಬವಾದ ಕಾರಣ ನಿನ್ನೆ ಕೊಟ್ಟಕ್ಕಲ್ ತಲುಪಲು ಸಾಧ್ಯವಾಗಲಿಲ್ಲ. ಶುಕ್ರವಾರ ಮುಂಜಾನೆ ಅಂತ್ಯಕ್ರಿಯೆ ನಡೆಯಿತು. ಪುತ್ತುಪಲ್ಲಿಯ ಸೇಂಟ್ ಜಾರ್ಜ್ ಗ್ರ್ಯಾಂಡ್ ಮಸೀದಿಯಲ್ಲಿ ರಾಹುಲ್ ಗಾಂಧಿ ಅವರು ಶ್ರದ್ಧಾಂಜಲಿ ಸಲ್ಲಿಸಿದರು. ಅಲ್ಲಿ ಅಂತಿಮ ವಿಧಿವಿಧಾನಗಳು ನಡೆದವು.

ಕೊಟ್ಟಕ್ಕಲ್ ಆರ್ಯವೈದ್ಯ ಶಾಲೆ: ಕೊಟ್ಟಕ್ಕಲ್ ಆರ್ಯವೈದ್ಯ ಶಾಲೆಯು ಶತಮಾನದಷ್ಟು ಹಳೆಯದಾದ ಸಂಸ್ಥೆಯಾಗಿದ್ದು, ಆಯುರ್ವೇದ ಚಿಕಿತ್ಸೆಯಲ್ಲಿ ಪ್ರಚಂಡ ಇತಿಹಾಸ ಸೃಷ್ಟಿಸಿದೆ. ಇದು ರೋಗಿಗಳಿಗೆ ಶಾಸ್ತ್ರೀಯ ಆಯುರ್ವೇದ ಔಷಧಗಳು ಮತ್ತು ಚಿಕಿತ್ಸೆಗಳು ಮತ್ತು ಪರಿಹಾರಗಳನ್ನು ಒದಗಿಸುತ್ತದೆ. 116 ವರ್ಷ ಹಳೆಯದಾದ ಈ ಸಂಸ್ಥೆಯಲ್ಲಿ ವಿದೇಶದಿಂದ ಬಂದವರೂ ಚಿಕಿತ್ಸೆ ಪಡೆಯುತ್ತಾರೆ. ಇದಕ್ಕೂ ಮುನ್ನ ಭಾರತ್ ಜೋಡೋ ಯಾತ್ರೆ ವೇಳೆ ರಾಹುಲ್ ತಮ್ಮ ಮೊಣಕಾಲಿನಲ್ಲಿ ತೀವ್ರ ನೋವಿದೆ ಎಂದು ಬಹಿರಂಗಪಡಿಸಿದ್ದರು. ರಾಹುಲ್ ಯಾವುದೇ ನಿರ್ದಿಷ್ಟ ಆರೋಗ್ಯ ಸಮಸ್ಯೆಗೆ ಚಿಕಿತ್ಸೆಯನ್ನು ಪ್ರಾರಂಭಿಸುತ್ತಾರೆಯೇ ಅಥವಾ ಇಲ್ಲವೇ ಎಂಬುದು ಸ್ಪಷ್ಟವಾಗಿಲ್ಲ.

ಕರ್ಕಿಡಕ ಚಿಕಿತ್ಸೆ: ಕರ್ಕಿಡಕ ಚಿಕಿತ್ಸೆಯು ಒಂದು ಪ್ರಮುಖ ಗುಣಪಡಿಸುವ ವ್ಯವಸ್ಥೆಯಾಗಿದ್ದು, ಇದನ್ನು ಅನೇಕ ಜನರು ಅನುಸರಿಸುತ್ತಾರೆ. ಕಡಕಡಕಂ ಎಂಬುದು ಮಲಯಾಳಂ ಕ್ಯಾಲೆಂಡರ್ ಪ್ರಕಾರ ಒಂದು ತಿಂಗಳು ಮತ್ತು ದೇಹವನ್ನು ಪುನಃ ಶಕ್ತಿಯುತಗೊಳಿಸಲು ಮತ್ತು ಪುನರುಜ್ಜೀವನಗೊಳಿಸಲು ಆಯುರ್ವೇದ ಚಿಕಿತ್ಸೆಗಳಿಗೆ ಸೂಕ್ತ ಅವಧಿ ಎಂದು ಪರಿಗಣಿಸಲಾಗಿದೆ. ಈ ಚಿಕಿತ್ಸಾ ವಿಧಾನವನ್ನು ಮಾನ್ಸೂನ್ (ಮಳೆಗಾಲ) ಸಮಯದಲ್ಲಿ ಅಳವಡಿಸಿಕೊಳ್ಳಲಾಗುತ್ತದೆ. ಏಕೆಂದರೆ ಆಯುರ್ವೇದ ಹೇಳುವಂತೆ, ಈ ಅವಧಿಯಲ್ಲಿ ವ್ಯಕ್ತಿಗಳ ಆರೋಗ್ಯವು ಇತರ ಋತುಗಳಿಗೆ ಹೋಲಿಸಿದರೆ ಕಡಿಮೆ ಇರುತ್ತದೆ.

ಇದನ್ನೂ ಓದಿ: 81ನೇ ವಸಂತಕ್ಕೆ ಕಾಲಿಟ್ಟ ಮಲ್ಲಿಕಾರ್ಜುನ ಖರ್ಗೆ: ಪ್ರಧಾನಿ ಮೋದಿ ಸೇರಿ ಗಣ್ಯರಿಂದ ಶುಭಾಶಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.